ಅಧಿಕಾರ ದುರುಪಯೋಗ ಆರೋಪ ; ಮಲ್ಲಿಕಾಘಂಟಿ ವಿರುದ್ಧ ಎಫ್ಐಆರ್ ದಾಖಲು..!

Vijayanagar: ಹಂಪಿ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾಗ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ವಿಶ್ವವಿದ್ಯಾಲಯಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವ ಆರೋಪದ ಮೇಲೆ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾಘಂಟಿ (Mallika Ghanti) ವಿರುದ್ಧ ವಿಜಯನಗರ ಜಿಲ್ಲೆಯ ಹೊಸಪೇಟೆಯ ಕಮಲಾಪುರ (Kamalapur) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.


ಡಾ. ಮಲ್ಲಿಕಾಘಂಟಿ ಅವರು ತಮ್ಮ ಅಧಿಕಾರವಧಿಯಲ್ಲಿ ಉದೇಶಪೂರ್ವಕವಾಗಿ ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ. ಇದರಿಂದ ಹಂಪಿ (Hampi) ವಿಶ್ವವಿದ್ಯಾಲಯಕ್ಕೆ 13.56 ಲಕ್ಷ ರೂ. ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಸುಬ್ಬಣ್ಣ ರೈ (Subbanna Rai) ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಜುಲೈ 18 ರಂದು ನೀಡಿದ ಅನುಮೋದನೆ ಮೇರೆಗೆ ಡಾ.ಮಲ್ಲಿಕಾಘಂಟಿ, ನಿವೃತ್ತ ಅಧಿಕಾರಿಗಳು ಹಾಗೂ ಸೇವೆಯಲ್ಲಿರುವ ಕೆಲ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ವಿಶ್ವವಿದ್ಯಾಲಯದ ಪರವಾಗಿ ಕುಲಸಚಿವ ಸುಬ್ಬಣ್ಣ ರೈ ಪ್ರಕರಣ ದಾಖಲಿಸಿದ್ದಾರೆ.

ಕನ್ನಡ ವಿವಿಯಲ್ಲಿ ಕುಲಪತಿಯಾಗಿದ್ದ ಡಾ. ಮಲ್ಲಿಕಾ ಘಂಟಿ 2015- 16, 2016- 17ನೇ ಸಾಲಿನಲ್ಲಿ 1.69 ಕೋಟಿ ಮೊತ್ತದ ಕಾಮಗಾರಿಗಳನ್ನು ಕೆಆರ್ಐಡಿಎಲ್ ಸಂಸ್ಥೆಯಿಂದ ನಿರ್ವಹಿಸಲು ಆದೇಶಿಸುವ ಮೂಲಕ ಶೇ. 8ರಷ್ಟು ಸೇವಾ ಶುಲ್ಕ ಮೊತ್ತದ .13.56 ಲಕ್ಷ ಆರ್ಥಿಕ ನಷ್ಟವನ್ನು ಉಂಟು ಮಾಡಿದ್ದಾರೆ. ಇನ್ನು ಈ ಕುರಿತು ಉನ್ನತ ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ಪರಿಷತ್ ನಡೆಸಿದ್ದ ತನಿಖಾ ವರದಿಯನ್ನು ಆಧರಿಸಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ತನಿಖೆಗೆ ಆದೇಶಿಸಿದ್ದರು.

Exit mobile version