2025-26ನೇ ಸಾಲಿನಿಂದ 1ನೇ ತರಗತಿ ಪ್ರವೇಶ ಪಡೆಯಲು ಮಗುವಿಗೆ 6 ವರ್ಷ ಕಡ್ಡಾಯ; ಹೈಕೋರ್ಟ್

Bengaluru , ಆಗಸ್ಟ್‌ 10: 2025-26ನೇ ಸಾಲಿನಿಂದ 1ನೇ ತರಗತಿಗೆ ಪ್ರವೇಶ ಪಡೆಯಲು ಸರ್ಕಾರಿ (first standard class admission), ಅನುದಾನಿತ (Funded) ಮತ್ತು ಅನುದಾನ ರಹಿತ

(Unfunded) ಶಾಲೆಗಳಲ್ಲಿ ಮಗುವಿಗೆ 6 ವರ್ಷ ತುಂಬಿರಲೇಬೇಕು, ಇಲ್ಲವಾದರೆ ಮಗುವಿಗೆ ಪ್ರವೇಶವಿಲ್ಲ. ಈ ಕುರಿತಂತೆ ಇದೀಗ ಕರ್ನಾಟಕ (first standard class admission) ಹೈಕೋರ್ಟ್

(High Court) ಸಹ ಕರ್ನಾಟಕ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಎತ್ತಿ ಹಿಡಿದಿದೆ. ಇದರಿಂದಾಗಿ ಈ ನಿಯಮವನ್ನು ಇನ್ನು ಮುಂದೆ ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಬೇಕಾದರೆ

ಪಾಲನೆ ಮಾಡಲೇಬೇಕಾಗುತ್ತದೆ.

ಬೆಂಗಳೂರಿನ 4 ವರ್ಷದ ಪುತ್ರಿಯ ತಂದೆ ಅನಿಕೇತ್ ಈ ಹಿಂದೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕರು 2022ರ ಜುಲೈ 26ರಂದು ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕೆಂದು

ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ (Sachin Shankar Magadam) ನೇತೃತ್ವದ ಏಕಸದಸ್ಯ ಪೀಠವು ಅರ್ಜಿಯನ್ನು ವಜಾ

ಮಾಡಿದೆ. ಅಲ್ಲದೆ ನ್ಯಾಯಾಲಯಕ್ಕೆ ಮೇಲ್ನೋಟಕ್ಕೆ ಮಾರ್ಗಸೂಚಿಯ ಹಿಂದೆ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ ಕೇಂದ್ರಿತ ಉದ್ದೇಶವಿದೆ ಎಂದು ಅರ್ಥವಾಗಿದೆ.

ಇದನ್ನೂ ಓದಿ : ಇನ್ನು ಮುಂದೆ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲೂ ಸಿಬಿಎಸ್‌ಇ ಶಿಕ್ಷಣ ನೀಡಬಹುದು : ಮುಂದಿನ ವರ್ಷದಿಂದ 22 ನಿಗದಿತ ಭಾಷೆಗಳಲ್ಲಿ ಪಠ್ಯಗಳು ಲಭ್ಯ

ಹೀಗಾಗಿ,ಅದೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ/ ವಿದ್ಯಾರ್ಥಿನಿ ಉಳಿಯಬೇಕಾಗುತ್ತದೆ ಎಂಬ ಕಾರಣಕ್ಕೆ ಹಸ್ತಕ್ಷೇಪ ಮಾಡಲಾಗದು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ಅರ್ಜಿದಾರರ ಪರ ವಕೀಲರು,

ಒಂದನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಠ 5.5 ವರ್ಷ ಆಗಿರಬೇಕು. ಎಲ್‌ಕೆಜಿಗೆ(LKG) ಮಗು ಸೇರಿಸಲು 3.5 ವರ್ಷ 2020ರ ಮೇ 11ರ ಅಧಿಸೂಚನೆಯ ಪ್ರಕಾರ ಆಗಿರಬೇಕು ಎಂದು ಹೇಳಲಾಗಿದೆ.

ಇದರಿಂದ ತೊಂದರೆ ಆಗಲಿದೆ ಎಂದು ವಾದಿಸಿದ್ದರು. ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು ಒಂದನೇ ತರಗತಿ ಪ್ರವೇಶಕ್ಕೆ ಕನಿಷ್ಠ ವಯಸ್ಸು ಮಿತಿಯನ್ನು ಎನ್ಇಪಿ (NEP)

ಮತ್ತು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ 2009ರ ನಿಬಂಧನೆಗಳನ್ನು ಗಮನದಲ್ಲಿಟ್ಟುಕೊಂಡು ನಿಗದಿಪಡಿಸಲಾಗಿದೆ” ಎಂದು ಸಮರ್ಥಿಸಿದ್ದರು.

