7ಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡಿದರೆ ಚಿನ್ನದ ಪದಕದ ಗೌರವ ; ಖಜಕಿಸ್ತಾನದಲ್ಲಿದೆ ವಿಚಿತ್ರ ಕಾನೂನು!

Kazakhstan

Kazakistan : ಭಾರತದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿರುವ ಸಂದರ್ಭದಲ್ಲಿ, ಖಜಕಿಸ್ತಾನದ(Kazakistan).

ಈ ಸಂಗತಿಯ ಬಗ್ಗೆ ಕೇಳಿದರೆ ನಿಮಗೆ ಆಶ್ಚರ್ಯವಾಗುವುದು ಖಂಡಿತ. ಹೌದು, ಗೋಲ್ಡ್‌ ಮೆಡಲ್(Gold Medal) ಪಡೆಯಲು ಏನಾದರೂ ಸಾಧನೆ ಮಾಡಬೇಕು ಅಲ್ವಾ?

ಕಾಲೇಜ್ ಟಾಪರ್ ಗಳು, ಸ್ಪೋರ್ಟ್ಸ್ ವಿನ್ನರ್ಸ್ ಅಥವಾ ಒಲಿಂಪಿಕ್ ವಿನ್ನರ್‌ಗಳಿಗೆ ಗೋಲ್ಡ್‌ ಮೆಡಲ್ ಸಿಗುವುದು ಸಾಮಾನ್ಯ. ಆದರೆ, ಇಲ್ಲೊಂದು ಕಡೆ ಹೆಚ್ಚು ಮಕ್ಕಳಿಗೆ ಜನ್ಮ ನೀಡಿದ ತಾಯಂದಿರಿಗೆ ಚಿನ್ನದ ಪದಕ ನೀಡಲಾಗುತ್ತಿದೆ.

ಹೌದು, ಖಜಕಿಸ್ತಾನದಲ್ಲಿ ಇಂತಹದ್ದೊಂದು ನಿಯಮ ಜಾರಿಯಲ್ಲಿದೆ. ಅಚ್ಚರಿಯಾದರೂ ಇದು ಸತ್ಯ!


ತನ್ನ ಪ್ರಜೆಗಳಿಗೆ ದೊಡ್ಡ ಕುಟುಂಬವನ್ನು ಹೊಂದಲು ಪ್ರೋತ್ಸಾಹಿಸುವ ಕೆಲವು ದೇಶಗಳಿವೆ, ಇಂತಹ ದೇಶಗಳಲ್ಲಿ ಖಜಕಿಸ್ತಾನವೂ ಒಂದು.

ಜನಸಂಖ್ಯಾ(Population) ಹೆಚ್ಚಳಕ್ಕೆ ಒಂದು ವಿಶೇಷ ಕಾನೂನನ್ನೇ ಜಾರಿಗೆ ತಂದಿರುವ ಈ ದೇಶದಲ್ಲಿ, ಏಳಕ್ಕಿಂತ ಜಾಸ್ತಿ ಮಕ್ಕಳಿಗೆ ಜನ್ಮ ನೀಡಿದ ತಾಯಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತದೆ.

ಇದನ್ನೂ ಓದಿ : https://vijayatimes.com/state-bjp-welcomes-rahul-gandhi/

ಹೌದು, ಆರು ಮಕ್ಕಳನ್ನು ಹೊಂದಿದರೆ ಬೆಳ್ಳಿ ಪದಕ, ಏಳು ಮಕ್ಕಳಾದರೆ ಚಿನ್ನದ ಪದಕದ ಗೌರವ ಈ ಮಹಾ ತಾಯಿಗೆ ಸಲ್ಲಲಿದೆ. ಈ ಎರಡು ಪದಕಗಳ ಜೊತೆಗೆ ‘ಹೀರೋ ಮದರ್’ ಎಂಬ ಬಿರುದನ್ನೂ ಸರ್ಕಾರದ ವತಿಯಿಂದ ನೀಡಲಾಗುತ್ತದೆ.

ಈ ಕತೆ ಇಲ್ಲಿಗೇ ನಿಲ್ಲುವುದಿಲ್ಲ.

