ಬೆಳೆ ವಿಮೆ ಗೋಲ್‌ಮಾಲ್‌ ! ರೈತ ಬೆಳೆಗೆ ಖರ್ಚು ಮಾಡಿದ್ದು 15 ಸಾವಿರ ಆದರೆ ವಿಮೆ ಸಿಕ್ಕಿದ್ದು ಕೇವಲ 960ರೂ!

Yadgiri (ಜು.2): ಒಂದು ಎಕರೆ ಹತ್ತಿ ಬಿತ್ತನೆಗೆ 15 ಸಾವಿರ ಖರ್ಚಾದರೂ ಬೆಳೆ ವಿಮೆಯನ್ನು(Farmers Crop insurance Golmaal) ಮಾಡಿಸಿದ ರೈತರಿಗೆ ಕೇವಲ 960 ರೂಪಾಯಿ ಪರಿಹಾರ ದೊರಕಿದೆ !

ಬೆಳೆ ವಿಮೆ ಪರಿಹಾರ ನೀಡುವಲ್ಲಿ ವಿಮಾ ಕಂಪನಿಗಳ (Insurance Company) ಈ ರೀತಿಯ ಅವೈಜ್ಞಾನಿಕ ನಿರ್ಧಾರಗಳಿಂದಾಗಿ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ

(Pradhan Mantri Fasal Bima Yojana) ಲಾಭ ಪಡೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ.

ಯಾದಗಿರಿ(Yadagiri) ಜಿಲ್ಲೆಯ ವಡಗೇರಾ ತಾಲೂಕಿನ ರೈತ ಶರಣಬಸವ (Sharana Basava) ಕಳೆದ ಬಾರಿ ತಮ್ಮ ಒಂದು ಎಕರೆ ಹತ್ತಿ ಬೆಳೆಗೆ ವಿಮೆ ಮಾಡಿಸಿದ್ದರು. ಇದಕ್ಕಾಗಿ, ಅವರು 870

(ಕಂತುಗಳಲ್ಲಿ) ಪ್ರೀಮಿಯಂ(Premium) ಅನ್ನು ಸಹ ಪಾವತಿಸಿದ್ದಾರೆ. ಒಂದು ಎಕರೆ ಬಿತ್ತನೆಗೆ ಒಟ್ಟು 15,000 ರೂಪಾಯಿ ಖರ್ಚಾಗಿದೆ. ಆದರೆ, ಅತಿವೃಷ್ಟಿಯಿಂದ ಹತ್ತಿ ಬೆಳೆ ನಾಶವಾದಾಗ 17,402 ನಷ್ಟವಾಗಿದೆ

ಎಂದು ವಿಮೆಗಾರರು ಅಂದಾಜಿಸಿದ್ದಾರೆ. ಆದರೆ, ಪರಿಹಾರ ಬಂದಾಗ ಮಾತ್ರ (Farmers Crop insurance Golmaal) ರೈತರು ಬೆಚ್ಚಿಬಿದ್ದರು.

ರೂ 870 ಪ್ರೀಮಿಯಂ ಪಾವತಿಸಿದ ಶರಣ ಬಸವ ಅವರು ಬೆಳೆ ಪರಿಹಾರವಾಗಿ 960 ಮಾತ್ರ ಪಡೆದರು. ಇದರರ್ಥ ಅವರಿಗೆ ಪಾವತಿಸಿದ ಪ್ರೀಮಿಯಂಗಿಂತ ಕೇವಲ 110 ಹೆಚ್ಚು ಪರಿಹಾರ ನೀಡಲಾಗಿದೆ.

ವಿಮಾ ಕಂಪನಿಯವರನ್ನು ಸಂಪರ್ಕಿಸಿದರೆ ನಿಯಮಾನುಸಾರ ಸಮಜಾಯಿಷಿ ನೀಡಿ ಮುಂದಿನ ದಿನಗಳಲ್ಲಿ ನೋಡೋಣ ಎನ್ನುತ್ತಾರೆ.

