ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ನಾಟಕ ಪ್ರದರ್ಶನ ; ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ

Bengaluru: ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ (hc order against jainuniversity) ಅವರ ಕುರಿತು ಅವಹೇಳನಕಾರಿ ನಾಟಕ ಪ್ರದರ್ಶಿಸಿದ ಆರೋಪದ ಮೇಲೆ ಬೆಂಗಳೂರಿನ ಜೈನ್

(Jain) ವಿಶ್ವವಿದ್ಯಾಲಯದ ಏಳು ವಿದ್ಯಾರ್ಥಿಗಳು ಮತ್ತು ಇಬ್ಬರು ಅಧ್ಯಾಪಕರ ವಿರುದ್ಧದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಜೈನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿರುದ್ಧದ ವಿಚಾರಣೆಗೆ ಹೈಕೋರ್ಟ್ನಿಂದ (Highcourt) ತಡೆಯಾಜ್ಞೆ ನೀಡಲಾಗಿದ್ದು, ಪ್ರತ್ಯೇಕ ಅರ್ಜಿ ಸಲ್ಲಿಸಿದ್ದ ಅಧ್ಯಾಪಕರ ವಿರುದ್ಧದ ವಿಚಾರಣೆಗೆ ಜುಲೈ 5 ರಂದು

ತಡೆಯಾಜ್ಞೆ ನೀಡಲಾಗಿತ್ತು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ನೀಡಿದ ದೂರಿನ ಮೇರೆಗೆ ವಿದ್ಯಾರ್ಥಿಗಳ ಮೇಲೆ ದಲಿತರು ಮತ್ತು ಬಿ ಆರ್ ಅಂಬೇಡ್ಕರ್ (Dr.B.R.Ambedkar) ವಿರುದ್ಧ

ಅವಹೇಳನಕಾರಿ ನಾಟಕ ಪ್ರದರ್ಶಿಸಿದ ಆರೋಪವಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ಜೈನ್ ವಿಶ್ವವಿದ್ಯಾಲಯದ ಏಳು ವಿದ್ಯಾರ್ಥಿಗಳು ಮತ್ತು ಇಬ್ಬರು

ಅಧ್ಯಾಪಕರ ವಿರುದ್ಧದ ಪ್ರಕರಣ (hc order against jainuniversity) ದಾಖಲಿಸಲಾಗಿದೆ.

ಇದನ್ನು ಓದಿ : ಮಣಿಪುರ ಕ್ರೌರ್ಯಕ್ಕೆ ಕಾರಣ ಏನು? : ಸುಳ್ಳನ್ನು ನಂಬಿ ಪ್ರತೀಕಾರ ತೆಗೆದುಕೊಳ್ಳಲು ಹೋಗಿ ದುಷ್ಕೃತ್ಯ…. ಇಲ್ಲಿದೆ ಅಸಲಿ ಕಾರಣ..

ಜೈನ್ ವಿಶ್ವವಿದ್ಯಾಲಯ ಸಂಸ್ಥೆಯ ಏಳು ವಿದ್ಯಾರ್ಥಿಗಳು ಸಮಾಜದಲ್ಲಿ ಚಾಲ್ತಿಯಲ್ಲಿರುವ ಮೀಸಲಾತಿ ವ್ಯವಸ್ಥೆಯ ಸುತ್ತ ಸುತ್ತುವ ವಿಡಂಬನಾತ್ಮಕ ನಾಟಕವನ್ನು ಫೆಬ್ರವರಿ 8, 2023 ರಂದು ತಮ್ಮ ಕಾಲೇಜಿನಲ್ಲಿ

ಪ್ರದರ್ಶಿಸಿದ್ದರು. ನಿಮ್ಹಾನ್ಸ್ ಕನ್ವೆನ್ಷನ್ (Convention) ಸೆಂಟರ್ನಲ್ಲಿ ಪ್ರದರ್ಶನವನ್ನು ನಡೆಸಲಾಗಿದ್ದ ಈ ನಾಟಕದ ವಿರುದ್ದ ಫೆಬ್ರವರಿ 10 ರಂದು ದೂರು ದಾಖಲಾಗಿದ್ದು, ಅದೇ ದಿನ ಎಫ್ಐಆರ್ ದಾಖಲಾಗಿದೆ.

ಈ ಪ್ರಕರಣದಲ್ಲಿ ದಾಖಲಾಗಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ (M.Nagaprasanna) ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಜೈನ್ ಯೂನಿವರ್ಸಿಟಿ (University)

ಯೂತ್ ಫೆಸ್ಟ್-23 ರ ಅಂಗವಾಗಿ ವಿದ್ಯಾರ್ಥಿಗಳಿಂದ ಕಿರುನಾಟಕ ಪ್ರದರ್ಶನ ನಡೆಯಿತು. ಅರ್ಜಿಯ ಜೊತೆಗೆ, ಕಾಂಪ್ಯಾಕ್ಟ್ ಡಿಸ್ಕ್ನಲ್ಲಿನ (Compact Disc) ನಾಟಕದ ರೆಕಾರ್ಡಿಂಗ್ ಅನ್ನು ಹೈಕೋರ್ಟ್ಗೆ ಸಲ್ಲಿಸಲಾಗಿದೆ.

ಮಧ್ಯಂತರ ತಡೆಯಾಜ್ಞೆ ನೀಡಿದ ಹೈಕೋರ್ಟ್ ಅರ್ಜಿಯ ವಿಚಾರಣೆಯನ್ನು ಮುಂದೂಡಿದೆ. ಅರ್ಜಿದಾರರು ಪ್ರದರ್ಶಿಸಿದ ನಾಟಕವು ವಿಡಂಬನೆಯ ಒಂದು ಪ್ರಾಮಾಣಿಕ ಅಭಿಪ್ರಾಯದ ಅಭಿವ್ಯಕ್ತಿಯಾಗಿದೆ.

ವಿಡಂಬನಾತ್ಮಕ ಸಾಹಿತ್ಯವು ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಇದು ಕಲ್ಪನೆ, ಪರಿಕಲ್ಪನೆ, ನೀತಿ ಅಥವಾ ನಿರ್ದಿಷ್ಟ ವ್ಯಕ್ತಿಯನ್ನು ಹಾಸ್ಯದ ಮೂಲಕ ಟೀಕಿಸಲು ಉದ್ದೇಶಿಸಲಾಗಿದೆ.

ಅಂತಹ ಭಿನ್ನಾಭಿಪ್ರಾಯ ಅಥವಾ ಅಭಿಪ್ರಾಯದ ಸಂವಹನವನ್ನು ಭಾರತದ ಸಂವಿಧಾನದ 19 ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಿದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ರಕ್ಷಿಸಲಾಗಿದೆ.

ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.

Exit mobile version