ಈ ‘ಹೀರೋ ಮದರ್’ ತನ್ನ ತಿಂಗಳ ಸಂಪೂರ್ಣ ವೆಚ್ಚವನ್ನು ಸರ್ಕಾರದಿಂದ ಪಡೆಯುವುದಕ್ಕೂ ಅರ್ಹತೆ ಪಡೆಯುತ್ತಾರೆ. ಇಂತಹ ಗೌರವಕ್ಕೆ ಪಾತ್ರರಾಗಿರುವ ಮಹಿಳೆಯರಲ್ಲಿ ರೋಷನ್ ಕೊಜೊಮ್ಕುಲೋವಾ ಕೂಡಾ ಒಬ್ಬರು.

ಇವರು ಹೀರೋ ಮದರ್‌ ಎನಿಸಿಕೊಳ್ಳಲು ಕಾರಣ, 10 ಮಕ್ಕಳಿಗೆ ಜನ್ಮ ನೀಡಿರುವುದು!

ಹೌದು, ಇವರು ಒಟ್ಟು 10 ಮಕ್ಕಳನ್ನು ಹೆತ್ತು ಬೆಳ್ಳಿ ಮತ್ತು ಚಿನ್ನದ ಪದಕಗಳನ್ನು ಜಯಿಸಿದ್ದಾರೆ. ರೋಷನ್ ಕೊಜೊಮ್ಕುಲೋವಾ ಅವರು, ಎಂಟು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದು, “ಇಷ್ಟು ಮಕ್ಕಳನ್ನು ಕಂಡು ನನಗೆ ಹೆಮ್ಮೆ ಎನಿಸುತ್ತಿದೆ” ಎಂದು ಸಂಭ್ರಮ ಪಡುತ್ತಾರೆ.

https://youtu.be/_iQcAOMqcW8

ಹೀರೋ ಮದರ್ ಆದ ಬಳಿಕ, ಇವರು ತಮ್ಮ ಜೀವಿತಾವಧಿವರೆಗೆ ಸರ್ಕಾರದಿಂದ ಭತ್ಯೆ ಪಡೆಯಲು ಇವರು ಅರ್ಹರಾಗಿದ್ದಾರೆ.
ಈ ದೇಶದ ಇನ್ನೊಬ್ಬ ಹೆಮ್ಮೆಯ ತಾಯಿ ಬಕ್ಟಿಗುಲ್ ಹಲಿಕ್ಬೆವಾ.

ಇವರು ಆರು ಮಕ್ಕಳನ್ನು ಹೆತ್ತು ಬೆಳ್ಳಿ ಪದಕದ ಗೌರವ ಪಡೆದಿದ್ದಾರೆ. ಜೊತೆಗೆ, ತಿಂಗಳ ವೆಚ್ಚವನ್ನೂ ಸರ್ಕಾರದ ವತಿಯಿಂದ ಪಡೆಯಲು ಅರ್ಹತೆ ಗಿಟ್ಟಿಸಿಕೊಂಡ ಸಂಭ್ರಮದಲ್ಲಿದ್ದಾರೆ.

ಇದನ್ನೂ ಓದಿ : https://vijayatimes.com/rss-mohan-bhagawat-statement/

ಇನ್ನು, ಹೀರೋ ಮದರ್ ಆಗದ ಮಹಿಳೆಯರು ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ, ಇವರಿಗೂ ಒಂದಷ್ಟು ಸವಲತ್ತುಗಳಿವೆ.

ಅದೇನೆಂದರೆ, ನಾಲ್ಕು ಮಕ್ಕಳನ್ನು ಹೊಂದಿದ್ದ ಕುಟುಂಬವಿದ್ದರೆ ಈ ಮಕ್ಕಳಿಗೆ 21 ವರ್ಷ ಆಗುವ ತನಕ ಸರ್ಕಾರದಿಂದ ಪ್ರತೀ ತಿಂಗಳು ಭತ್ಯೆ ಸಿಗಲಿದೆ.

ಇದಪ್ಪಾ ಅದೃಷ್ಟ ಎಂದರೆ, ಮಕ್ಕಳ ಸಂಖ್ಯೆ ಹೆಚ್ಚಾದಂತೆ ಸರ್ಕಾರದಿಂದ ಸಿಗುವ ತಿಂಗಳ ಭತ್ಯೆಯೂ ಹೆಚ್ಚಾಗುತ್ತದೆ.

Exit mobile version