ಪಿಟ್‌ಬುಲ್ ದಾಳಿ ; 13 ವರ್ಷದ ಬಾಲಕನ ಕಿವಿಯನ್ನು ಹರಿದ ಪಿಟ್‌ಬುಲ್!

Pitbull Dog

ಪಂಜಾಬ್‌ : ಶುಕ್ರವಾರ ಪಂಜಾಬ್‌ನ(Punjab) ಗುರುದಾಸ್‌ಪುರ ಜಿಲ್ಲೆಯಲ್ಲಿ 13 ವರ್ಷದ ಬಾಲಕನ ಮೇಲೆ ಪಿಟ್‌ಬುಲ್(Pitbull Dog) ನಾಯಿಯೊಂದು ಕ್ರೂರವಾಗಿ ದಾಳಿ ನಡೆಸಿದೆ.

ದಾಳಿಯ ಸಮಯದಲ್ಲಿ, ಬಾಲಕನ ಕಿವಿಯನ್ನು(Gujarat pitbull dog attack) ಕಚ್ಚಿ ಹರಿದಿದೆ.

ಘಟನೆಯ ವೇಳೆ ಜೊತೆಯಲ್ಲಿದ್ದ ಮಗುವಿನ ತಂದೆ ಕಷ್ಟಪಟ್ಟು ಮಗುವಿನ ಪ್ರಾಣ ಉಳಿಸಿದ್ದಾರೆ (Gujarat pitbull dog attack) ಎಂದು ವರದಿಗಳು ತಿಳಿಸಿವೆ.

ಗುರುದಾಸ್‌ಪುರದ ಕೋಟ್ಲಿ ಭಾನ್ ಸಿಂಗ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕುಟುಂಬದವರ ಮಾಹಿತಿ ಅನುಸಾರ, ತಂದೆ ಮತ್ತು ಮಗ ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ, ತನ್ನ ಮಾಲೀಕರೊಂದಿಗೆ ಮನೆಯ ಗೇಟ್ ಮುಂಭಾಗದಲ್ಲಿ ನಿಂತಿದ್ದ ಪಿಟ್‌ಬುಲ್ ನಾಯಿ ಏಕಾಏಕಿ ಹುಡುಗನನ್ನು ಬೊಗಳಲು ಪ್ರಾರಂಭಿಸಿದೆ.

https://vijayatimes.com/food-facts-about-mushroom/

ಕೂಡಲೇ, ಮಾಲೀಕರು ಆಕಸ್ಮಿಕವಾಗಿ ತಮ್ಮ ಅರಿವಿಗೆ ಬಾರದಂತೆ ಪಿಟ್ಬುಲ್ ನಾಯಿಗೆ ಕಟ್ಟಿದ್ದ ಹಗ್ಗವನ್ನು ಕೈಬಿಟ್ಟಿದ್ದಾರೆ. ಪಿಟ್ಬುಲ್ ನಾಯಿ ಓಡಿ ಬಂದು ಹುಡುಗನ ಮೇಲೆ ದಾಳಿ ಮಾಡಿದೆ ಎಂದು ಹೇಳಲಾಗಿದೆ.

ದಾಳಿ ಮಾಡಿದ ಪಿಟ್ಬುಲ್ ನಾಯಿಯನ್ನು ಮಾಲೀಕರು ತಡೆಯಲು ಹರಸಾಹಸ ಪಟ್ಟು ಕಡೆಯದಾಗಿ ಎಳೆದುಕೊಂಡು ಮಗುವನ್ನು ನಾಯಿಯ ದಾಳಿಯಿಂದ ಬಿಡಿಸಿದ್ದಾರೆ.

ಮಗುವಿನ ತಂದೆ ಕಷ್ಟಪಟ್ಟು ಮಗುವಿನ ಪ್ರಾಣ ಉಳಿಸಿದ್ದಾರೆ. ಗಾಯಗೊಂಡ ಮಗುವನ್ನು ಚಿಕಿತ್ಸೆಗಾಗಿ ಬಟಾಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಮಗು ಹೆಚ್ಚಿನ ಅಪಾಯದಿಂದ ದೂರ ಉಳಿದಿದ್ದು, ಕಿವಿಗೆ ಆಗಿರುವ ಗಾಯಕ್ಕೆ ಚಿಕಿತ್ಸೆ ಮುಂದುವರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಹಿಂದೆ ಲಕ್ನೋದಲ್ಲೂ(Luknow) ಇದೇ ರೀತಿಯ ಘಟನೆಯ ವರದಿಯಾಗಿತ್ತು. ಈಗ ಮತ್ತೊಂದು ಘಟನೆ ವರದಿಯಾಗಿದೆ. ಕಳೆದ ಬಾರಿ ಲಕ್ನೋದಲ್ಲಿ ಇದೇ ರೀತಿಯ ಸಾಕಿದ ಪಿಟ್ಬುಲ್ ನಾಯಿ ತನ್ನ ಮಾಲೀಕರಾದ 82 ವರ್ಷದ ನಿವೃತ್ತ ಶಿಕ್ಷಕಿಯೊಬ್ಬರನ್ನು ಕಚ್ಚಿ ಸಾಯಿಸಿತು.

ಸದ್ಯ ಇದೇ ಪ್ರಕರಣದಂತೆ ಬಾಲಕನ ಮೇಲೆ ಪಿಟ್ಬುಲ್ ನಾಯಿ ದಾಳಿ ನಡೆಸಿರುವುದು, ಜನರನ್ನು ಮತ್ತಷ್ಟು ಬೆಚ್ಚಿ ಬೀಳಿಸಿದೆ ಎಂದೇ ಹೇಳಬಹುದು.
Exit mobile version