ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್ ; ಉಚಿತ ಪಡಿತರ ಯೋಜನೆ 3 ತಿಂಗಳು ವಿಸ್ತರಣೆ, ಸರ್ಕಾರಿ ನೌಕರರಿಗೆ 4% ತುಟ್ಟಿ ಭತ್ಯೆ ಹೆಚ್ಚಳ!

narendra modi

New Delhi : 80 ಕೋಟಿ ಬಡವರಿಗೆ ಗೋಧಿ ಮತ್ತು ಅಕ್ಕಿಯನ್ನು ಉಚಿತವಾಗಿ ನೀಡುವ ಉಚಿತ ಪಡಿತರ ಯೋಜನೆಯನ್ನು(Free Ration Scheme) ಕೇಂದ್ರ ಸರ್ಕಾರ(Central Government) ಮೂರು ತಿಂಗಳ ಅವಧಿಯವರೆಗೂ ವಿಸ್ತರಿಸಿದೆ.

ಡಿಸೆಂಬರ್‌ನಲ್ಲಿ ಕೊನೆಗೊಳ್ಳಬೇಕಿದ್ದ ಯೋಜನೆಯನ್ನು ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ. ಮೂರು ಭಾರತೀಯ ರೈಲು ನಿಲ್ದಾಣಗಳನ್ನು ನವೀಕರಿಸುವ ಪ್ರಸ್ತಾವನೆಯನ್ನು ಕೂಡ ಸರ್ಕಾರವು ಅನುಮೋದಿಸಿದೆ. ಕೇಂದ್ರ ಸರ್ಕಾರದ ಘೋಷಣೆಯು ಈ ವರ್ಷದ ದೀಪಾವಳಿ ಹಬ್ಬಕ್ಕೂ ಮುಂಚಿತವಾಗಿಯೇ ಜನಸಾಮಾನ್ಯರಿಗೆ ಉಡುಗೊರೆ ನೀಡಿದೆ.

ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಯೋಜನೆಯನ್ನು ಮುಂದಿನ ಮೂರು ತಿಂಗಳವರೆಗೆ ವಿಸ್ತರಿಸಲು ಕೇಂದ್ರ ಸಂಪುಟ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಘೋಷಿಸಿದ್ದಾರೆ. 44,700 ಕೋಟಿ ವೆಚ್ಚದಲ್ಲಿ ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ : https://vijayatimes.com/beauty-tips-for-skin-tan/

ಶುಕ್ರವಾರದಂದು ಕೊನೆಗೊಳ್ಳಲಿರುವ 80 ಕೋಟಿ ಉಚಿತ ಪಡಿತರ ಯೋಜನೆಯೂ ಬಡವರಿಗೆ ಪ್ರತಿ ತಿಂಗಳು 5 ಕೆಜಿ ಗೋಧಿ ಮತ್ತು ಅಕ್ಕಿಯನ್ನು ಉಚಿತವಾಗಿ ನೀಡುವ ಯೋಜನೆಯಾಗಿದೆ. ಇದೀಗ ಡಿಸೆಂಬರ್ 31, 2022 ರವರೆಗೆ ಜಾರಿಯಲ್ಲಿರುತ್ತದೆ ಎಂದು ಹೇಳಲಾಗಿದೆ. ಇದರೊಟ್ಟಿಗೆ ಸರ್ಕಾರಿ ಉದ್ಯೋಗಿಗಳಿಗೆ 4% ತುಟ್ಟಿ ಭತ್ಯೆ ಹೆಚ್ಚಿಸಿದೆ.

ಕೇಂದ್ರ ಸರ್ಕಾರವು ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇ 4ರಷ್ಟು ಹೆಚ್ಚಿಸಿದ್ದು, 7ನೇ ವೇತನ ಆಯೋಗದ ಶಿಫಾರಸ್ಸಿನ ಮೇರೆಗೆ ಹೆಚ್ಚಳ ಮಾಡಲಾಗಿದೆ. ಇತ್ತೀಚಿನ ಹೆಚ್ಚಳವು ಕೇಂದ್ರ ಸರ್ಕಾರಿ ನೌಕರರಿಗೆ 38 ಪ್ರತಿಶತದಷ್ಟು ತುಟ್ಟಿಭತ್ಯೆಯ ಮೊತ್ತವಾಗಿದೆ. ಹಣದುಬ್ಬರದಂತಹ ಪರಿಸ್ಥಿತಿಗೆ ಹೊಂದಿಕೊಳ್ಳಲು ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ತುಟ್ಟಿಭತ್ಯೆಯನ್ನು ನೀಡುತ್ತದೆ.

ಇದನ್ನೂ ಓದಿ : https://vijayatimes.com/congress-slams-state-bjp/

ಈ ಮಧ್ಯೆ ಭಾರತೀಯ ರೈಲ್ವೆಗೆ ದೊಡ್ಡ ಉತ್ತೇಜನದಲ್ಲಿ, ಕೇಂದ್ರ ಸಚಿವ ಸಂಪುಟವು ಮೂರು ಪ್ರಮುಖ ರೈಲು ನಿಲ್ದಾಣಗಳ ಮರು-ಅಭಿವೃದ್ಧಿಯ ಪ್ರಸ್ತಾಪವನ್ನು ಅನುಮೋದಿಸಿದೆ. ನವದೆಹಲಿ, ಅಹಮದಾಬಾದ್ ಮತ್ತು CSMT, ಮುಂಬೈ. ಈ ಯೋಜನೆಯು ಸುಮಾರು 10,000 ಕೋಟಿ ರೂಪಾಯಿಗಳ ಹೂಡಿಕೆಯನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ.

Exit mobile version