ವಾಣಿಜ್ಯ LPG ಗ್ಯಾಸ್ ಬೆಲೆ ಏರಿಕೆಯ ಬೆನ್ನಲ್ಲೇ ಈಗ ಗೃಹಬಳಕೆ ಗ್ಯಾಸ್ ಬೆಲೆಯಲ್ಲಿ 50 ರೂ. ಹೆಚ್ಚಳ!

ಇಂದಿನಿಂದ ಜಾರಿಗೆ ಬರುವಂತೆ 14.2 ಕೆಜಿ ಗೃಹಬಳಕೆಯ(Domestic) ಅನಿಲ (ಎಲ್‌ಪಿಜಿ) ಸಿಲಿಂಡರ್‌ನ(LPG Cylinder) ಬೆಲೆ 50 ರೂ. ಏರಿಕೆಯಾಗಿದೆ.

ಇತ್ತೀಚಿನ ಪರಿಷ್ಕರಣೆಯೊಂದಿಗೆ, ಇಂದಿನಿಂದ ಗೃಹಬಳಕೆಯ ಸಿಲಿಂಡರ್‌ನ ಬೆಲೆ ₹999.50/ ಸಿಲಿಂಡರ್. ಈ ತಿಂಗಳ ಆರಂಭದಲ್ಲಿ, 19 ಕೆಜಿ ವಾಣಿಜ್ಯ(Commercial) ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಮೇ 1 ರಂದು ದೆಹಲಿಯಲ್ಲಿ 102 ರೂ. ರಿಂದ 2,355.5 ರೂ.ಗಳಿಗೆ ಹೆಚ್ಚಿಸಲಾಯಿತು. 5 ಕೆಜಿ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ನ ಬೆಲೆಯೂ 655 ರೂ.ಗೆ ಏರಿಕೆಯಾಗಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ನಂತರ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೆಲೆಗಳನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದೆ.

ಮಾರ್ಚ್ 22 ರಂದು ಸಬ್ಸಿಡಿ ಹೊಂದಿರುವ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನಲ್ಲಿ 50 ರೂ. ಏರಿಕೆ ಮಾಡಲಾಗಿದೆ. ಮೊದಲು, 6 ಅಕ್ಟೋಬರ್ 2021ರ ನಂತರ, ಗೃಹಬಳಕೆಯ LPG ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಸ್ಥಳೀಯ ತೆರಿಗೆಗಳಿಂದಾಗಿ ದೇಶೀಯ ಅಡುಗೆ ಅನಿಲದ ಬೆಲೆಗಳು ಒಂದು ರಾಜ್ಯದಿಂದ ಇನ್ನೊಂದಕ್ಕೆ ಬದಲಾಗುತ್ತವೆ. ಇಂಧನ ಚಿಲ್ಲರೆ ವ್ಯಾಪಾರಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ತಿಂಗಳ ಆರಂಭದಲ್ಲಿ ಪರಿಷ್ಕರಿಸುತ್ತಾರೆ. ಪ್ರತಿ ಕುಟುಂಬವು ಒಂದು ವರ್ಷದಲ್ಲಿ ಸಬ್ಸಿಡಿ ದರದಲ್ಲಿ ತಲಾ 14.2 ಕೆಜಿಯ 12 ಸಿಲಿಂಡರ್‌ಗಳಿಗೆ ಅರ್ಹವಾಗಿದೆ.

ಪಹಲ್ (ಎಲ್‌ಪಿಜಿ ನೇರ ಲಾಭ ವರ್ಗಾವಣೆ) ಯೋಜನೆಯಡಿ, ಗ್ರಾಹಕರು ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪಡೆಯುತ್ತಾರೆ. ಒಟ್ಟಾರೆ ಮೊನ್ನೆಯಷ್ಟೇ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 102.50 ರೂ. ಹೆಚ್ಚಳ ಮಾಡಿತ್ತು, ಈಗ ಗೃಹಬಳಕೆಯ ಸಿಲಿಂಡರ್ ಮೇಲೆ ಮತ್ತೊಮ್ಮೆ 50 ರೂ. ಹೆಚ್ಚಳ ಮಾಡಿರುವುದು ನಿಜಕ್ಕೂ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿದೆ!

Exit mobile version