ಟರ್ಕಿ , ಸಿರಿಯಾದಲ್ಲಿ ಭಾರೀ ಭೂಕಂಪಕ್ಕೆ 4,300ಕ್ಕೂ ಅಧಿಕ ಬಲಿ ! ಭಾರತದಿಂದ ಸಹಾಯ ಹಸ್ತ

Turkey: ಸೋಮವಾರ ಮುಂಜಾನೆ 4.17 ರಲ್ಲಿ ಟರ್ಕಿಯ (Earthquake in Turkey Syria) ಪ್ರಮುಖ ನಗರವಾದ ಗಾಜಿಯಾಂಟೆಪ್‌ನಿಂದ 33 ಕಿಲೋ ಮೀಟರ್‌ ದೂರದಲ್ಲಿ 7.8 ತೀವ್ರತೆಯಲ್ಲಿ ಸಂಭವಿಸಿದ ಭೂಕಂಪಕ್ಕೆ 4300 ಮಂದಿ ಸಾವನ್ನಪ್ಪಿದ್ದಾರೆ.

ತೀವ್ರ ಭೂಕಂಪನಕ್ಕೆ ಅನೇಕ ಕಟ್ಟಡಗಳು ಕುಸಿದಿದ್ದು, ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ. ಇದಾದ (Earthquake in Turkey Syria) ಕೆಲವೇ ಕ್ಷಣಗಳಲ್ಲಿ 7.5 ತೀವ್ರತೆಯಲ್ಲಿ ಮತ್ತೆ ನೆರೆಯ ದೇಶವಾದ ಸಿರಿಯಾದಲ್ಲೂ(Syria) ಭೂಕಂಪವುಂಟಾಗಿದೆ.

ಕೊಲೆ, ಹಿಂಸಾಚಾರ ಮತ್ತು ತಾರತಮ್ಯವನ್ನು ಬೆಂಬಲಿಸುವುದೇ ಹಿಂದುತ್ವ : ಸಿದ್ದರಾಮಯ್ಯ

ಟರ್ಕಿಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿ ಪ್ರಕಾರ ಈವರೆಗೆ 15,834 ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳಡಿ ಸಿಲುಕಿದ್ದ ಸುಮಾರು 7,840 ಮಂದಿಯನ್ನು ರಕ್ಷಿಸಲಾಗಿದೆ.

ಭೂಕಂಪದ ತೀವ್ರತೆಯಿಂದ ಇನ್ನಷ್ಟು ಸಾವು ನೋವು ಹೆಚ್ಚಾಗುವ ಸಾಧ್ಯತೆ ಇದೆ, ದೊಡ್ಡ ದೊಡ್ಡ ಕಟ್ಟಡಗಳು ಕುಸಿದಿರುವ ಕಾರಣ ಗಾಯಾಳುಗಳ ಸಂಖ್ಯೆಯೂ ಹೆಚ್ಚಾಗುವ ಭೀತಿ ಹೆಚ್ಚಾಗಿದೆ.

ಭೂಕಂಪದಿಂದ ರಕ್ಷಿಸುವ ಕಾರ್ಯದಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತಿದೆ. ಸಹಾಯ ಹಸ್ತ ಚಾಚುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರು(Narendra Modi), ಮೃತರ ಕುತುಂಬಗಳಿಗೆ ಸಂತಾಪ ಸೂಚಿಸಿದ್ದಾರೆ ಹಾಗೂ ಗಾಯಾಳುಗಳು ಆದಷ್ಟು ಬೇಗ ಗುಣಮುಖರಾಗಲಿ,ಎಂದು ಹಾರೈಸಿದ್ದಾರೆ.

Exit mobile version