ಎನ್ ಇಪಿ ಅಳವಡಿಕೆ:

ಪ್ರವೇಶಾತಿ ವಯಸ್ಸನ್ನು ಎನ್ಇಪಿ ಮಾನದಂಡಗಳಲ್ಲಿ ಜಾಗತಿಕ ಶೈಕ್ಷಣಿಕ ಮಾರ್ಗಸೂಚಿಗಳನ್ನು ಆಧರಿಸಿ ಸೇರಿಸಲಾಗಿದೆ. ಮಕ್ಕಳಿಗೆ ಶಿಕ್ಷಣ ಮತ್ತು ಸರಿಯಾದ ಆರೈಕೆ ನೀಡಬೇಕು.ಅಲ್ಲದೆ ತಜ್ಞರು ಹೊಸ

ಮಾರ್ಗಸೂಚಿಗಳನ್ನು ಆಟ ಕೇಂದ್ರಿತ, ಚಟುವಟಿಕೆ ಕೇಂದ್ರಿತ, ಹೊಂದಿಕೊಳ್ಳುವ ಕಲಿಕೆಯ ಭರವಸೆಯ ಹಿನ್ನೆಲೆಯಲ್ಲಿ ರೂಪಿಸಿದ್ದಾರೆ. ನ್ಯಾಯಾಲಯವು ಆದೇಶದಲ್ಲಿ ತಿಳಿಸಿರುವ ಪ್ರಕಾರ ಸಕ್ಷಮ ಪ್ರಾಧಿಕಾರ

ರೂಪಿಸಿರುವ ಶೈಕ್ಷಣಿಕ ಮಾರ್ಗಸೂಚಿಯಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲಾಗದು ಎಂದು ತಿಳಿಸಿದೆ.

ಇದನ್ನೂ ಓದಿ : ಶಾಲಾ- ಕಾಲೇಜು ವಾಹನಗಳ ಟ್ಯಾಕ್ಸ್‌ ಏರಿಕೆ: ಕ್ಯಾಬ್‌ಗಳಿಗೆ ಜೀವಿತಾವಧಿ ಮೋಟಾರು ವಾಹನ ತೆರಿಗೆ

ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020 ಅನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರವು ಅಳವಡಿಸಿಕೊಂಡಿದ್ದು, ಕನಿಷ್ಠ ಮತ್ತು ಗರಿಷ್ಠ ಅರ್ಹತಾ ಮಾನದಂಡವನ್ನು 1ನೇ ತರಗತಿ ಪ್ರವೇಶಕ್ಕೆ ಸರಿಯಾಗಿ

ಮಾರ್ಪಾಡು ಮಾಡಿದೆ. ರಾಜ್ಯ ಸರ್ಕಾರವು (Government) ಮತ್ತು ವಿದ್ಯಾಕೇಂದ್ರ ಹೊರಡಿಸಿರುವ ಪ್ರವೇಶಾತಿ ಮಾರ್ಗಸೂಚಿಗಳು ಸಿಂಧುವಾಗಿದ್ದು, ಅಲ್ಲದೆ ಎನ್ಇಪಿಗೆ ಅನುಗುಣವಾಗಿವೆ ಎಂದು ಕೋರ್ಟ್

ಆದೇಶಿಸಿದೆ. ಶಿಕ್ಷಣ ಇಲಾಖೆಯ ಮೂಲಕ ಕೇಂದ್ರ ಸರ್ಕಾರ ರಾಷ್ಟ್ರೋತ್ಥಾನ ವಿದ್ಯಾಕೇಂದ್ರವನ್ನು ನಡೆಸುತ್ತಿದೆ. ಹೀಗಾಗಿ,ಎನ್ಇಪಿ ಮಾರ್ಗಸೂಚಿಗಳನ್ನು ವಿದ್ಯಾಕೇಂದ್ರವು ಪಾಲಿಸುವುದು

ಕಡ್ಡಾಯವಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಏನಿದು ಪ್ರಕರಣ?;
ತ್ರಿಷಿಕಾ (Trishika) ಎಂಬ ಮಗುವನ್ನು ಆಕೆಯ ಪೋಷಕರು ಪ್ರಸಕ್ತ ವರ್ಷ ಎಲ್‌ಕೆಜಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ಬೆಂಗಳೂರಿನ ಥಣಿಸಂದ್ರದಲ್ಲಿರುವ (Thanisandra) ರಾಷ್ಟ್ರೋತ್ಥಾನ

ವಿದ್ಯಾಕೇಂದ್ರದಲ್ಲಿ ಕೋರಿದ್ದರು. ಈ ವಿಚಾರವಾಗಿ ಶಾಲೆಯು ಶುಲ್ಕವನ್ನೂ ಸಹ ವಸೂಲಿ ಮಾಡಿತ್ತು.

ನಂತರ ಶಾಲೆಯು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕರ 2018ರ ಮೇ 23ರ ಆದೇಶ ಉಲ್ಲೇಖಿಸಿ (ಒಂದನೇ ತರಗತಿ ಪ್ರವೇಶಕ್ಕೆ ವಯೋಮಿತಿ ನಿಗದಿ ಮಾಡಿರುವ ಆದೇಶ)

ಮಗುವಿಗೆ 2023ರ ಜೂನ್ 1ಕ್ಕೆ ಸರಿಯಾಗಿ ನಾಲ್ಕು ವರ್ಷ ಪೂರ್ಣಗೊಳಿಸದಿರುವುದರಿಂದ ಆಕೆ ಎಲ್‌ಕೆಜಿ ಪ್ರವೇಶಕ್ಕೆ ಅರ್ಹಳಲ್ಲ ಎಂದು 2023ರ ಮೇ 27ರಂದು ಪೋಷಕರಿಗೆ ಈಮೇಲ್ ಕಳುಹಿಸಿತ್ತು.

ಹಾಗಾಗಿ ಪೋಷಕರು 2025-26ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ಒಂದನೇ ತರಗತಿ ಪ್ರವೇಶಕ್ಕೆ ಆರು ವರ್ಷ ತುಂಬಿರಬೇಕು ಎಂದು ಆದೇಶಿಸಿದ್ದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದೀಗ ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ರಶ್ಮಿತಾ ಅನೀಶ್

Exit mobile version