ಕಣ್ಣಿನ ತೊಂದರೆಯಿಂದ ಬಳಲುತ್ತಿರುವಿರಾ? ಹಾಗಾದ್ರೆ ಕಣ್ಣಿನ ಆರೋಗ್ಯಕ್ಕೆ ಈ ಆಹಾರಗಳನ್ನು ಸೇವಿಸಿ

Healthy Food for Eyes: ನಮ್ಮ ದೇಹದಲ್ಲಿರುವ ಪ್ರತಿಯೊಂದು ಅಂಗಗಳು ಮುಖ್ಯ. ಯಾವುದಾದರೂ ಒಂದು ಅಂಗ ಕಾರ್ಯ (Food for Healthy Eyes) ನಿರ್ವಹಿಸದೇ ಇದ್ದರೂ

ದೇಹದ ಮೇಲೆ ಪರಿಣಾಮ ಉಂಟಾಗುತ್ತದೆ. ಅದರಲ್ಲೂ ಬಹಳ ಮುಖ್ಯವಾಗಿರುವ ಅಂಗ ಕಣ್ಣು, ಇದೇನಾದರೂ ತನ್ನ ಕಾರ್ಯುವನ್ನು ನಿಲ್ಲಿಸಿಬಿಟ್ಟರೆ ದೇಹದ ಜೊತೆಗೆ ಈ ಜಗತ್ತೇ ಕತ್ತಲೆಯಾಗಿ

ಬಿಡುತ್ತದೆ. ಹಾಗಾದ್ರೆ ಕಣ್ಣಿನ ಆರೋಗ್ಯವನ್ನು ಕಾಪಾಡುವುದು ಹೇಗೆ? ಹಾಗಾದ್ರೆ ಆ ಆಹಾರಗಳು (Food for Healthy Eyes) ಯಾವುದು ಎಂದು ತಿಳಿಯೋಣ ಬನ್ನಿ.

1. ಮೀನುಗಳು:
ನೀವು ಮಾಂಸಾಹಾರಿಗಳಾಗಿದ್ರೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಒಮೆಗಾ 3 (Omega-3) ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿರುವ ಮೀನುಗಳನ್ನು ತಿನ್ನಬಹುದಾಗಿದ್ದು, ಮ್ಯಾಕೆರೆಲ್,

ಸಾರ್ಡೀನ್ಗಳು, ಟ್ಯೂನ ಮೀನು, ಸಾಲ್ಮನ್ (Saalman), ಟ್ರೌಟ್, ಆಂಚೊವಿಗಳು, ಹೆರಿಂಗ್ ಮೀನುಗಳು ಅತ್ಯುತ್ತಮ ಆಯ್ಕೆಗಳಾಗಿವೆ. ಇದು ಕಣ್ಣಿನ ಆರೋಗ್ಯಕ್ಕೆ ಉತ್ತಮ.

2. ದ್ವಿದಳ ಧಾನ್ಯಗಳು:
ದ್ವಿದಳ ಧಾನ್ಯಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ವಿಟಮಿನ್ ಇ (Vitamin E) ಇದ್ದು, ಒಮೆಗಾ -3 ಕೊಬ್ಬಿನಾಮ್ಲಗಳು ಸಹ ಸಮೃದ್ಧವಾಗಿವೆ. ವಾಲ್ನಟ್‌ (Walnut), ಬ್ರೆಜಿಲ್ ಬೀಜಗಳು, ಗೋಡಂಬಿ, ಕಡಲೆಕಾಯಿ,

ಮಸೂರಗಳನ್ನು ಹೆಚ್ಚಾಗಿ ತಿನ್ನುವುದರಿಂದ ಕಣ್ಣಿಗೆ ಬಹಳ ಒಳ್ಳೆಯದು ಎಂದು ಸಾಬೀತಾಗಿದೆ.

