ಎಲ್ಲೆಲ್ಲೂ ತ್ಯಾಜ್ಯ: ತುಕ್ಕು ಹಿಡಿದ ಸ್ವಚ್ಛ ಭಾರತ್‌ ಮಿಷನ್‌ ತುಮಕೂರು ನಗರ, ಗ್ರಾಮೀಣ ಪ್ರದೇಶಗಳಲ್ಲಿ ತ್ಯಾಜ್ಯವೋ ತ್ಯಾಜ್ಯ

Tumakur: ಸ್ವಚ್ಛ ಭಾರತ್‌ ಮಿಷನ್‌ (Swachh Bharat Mission) ಯೋಜನೆ ತುಮಕೂರು (garbage in tumakur city) ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಸರಿಗಷ್ಟೇ, ಕಾರ್ಯರೂಪಕ್ಕೆ ಮಾತ್ರ

ಇಳಿದಿಲ್ಲ. ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ರಸ್ತೆಯ ಇಕ್ಕೆಲಗಳಲ್ಲಿ ತ್ಯಾಜ್ಯ ತುಂಬಿ ತುಳುಕುತ್ತಿದ್ದು, ಜಿಲ್ಲೆಯಲ್ಲಿ ಬಹುತೇಕ ಕಡೆ ಘನತ್ಯಾಜ್ಯ ವಿಲೇವಾರಿ ಘಟಕಗಳು ಪೂರ್ಣಗೊಂಡಿಲ್ಲ.

ಒಂದು ವೇಳೆ ಪೂರ್ಣಗೊಂಡಿದ್ದರೂ ಹಸ್ತಾಂತರ ಮಾಡಿಲ್ಲ. ಇನ್ನು ತ್ಯಾಜ್ಯದ ಡಬ್ಬಿಗಳನ್ನು ವಿತರಣೆ ಮಾಡದ ಕಾರಣ ಗ್ರಾಮ ಪಂಚಾಯಿತಿಗಳ ಗೋಡೌನ್‌ಗಳಲ್ಲಿ ತುಕ್ಕು ಹಿಡಿಯುತ್ತಿವೆ.

ಸ್ವಚ್ಛ ಭಾರತ್‌ ಮಿಷನ್‌ ಯೋಜನೆ ಅಕ್ಷರಶಃ ತುಕ್ಕು ಹಿಡಿದಿದ್ದು, ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ರಸ್ತೆಯ ಇಕ್ಕೆಲಗಳಲ್ಲಿ ತ್ಯಾಜ್ಯ ತುಂಬಿ ಚೆಲ್ಲಾಡುತ್ತಿದೆ. ಇದರಿಂದ ರೋಗದ ಆತಂಕ ಕೂಡ ಹೆಚ್ಚಿದ್ದು,

ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ಆಗದೆ ಇರುವ ಕಾರಣದಿಂದ ರಸ್ತೆಗಳು ತ್ಯಾಜ್ಯದಿಂದ ಕೂಡಿರುವುದನ್ನು ಮನಗಂಡು ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ಘಟಕ ನಿರ್ಮಿಸಲು ಸ್ವಚ್ಛ ಭಾರತ್‌

ಮಿಷನ್‌ (Swachh Bharat Mission) ಯೋಜನೆಯಡಿ ಮುಂದಾಗಿದ್ದರೂ ಶೇ.50ರಷ್ಟು ಸ್ವಚ್ಚತೆ ಕಾಣಲು ಕೂಡ ಸಾಧ್ಯವಾಗುತ್ತಿಲ್ಲ.

ಇನ್ನು ಈ ಜಿಲ್ಲೆಯಲ್ಲಿ ಬಹುತೇಕ ಕಡೆ ಘನತ್ಯಾಜ್ಯ ವಿಲೇವಾರಿ ಘಟಕಗಳು ಪೂರ್ಣಗೊಂಡಿಲ್ಲ. ಒಂದು ವೇಳೆ ಪೂರ್ಣಗೊಂಡಿದ್ದರೂ ಹಸ್ತಾಂತರ ಮಾಡಿಲ್ಲ. ಇನ್ನು ತ್ಯಾಜ್ಯದ ಡಬ್ಬಿಗಳನ್ನು ವಿತರಣೆ ಮಾಡದೇ

ಇರುವ ಕಾರಣ ಗ್ರಾಮ ಪಂಚಾಯಿತಿಗಳ ಗೋಡೌನ್‌ಗಳಲ್ಲಿ ತುಕ್ಕು(garbage in tumakur city) ಹಿಡಿಯುವಂತಾಗಿದೆ.

