ಚಾಮುಂಡೇಶ್ವರಿ ಅಮ್ಮನವರ ಆಷಾಢ ಶುಕ್ರವಾರದ ದರ್ಶನಕ್ಕೆ ಉಚಿತ ಸರ್ಕಾರಿ ಬಸ್ ಸೇವೆ

Chammundi

ಕೋವಿಡ್ ಲಾಕ್ ಡೌನ್(Covid Lockdown) ಪರಿಣಾಮ ದೇವಸ್ಥಾನಗಳಿಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳಿಗೆ(Devotees) ಪ್ರವೇಶವನ್ನು ನಿರ್ಬಂಧ ಹೇರಲಾಗಿತ್ತು. ಸದ್ಯ ಈಗ ಕೋವಿಡ್ ಇಳಿಕೆ ಕಂಡಿರುವ ಪರಿಣಾಮ ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳಿಗೆ ಪ್ರವೇಶವನ್ನು ನೀಡಲಾಗಿದೆ. ಕಳೆದ 2 ವರ್ಷದಿಂದ ಮೈಸೂರಿನ(Mysuru) ಅಧಿದೇವತೆ, ನಾಡದೇವತೆ ಚಾಮುಂಡೇಶ್ವರಿ ಅಮ್ಮನವರ(Lord Chammundeshwari) ಆಷಾಢ ಶುಕ್ರವಾರ ದರ್ಶನ ಪಡೆಯುವ ಭಾಗ್ಯ ಭಕ್ತಾಧಿಗಳಿಗೆ ದೊರೆತಿರಲಿಲ್ಲ.

ಆದ್ರೆ, ಈಗ ಆ ಭಾಗ್ಯ ಕೂಡಿ ಬಂದಿದೆ. 2 ವರ್ಷದ ಬಳಿಕ ಆಷಾಢ ಶುಕ್ರವಾರ, ಚಾಮುಂಡೇಶ್ವರಿ ಅಮ್ಮನವರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಷಾಢ ಶುಕ್ರವಾರ ದಿನದಂದು ಬರುವ ಭಕ್ತಾಧಿಗಳಿಗೆ ಅನುಕೂಲವಾಗುವಂತೆ ಹಲವು ರೀತಿಯಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್(ST Somashekar) ಮಾಹಿತಿ ನೀಡಿದ್ದಾರೆ. ಆಷಾಢ ಶುಕ್ರವಾರದ ದಿನ ಬೆಟ್ಟಕ್ಕೆ ಯಾವುದೇ ಖಾಸಗಿ ವಾಹನಗಳಿಗೆ ಪ್ರವೇಶವಿರುವುದಿಲ್ಲ.

ಕೇವಲ ಸರ್ಕಾರಿ ಬಸ್‍ಗಳು ಮಾತ್ರ ಸಂಚರಿಸಲಿವೆ. ದರ್ಶನ ಪಡೆಯಲು ಸರ್ಕಾರಿ ಬಸ್‍ನಲ್ಲಿ ಪ್ರಯಾಣಿಸುವ ಭಕ್ತಾಧಿಗಳಿಗೆ ಉಚಿತ ಸೇವೆ ನೀಡಲಾಗುವುದು. ಲಲಿತ್ ಮಹಲ್(Lalith Mahal) ಪಕ್ಕದಲ್ಲಿರುವ 18 ಎಕರೆ ಪ್ರದೇಶದಿಂದ ಬಸ್‍ಗಳು ಸಂಚರಿಸಲಿವೆ. ಇದಲ್ಲದೇ ಮೈಸೂರಿನ ಹಲವು ಭಾಗಗಳಿಂದ ಕೂಡ ಬಸ್‍ಗಳ ಸೇವೆ ಕಲ್ಪಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಅತೀ ಮುಖ್ಯವಾಗಿ ಚಾಮುಂಡಿ ಬೆಟ್ಟಕ್ಕೆ ದರ್ಶನ ಪಡೆಯಲು ಬರುವವರು ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು ಅಥವಾ 72 ಗಂಟೆಗಳ ಹಿಂದಿನ ನೆಗೆಟಿವ್ ವರದಿಯನ್ನು ಪ್ರದರ್ಶಿಸಬೇಕು.

ದೇವಸ್ಥಾನದೊಳಗೆ ಪ್ರವೇಶ ಪಡೆಯುವ ಮುನ್ನವೇ ಕೋವಿಡ್ ವರದಿಯನ್ನು ಪರಿಶೀಲಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಪ್ರತ್ಯೇಕವಾಗಿ ಉಲ್ಲೇಖಿಸಿದ್ದಾರೆ.

Exit mobile version