ರಾಮ ಕೇವಲ ಹಿಂದೂಗಳಿಗೆ ಮಾತ್ರ ದೇವರಲ್ಲ : ಫಾರೂಕ್ ಅಬ್ದುಲ್ಲಾ

Jammu & Kashmir : ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ(Farooq Abdullah) ಅವರು ಭಗವಂತ ರಾಮ ಕೇವಲ ಹಿಂದೂಗಳ ದೇವರಲ್ಲ! ಬದಲಿಗೆ ಪ್ರತಿಯೊಬ್ಬರ ದೇವರು (Farooq Abdullah statement viral) ಎಂದು ನೀಡಿದ ಹೇಳಿಕೆ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಫಾರೂಕ್ ಅಬ್ದುಲ್ಲಾ ಅವರು, ಪಕ್ಷವು ಅಧಿಕಾರದಲ್ಲಿ ಉಳಿಯಲು ರಾಮನ ಹೆಸರನ್ನು ಮಾತ್ರ ಬಳಸಿಕೊಳ್ಳುತ್ತಿದೆ ಎಂದು ಹೇಳಿದರು.

ಗುರುವಾರ ಉಧಂಪುರದಲ್ಲಿ (Udhampur) ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಜಮ್ಮು ಮತ್ತು ಕಾಶ್ಮೀರದ (Jammu & Kashmir) ಮಾಜಿ ರಾಷ್ಟ್ರೀಯವಾದಿ ಕಾಂಗ್ರೆಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ,

ಭಗವಂತ ರಾಮ ಕೇವಲ ಹಿಂದೂಗಳ ದೇವರಲ್ಲ. ಧರ್ಮದ ಹೊರತಾಗಿ ತನ್ನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರ ಪ್ರಭು ಅವರು ಎಂದು ಹೇಳಿದರು.


ಭಗವಂತ ರಾಮ ಕೇವಲ ಹಿಂದೂಗಳ ದೇವರಲ್ಲ. ದಯವಿಟ್ಟು ನಿಮ್ಮ ಮನಸ್ಸಿನಿಂದ ಈ ಕಲ್ಪನೆಯನ್ನು ತೆಗೆದುಹಾಕಿ. ರಾಮ ದೇವರು ಪ್ರತಿಯೊಬ್ಬರ ದೇವರು.

https://youtu.be/ALd9zAJFhSA

ಅದು ಮುಸ್ಲಿಂ (Muslim) ಅಥವಾ ಕ್ರಿಶ್ಚಿಯನ್ (Christian) ಅಥವಾ ಅಮೇರಿಕನ್ ಅಥವಾ ರಷ್ಯನ್ ಆಗಿರಲಿ, ಅವನಲ್ಲಿ ನಂಬಿಕೆ ಇದೆ ಎಂದು ಅವರು ಪ್ಯಾಂಥರ್ಸ್ ಪಕ್ಷ ಆಯೋಜಿಸಿದ್ದ ರ್ಯಾಲಿಯಲ್ಲಿ ಮಾತನಾಡಿದರು.

ನಾವು ರಾಮನ ಶಿಷ್ಯರು ಮಾತ್ರ ಎಂದು ನಿಮ್ಮ ಬಳಿಗೆ ಬರುವವರು ಮೂರ್ಖರು, ಅವರು ರಾಮನ ಹೆಸರನ್ನು ಮಾರಾಟ ಮಾಡಲು ಬಯಸುತ್ತಾರೆ. ಅವರಿಗೆ ರಾಮನ ಮೇಲೆ ಪ್ರೀತಿ ಇಲ್ಲ,

ಆದರೆ ಅಧಿಕಾರದ ಮೇಲೆ ಮಾತ್ರ ಪ್ರೀತಿ ಇದೆ. ರಾಮನ ಹೆಸರನ್ನು ಹೇಳಿ ಚುನಾವಣೆ ಗೆಲ್ಲುತ್ತಿದ್ದಾರೆ. ರಾಮನ ಹೆಸರನ್ನು ಬಳಸಿ ಸಮಾಜವನ್ನು ಒಡೆಯುತ್ತಿದ್ದಾರೆ.

ಆ ಮೂಲಕ ರಾಮ ದೇವರ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿ ಹೇಳಿದರು.

ಜಮ್ಮು-ಕಾಶ್ಮೀರ ಚುನಾವಣೆ ಘೋಷಣೆಯಾದಾಗ ಅವರು ಸಾಮಾನ್ಯ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ರಾಮ ಮಂದಿರವನ್ನು ಉದ್ಘಾಟಿಸುತ್ತಾರೆ (Farooq Abdullah statement viral) ಎಂದು ನಾನು ಭಾವಿಸುತ್ತೇನೆ ಎಂದು ಅಬ್ದುಲ್ಲಾ(Abdullah) ಹೇಳಿದರು.

ಆದ್ದರಿಂದ, ಜನರ ನಡುವೆ ಹೋಗಿ ಅವರ ದ್ವೇಷದ ಪ್ರಚಾರವನ್ನು ನಿಲ್ಲಿಸುವಂತೆ ನಾನು ನಿಮಗೆ ಮನವಿ ಮಾಡುತ್ತೇನೆ ಎಂದು ಒತ್ತಿ ಹೇಳಿದರು.

ಈ ಹಿಂದೆ ಕಳೆದ ವರ್ಷ ನವೆಂಬರ್‌ (November) ತಿಂಗಳಲ್ಲಿ ಅಬ್ದುಲ್ಲಾ ಅವರು ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದರು ಮತ್ತು ಭಗವಂತ ರಾಮ ಪ್ರತಿಯೊಬ್ಬರಿಗೂ ದೇವರೇ ಎಂದು ಪ್ರತಿಪಾದಿಸಿದ್ದರು.

Exit mobile version