ಪಂಚಾಯತ್‌ ರಾಜ್‌ (Panchayat Raj) ಪ್ರತಿ ಗ್ರಾಪಂ ಮಟ್ಟದಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕ ಸೇರಿದಂತೆ ವಾಹನ, ತ್ಯಾಜ್ಯ ಸಂಗ್ರಹ ಡಬ್ಬಿಗಳಿಗಾಗಿ ಹಣ ಬಿಡುಗಡೆ ಮಾಡಿದ್ದು, ಹೆಚ್ಚಿನ ಅನುದಾನಕ್ಕೆ

ನರೇಗಾ ಯೋಜನೆ ಬಳಸಿಕೊಂಡು ಘನ ತ್ಯಾಜ್ಯ ಘಟಕ ಸ್ಥಾಪನೆ ಮಾಡಲು ಆದೇಶಿಸಿದೆ. ಆದರೆ ಜಿಲ್ಲೆಯ 330 ಗ್ರಾಪಂಗಳ ಪೈಕಿ 66 ಗ್ರಾಪಂಗಳಲ್ಲಿ ಘಟಕ ನಿರ್ಮಾಣವೇ ಆಗಿಲ್ಲ.

ಇದುವರೆಗೂ ಬಹುತೇಕ ಗ್ರಾಪಂಗಳಲ್ಲಿ ತ್ಯಾಜ್ಯ ಸಂಗ್ರಹ ಮಾಡಲು ಗುತ್ತಿಗೆ ನೀಡಲಾಗುತ್ತಿದ್ದು ಬಹುತೇಕ ಗ್ರಾಪಂಗಳಲ್ಲಿ ತ್ಯಾಜ್ಯವನ್ನು ಸುಡಲಾಗುತ್ತಿದೆ. ಇನ್ನು ಮಹಿಳಾ ಸಬಲೀಕರಣ ಮತ್ತು ಪರಿಸರ

ಸುಸ್ಥಿರತೆಯ ಉದ್ದೇಶದಿಂದ ಈ ಯೋಜನೆ ಆರಂಭಗೊಂಡಿದ್ದು ಹೆಸರಿಗಷ್ಟೇ ಸೀಮಿತವಾಗಿದೆ. ಇನ್ನು ಮಾಂಸದ ತ್ಯಾಜ್ಯಕ್ಕೆ ಕಡಿವಾಣವಿಲ್ಲದೆ ಬಹುತೇಕ ಕಡೆ ಮಾಂಸದ ಅಂಗಡಿಗಳ ತ್ಯಾಜ್ಯವನ್ನು

ಎಲ್ಲೆಂದರಲ್ಲಿ ಬಿಸಾಡುತ್ತಿದ್ದು, ಮಾಂಸದ ಅಂಗಡಿಗಳ ತ್ಯಾಜ್ಯದಿಂದ ಬೀದಿ ನಾಯಿಗಳ ಹಾವಳಿಯು ಕೂಡ ಹೆಚ್ಚಾಗುತ್ತಿದೆ.

ನಿರ್ವಹಣೆ ಹೇಗೆ?
ಸ್ವಸಹಾಯ ಸಂಘದ ಮಹಿಳೆಯರ ಒಕ್ಕೂಟಗಳು ಪ್ರತಿ ಗ್ರಾಪಂನಲ್ಲಿ ಘನ-ದ್ರವ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಕಾರ್ಯಾಚರಣೆ ಮತ್ತು ನಿರ್ವಹಣೆ ಗುತ್ತಿಗೆಯನ್ನು ತೆಗೆದುಕೊಳ್ಳಲು ಗ್ರಾಮ ಪಂಚಾಯಿತಿ

ಮಟ್ಟದಲ್ಲಿ ರಚಿಸಿದೆ. ಅಬ್ದುಲ್‌ ನಜೀರ್‌ ಸಾಬ್‌ (Abdul Nazir Saab) ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆ, ಮೈಸೂರು (Mysore) ಮತ್ತು ಮಹಾತ್ಮಾ ಗಾಂಧಿ ಗ್ರಾಮೀಣ

ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಘನ ತ್ಯಾಜ್ಯ ನಿರ್ವಹಣೆಯಲ್ಲಿಒಳಗೊಂಡಿರುವ ಪ್ರಕ್ರಿಯೆಗಳ ಬಗ್ಗೆ ತರಬೇತಿಯನ್ನು ನೀಡುತ್ತಿವೆ.

ಇದಲ್ಲದೆ ಮಹಿಳೆಯರಿಗೆ ವಾಹನ ಚಾಲನಾ ಕೌಶಲ್ಯ ಅಂದರೆ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗಾಗಿ ತರಬೇತಿಯನ್ನು ನೀಡಿದ್ದು, ಗ್ರಾಪಂ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹಿಸಲು ಬಳಸುವ ಸ್ವಚ್ಛತಾ

ವಾಹಿನಿಯ ಚಾಲನೆ ಮಾಡಲು ಜಿಲ್ಲಾ ಪಂಚಾಯಿತಿ ವತಿಯಿಂದ ತರಬೇತಿ ಮತ್ತು ಉಚಿತ ವಾಹನ ತರಬೇತಿ ಹಾಗೂ ವಾಹನ ಚಾಲನ ಪರವಾನಗಿ ನೀಡಿದೆ.

ಭವ್ಯಶ್ರೀ ಆರ್.ಜೆ

Exit mobile version