3. ಹುಳಿಭರಿತ ಹಣ್ಣುಗಳು:
ಹುಳಿಯ ಅಂಶವಿರುವ ಹಣ್ಣುಗಳೆಂದರೆ ನಿಂಬೆಹಣ್ಣುಗಳು, ಕಿತ್ತಳೆಗಳು, ದ್ರಾಕ್ಷಿಹಣ್ಣುಗಳು ಇನ್ನು ಹಲವಾರು ಹಣ್ಣುಗಳಿದ್ದು,ಅವುಗಳು ವಿಟಮಿನ್‌ ಸಿ (Vitamin C) ಸಮೃದ್ಧವಾಗಿರುತ್ತವೆ ಮತ್ತು

ವಿಟಮಿನ್ ಸಿ ಯನ್ನು ಹೊಂದಿರುತ್ತದೆ. ಆದರೆ ಇದು ಒಂದು ಉತ್ಕರ್ಷಣ ನಿರೋಧಕವಾಗಿದ್ದು, ಆಯಾ ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಹಾನಿಯ ವಿರುದ್ಧ ಹೋರಾಡಲು ಸಹಾಯಕಾರಿಯಾಗಿದೆ.

4. ಹಸಿರು ತರಕಾರಿಗಳು:
ಬಹಳಷ್ಟು ಜನರು ಹಸಿರು ತರಕಾರಿಗಳ ಜೊತೆಗೆ ಸೊಪ್ಪುಗಳನ್ನೂ ತಿನ್ನುವುದೆ ಇಲ್ಲ. ಆದರೆ ಇಂತಹ ಹಸಿರು ತರಕಾರಿಗಳಿಂದ ಕಣ್ಣಿನ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ. ಇಂತಹ ಆಹಾರದಲ್ಲಿ ಯಥೇಚ್ಚವಾದ

ಲುಟೀನ್ (Lutein) ಮತ್ತು ಜಿಯಾಕ್ಸಾಂಥಿನ್ ಇದ್ದು, ಅಲ್ಲದೆ, ಕಣ್ಣಿನ ಸ್ನೇಹಿ ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ಹಾಗಾಗಿ ತಾಜಾ ಹಸಿರು ತರಕಾರಿಗಳನ್ನು ಹೆಚ್ಚು ಹೆಚ್ಚಾಗಿ ತಿನ್ನಲು ಆದ್ಯತೆ ನೀಡಬೇಕು.

5. ಕ್ಯಾರೆಟ್
ಕಣ್ಣಿನ ಆರೋಗ್ಯಕ್ಕೆ ಕ್ಯಾರೆಟ್‌ಗಳು (Carrot) ಒಳ್ಳೆಯದು ಎಂಬುದು ಎಲ್ಲರಿಗೂ ಈಗಾಗಲೇ ಗೊತ್ತಿದೆ. ಏಕೆಂದರೆ ಇದರಲ್ಲಿ ವಿಟಮಿನ್ ಎ (Vitamin A) ಮತ್ತು ಬೀಟಾ ಕ್ಯಾರೋಟಿನ್ ಸಮೃದ್ಧವಾಗಿದ್ದು, ಬೀಟಾ

(Beta) ಕ್ಯಾರೋಟಿನ್ ಕ್ಯಾರೆಟ್‌ಗೆ ಕಿತ್ತಳೆ ಬಣ್ಣವನ್ನು ನೀಡುತ್ತದೆ. ಇದು ರೋಡಾಪ್ಸಿನ್ ಎಂಬ ಪ್ರೋಟೀನ್‌ನ ಒಂದು ಅಂಶವಾಗಿದ್ದು, ರೆಟಿನಾ (Retina) ಬೆಳಕನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಈ ಎಲ್ಲಾ ಆಹಾರಗಳನ್ನು ದಿನನಿತ್ಯದ ಬಳಕೆಯಲ್ಲಿ ಬಳಸುತ್ತಾ ಆರೋಗ್ಯಕರವಾದ ಕಣ್ಣುಗಳನ್ನು ನಿಮ್ಮದಾಗಿಸಿಕೊಳ್ಳಿ.

ಇದನ್ನು ಓದಿ: ಪಠಾಣ್ ಕೋಟ್ ದಾಳಿಯ ರೂವಾರಿ ಶಾಹಿದ್ ಲತೀಫ್ ಪಾಕಿಸ್ತಾನದಲ್ಲಿ ಹತ್ಯೆ

Exit mobile version