ದೇಶದ ಗೋದಾಮಿನಲ್ಲಿ ಅಕ್ಕಿ ಕೊಳೆಯುತ್ತಿದೆ, ದುಡ್ಡು ಕೊಡುತ್ತೇವೆ ಅಂದ್ರೂ ಕೇಂದ್ರ ಅಕ್ಕಿ ಕೊಡ್ತಿಲ್ಲ : ಡಾ.ಜಿ.ಪರಮೇಶ್ವರ್

Tumkur : ನಮ್ಮ ದೇಶದ ಗೋದಾಮಿನಲ್ಲಿ ಬೇಕಾದಷ್ಟು ಅಕ್ಕಿ ಕೊಳೆಯುತ್ತಿದೆ, ಆದರೆ ಕೇಂದ್ರ ಸರ್ಕಾರವು (DrG Parameshwar new statement) ರಾಜಕೀಯ ಕಾರಣಕ್ಕಾಗಿ ನಮಗೆ ಅಕ್ಕಿ ಕೊಡ್ತಿಲ್ಲ,

ನಾವು ದುಡ್ಡು ಕೊಡ್ತೀವಿ ಎಂದರೂ ಕೂಡ ಕೇಂದ್ರ ಅಕ್ಕಿ ಕೊಡುತ್ತಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (Dr.G.Parameshwar) ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ಈ ಬಗ್ಗೆ ಸಚಿವ ಡಾ.ಜಿ.ಪರಮೇಶ್ವರ್ ತುಮಕೂರಿನ (Tumkur) ಕೊರಟಗೆರೆಯಲ್ಲಿ ಮಾತನಾಡಿ ಇನ್ನೈದು ಕೆಜಿಗೆ ಹಣ ಕೊಡುತ್ತೇವೆ,ಮತ್ತು 5 ಕೆಜಿ ಅಕ್ಕಿ ಕೊಡ್ತೀವಿ.. ಕೇವಲ 3 ತಿಂಗಳು ಮಾತ್ರ ಹಣ ಕೊಡುತ್ತೇವೆ

ಅಷ್ಟರೊಳಗೆ ಎಲ್ಲಿಂದಾದರೂ ಅಕ್ಕಿ ಹೊಂದಿಸುತ್ತೇವೆ. ನಾವು ಮಾತಿಗೆ ತಪ್ಪಲ್ಲ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ ಎಂದಿದ್ದಾರೆ. ಬಡವರ ಹಸಿವಿನಲ್ಲಿ ಯಾವತ್ತೂ ರಾಜಕೀಯ ಮಾಡಬಾರದು,

ಇದರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ(DrG Parameshwar new statement) ನಾಯಕರಿಗೆ ಇಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ

ಕೊರಟಗೆರೆಯಲ್ಲಿ ಬಕ್ರೀದ್ (Bakrid)ಆಚರಣೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮುಸ್ಲಿಂ (Muslim) ಮುಖಂಡರೊಂದಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ರು. ಮುಸ್ಲಿಂ ಬಾಂಧವರಿಗೆ ಹಬ್ಬದ

ಶುಭಾಶಯ ತಿಳಿಸಿ ಈ ವೇಳೆ ಮಾತನಾಡಿ ಇಡೀ ವಿಶ್ವಕ್ಕೆ ಸಂದೇಶ ಕೊಡುವ ಹಬ್ಬ ಬಕ್ರೀದ್ ಎಂದಿದ್ಧಾರೆ.

ಇನ್ನೂ ಕಾಂಗ್ರೆಸ್ ಗೆ(Congress) ಈ ಬಾರಿಯ ಚುನಾವಣೆಯಲ್ಲಿ (Election) ಮುಸ್ಲಿಂ ಬಾಂಧವರ ಬಹುಪಾಲು ಮತ ವಿಚಾರದ ಬಗ್ಗೆ ಇದೇ ವೇಳೆ ಮಾತನಾಡಿ ಮುಸ್ಲಿಂರಿಗೆ ಎಲ್ಲೋ ಒಂದು ಕಡೆ ಹಿಂದಿನ

ಸರ್ಕಾರದಿಂದ ಆತಂಕ ಇತ್ತು, ಭಯದ ವಾತಾವರಣ ಕೂಡ ತುಂಬಾ ಇತ್ತು.ಹಾಗಾಗಿ ಈಗ ಅದೆಲ್ಲವನ್ನೂ ಬಿಟ್ಟು ಕಾಂಗ್ರೆಸ್ ಸರ್ಕಾರಕ್ಕೆ ಗೆ ಮತ ಹಾಕಿದ್ದಾರೆ.

ಇದನ್ನೂ ಓದಿ : ಕನಿಷ್ಠ 7 ಭಾರತೀಯ ಕೆಮ್ಮು ಸಿರಪ್ ಗಳು ವಿಷಕಾರಿಯಾಗಿವೆ : ವಿಶ್ವ ಆರೋಗ್ಯ ಸಂಸ್ಥೆ

ಕಾಂಗ್ರೆಸ್ ಜ್ಯಾತ್ಯಾತೀತವಾದ ಪಕ್ಷವಾಗಿದೆ. ಹಾಗಾಗಿ ಮಾತ್ರ ಅವರು ನಮ್ಮ ಜೊತೆ ನಿಂತಿದ್ದಾರೆ,ಅವರಿಗೆ ನಾವು ಯಾವತ್ತೂ ಕೃತಜ್ಞತೆ ಸಲ್ಲಿಸುತ್ತೇನೆ. ಸದ್ಯ ನಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ.

ಅಭಿವೃದ್ಧಿ ಜೊತೆಗೆ ಶಾಂತಿಯನ್ನು ಸಹ ಕಾಪಡಬೇಕಿದೆ. ಗೃಹ ಸಚಿವನಾಗಿ (Home Minister) ಯಾವತ್ತೂ ದ್ವೇಷ ಸಾಧಿಸಲು ಹೋಗೋದಿಲ್ಲ, ಶಾಂತಿ ಕಾಪಾಡುತ್ತೇನೆಂದು ಹೇಳಿದ್ಧಾರೆ.

ರಶ್ಮಿತಾ ಅನೀಶ್

Exit mobile version