ಮಾಜಿ ಸಂಸದ, ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಧ್ರುವನಾರಾಯಣ ವಿಧಿವಶ

Mysore : ಕಾಂಗ್ರೆಸ್‌ (Congress) ಕಾರ್ಯಾಧ್ಯಕ್ಷ ಮತ್ತು ಚಾಮರಾಜನಗರದ ಮಾಜಿ ಸಂಸದ ಆರ್. ಧ್ರುವನಾರಾಯಣ (R.Dhruvanarayana) ಅವರು ದಿಢೀರ್‌ ಹೃದಯಾಘಾತದಿಂದ ಇಂದು ಬೆಳಿಗ್ಗೆ ಮೈಸೂರಿನ (Dhruvanarayana passed away) ಅಪೋಲೊ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ರಂಗಸ್ವಾಮಿ ಧ್ರುವನಾರಾಯಣ ಅವರು ಚಾಮರಾಜನಗರ (Chamarajanagar) ಜಿಲ್ಲೆಯ ಹಗ್ಗವಾಡಿ ಗ್ರಾಮದಲ್ಲಿ 1961ರಲ್ಲಿ ಜನಿಸಿದ್ದರು.

ಅವರು ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು. ಧ್ರುವನಾರಾಯಣ ಅವರು ವಿದ್ಯಾರ್ಥಿ ನಾಯಕರಾಗಿ (Dhruvanarayana passed away) ರಾಜಕೀಯ ಪಯಣ ಆರಂಭಿಸಿದ್ದರು.

1983ರಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಕಾಂಗ್ರೆಸ್ ಸೇರಿದರು. 1984ರಲ್ಲಿ, ಅವರು ಬೆಂಗಳೂರಿನ ಹೆಬ್ಬಾಳದ ಕೃಷಿ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು.

ಅದೇ ವರ್ಷದಲ್ಲಿ, ಅವರು ಬೆಂಗಳೂರು ನಗರದ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರೂ ಆಗಿದ್ದರು.

1986 ರಲ್ಲಿ ಅವರು ಕರ್ನಾಟಕ ರಾಜ್ಯ (Karnataka State) ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : https://vijayatimes.com/cottage-cheese-benefits/

ಧ್ರುವನಾರಾಯಣ ಅವರು 1999ರಲ್ಲಿ ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲಿ (Assembly election) ಸಂತೇರ್ಮರಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು.

2004ರಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಒಂದೇ ಮತದ ಅಂತರದಿಂದ ಜೆಡಿಎಸ್ (JDS) ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ವಿರುದ್ದ ಗೆದ್ದರು. 2008ರಲ್ಲಿ ಕೊಳ್ಳೇಗಾಲ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ 11,800 ಮತಗಳ ಅಂತರದಿಂದ ಗೆದ್ದಿದ್ದರು.

ಇದಾದ ಬಳಿಕ ಧ್ರುವನಾರಾಯಣ ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ( Lok Sabha) ಸ್ಪರ್ಧಿಸಿ 15ನೇ ಲೋಕಸಭೆಗೆ ಆಯ್ಕೆಯಾದರು.

ನಂತರ 2014ರಲ್ಲಿ ಮತ್ತೊಮ್ಮೆ ಗೆಲ್ಲುವ ಮೂಲಕ 16ನೇ ಲೋಕಸಭೆಗೆ 1,41,182 ಮತಗಳ ಅಂತರದಿಂದ ಗೆದ್ದು ಸಂಸದರಾಗಿ ಆಯ್ಕೆಯಾದರು. ಆದರೆ 2019ರಲ್ಲಿ,

ಇದನ್ನೂ ಓದಿ : https://vijayatimes.com/high-court-important-order/

ಧ್ರುವನಾರಾಯಣ ಅವರು ಶ್ರೀನಿವಾಸ ಪ್ರಸಾದ್ ವಿರುದ್ಧ 17ನೇ ಲೋಕಸಭೆ ಚುನಾವಣೆಯಲ್ಲಿ 12,716 ಮತಗಳಿಂದ ಸೋತರು.

ಇದಾದ ಬಳಿಕ ಅವರು ರಾಜ್ಯ ರಾಜಕೀಯ ಪ್ರವೇಶಿಸುವ ಉದ್ದೇಶದಿಂದ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯರಾಗಿದ್ದರು.

ಸದ್ಯ ಕಾಂಗ್ರೆಸ್‌ ಕಾರ್ಯಾಧ್ಯಕ್ಷರಾಗಿದ್ದ ಧ್ರುವನಾರಾಯಣ ಅವರು ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದರು.

ಗಡಿಜಿಲ್ಲೆ ಚಾಮರಾಜನಗರ ಭಾಗದ ಪ್ರಬಲ ದಲಿತ ನಾಯಕರಾಗಿದ್ದ ಧ್ರುವನಾರಾಯಣ ಅವರು ಈ ಭಾಗದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಪ್ರಬಲ ಶಕ್ತಿಯಾಗಿದ್ದರು.

ಇದೀಗ ಧ್ರುವನಾರಾಯಣ ಅವರ ನಿಧನದಿಂದಾಗಿ ಕಾಂಗ್ರೆಸ್‌ ಪಕ್ಷ ಚಾಮಾರಾಜನಗರದಲ್ಲಿ ಪ್ರಬಲ ಶಕ್ತಿಯೊಂದನ್ನು ಕಳೆದುಕೊಂಡಿದೆ.

Exit mobile version