ಅನೇಕ ರೈತರಿಗೆ ವಿಮೆ ಪರಿಹಾರದಲ್ಲಿ ಇಂತಹ ಅನೇಕ ಅನುಭವಗಳಾಗಿವೆ. ರೈತರಿಗೆ ಫಸಲ್‌ ಬೀಮಾ ಮೇಲಿನ ಭರವಸೆಯನ್ನೇ ವಿಮಾ ಕಂಪನಿಯ ಅಡ್ಡಾದಿಡ್ಡಿ ನಿಯಮಗಳು ಹಾಳುಗೆಡಹುವಂತೆ ಮಾಡಿದೆ.

ಕೃಷಿ ಇಲಾಖೆ ಅಧಿಕಾರಿಗಳು ಈ ಸಾಲಿನಲ್ಲಿ ಬೆಳೆ ವಿಮೆ ಮಾಡಿಸುವಂತೆ ರೈತರಿಗೆ ಮನವೊಲೈಸುವ ಯತ್ನಕ್ಕಿಳಿದಿದ್ದಾರಾದರೂ ರೈತರಲ್ಲಿ ಗೊಂದಲ ಇನ್ನೂ ಕೂಡ ಪರಿಹಾರವಾಗಿಲ್ಲ.

ಇದನ್ನೂ ಓದಿ : ಅಯ್ಯೋ ಕಂದಾ ! ಮೊಬೈಲ್‌ ಚಾರ್ಜರ್‌ ಬಾಯಿಗೆ ಹಾಕಿ 8 ತಿಂಗಳ ಮಗು ದಾರುಣ ಸಾವು

ಈ ಬಗ್ಗೆ ವಿಮೆ ಪ್ರತಿನಿಧಿ ಬನಶಂಕರ್‌(Banashankar), ಕೆಲವೊಮ್ಮೆರೈತರು ತಿಳಿಸುವಲ್ಲಿ ವಿಳಂಬವಾಗುತ್ತದೆ, ಹಾಗೂ ತಂತ್ರಾಂಶಗಳ ಆಧಾರದಲ್ಲಿ ಪಟ್ಟಿಜೋಡಿಸುವಿಕೆ ಗೊಂದಲದಿಂದ ಇನ್ನು ಕೆಲವೊಮ್ಮೆ

ಹಾನಿಯಾದ ವರದಿ ದಾಖಲಿಸುವಲ್ಲಿ ಹೀಗಾಗಿರುತ್ತದೆ ಎಂದು ಸ್ಪಷ್ಟನೆ ನೀಡಿದರು.

ಜಿಲ್ಲೆಯಲ್ಲಿ 13,810 ರೈತರು ಕಳೆದ ಮುಂಗಾರಿನಲ್ಲಿ ಒಟ್ಟು 2.10 ಲಕ್ಷ ರು.ಗಳ ಬೆಳೆ ವಿಮೆ ಮಾಡಿಸಿದ್ದರು.ಒಟ್ಟಾರೆ 3.69 ಲಕ್ಷ ರು. ಪರಿಹಾರ 7619 ರೈತರಿಗೆ ನೀಡಲಾಗಿತ್ತು.ಕೃಷಿ ಇಲಾಖೆ ಮೂಲಗಳು ಹೇಳಿರುವ

ಪ್ರಕಾರ ಈ ವರ್ಷ ರೈತರಿಗೆ ವಿಮೆ ಬಗ್ಗೆ ನಂಬಿಕೆ ಮೂಡುತ್ತಿಲ್ಲವಾದ್ದರಿಂದ ನೋಂದಣಿ ಕಡಮೆಯಾಗುವ ಸಾಧ್ಯತೆ ಇದೆಯೆಂದು ತಿಳಿಸಿವೆ.

ರಶ್ಮಿತಾ ಅನೀಶ್

Exit mobile version