ಬೊಜ್ಜಿನ ಶತ್ರು, ಹೃದಯ ಸ್ನೇಹಿ ಸೋರೆಕಾಯಿ ಜ್ಯೂಸ್‌ ಕುಡಿಯಿರಿ ಚಮತ್ಕಾರ ನೋಡಿ

ಸೋರೆಕಾಯಿ ರಸ ಅಥವಾ ಜ್ಯೂಸ್ (Juice) ದೇಹಕ್ಕೆ ತುಂಬಾ ಒಳ್ಳೆಯದಾಗಿದ್ದು, ತಿಂಗಳಿಗೆ ನಾಲ್ಕು ಬಾರಿಯಾದರೂ ನೀವು ಇದನ್ನು ಕುಡಿಯಲೇಬೇಕು. ಆರೋಗ್ಯದಲ್ಲಿ ಉತ್ತಮ ಬದಲಾವಣೆಗಳು ಆಗಬೇಕೆಂದರೆ ನಾವು ಉತ್ತಮವಾದ ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳಬೇಕು. ನೈಸರ್ಗಿಕವಾದ ಆಹಾರ ಪದಾರ್ಥಗಳಿಗೆ ಮತ್ತು ಪಾನೀಯಗಳಿಗೆ ಹೆಚ್ಚು ಒತ್ತು ಕೊಡಬೇಕು.

ನಮ್ಮನ್ನು ನಾವು ಅನಾರೋಗ್ಯಕರ ಪರಿಸ್ಥಿತಿಗಳಿಂದ ದೂರ ಇರಲು ಇದಕ್ಕಿಂತ ಅನ್ಯ ಮಾರ್ಗ ಮತ್ತೊಂದಿಲ್ಲ. ಸೌತೆಕಾಯಿ, ಕಲ್ಲಂಗಡಿ ಹಣ್ಣು, ಕಿತ್ತಳೆ ಹಣ್ಣು, ಮಾವಿನ ಹಣ್ಣು, ಸೋರೆಕಾಯಿ ಇವೆಲ್ಲವೂ ನೀರಿನ ಅಂಶವನ್ನು ಹೆಚ್ಚಾಗಿ ಒಳಗೊಂಡಿರುತ್ತವೆ. ನಮ್ಮ ದೇಹ ಕೂಡ ಮುಕ್ಕಾಲು ಭಾಗ ನೀರಿನ ಅಂಶದಿಂದಲೇ ರೂಪುಗೊಂಡಿದೆ.

ಹಾಗಾಗಿ ಇವುಗಳನ್ನು ಸೇವಿಸುವುದರಿಂದ ಹೆಚ್ಚಿನ ನೀರಿನ ಅಂಶ ಸಿಕ್ಕಂತಾಗುವುದಲ್ಲದೆ ನಮ್ಮ ದೇಹದಲ್ಲಿ ನಡೆಯಬೇಕಾದ ಎಲ್ಲಾ ಕಾರ್ಯ ಚಟುವಟಿಕೆಗಳು ಸರಾಗವಾಗಿ ನಡೆದುಕೊಂಡು ಹೋಗುತ್ತವೆ. ಹಾಗೂ ಕೆಲವೊಂದು ವಿಶೇಷ ಆರೋಗ್ಯ ಪ್ರಯೋಜನಗಳನ್ನು ನಾವು ಈ ಜ್ಯೂಸ್ ಇಂದ ಪಡೆಯಬಹುದಾಗಿದೆ. ಹಾಗಾದರೆ ಈ ಜ್ಯೂಸ್ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳು ಇದೆ ಎನ್ನುವುದನ್ನು ತಿಳಿದುಕೊಳ್ಳೋಣ.

ಹೃದಯಕ್ಕೆ ತುಂಬಾ ಒಳ್ಳೆಯದು:
ನಿಯಮಿತವಾಗಿ ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ @Cholestrerol ಪ್ರಮಾಣ ಕಡಿಮೆ ಯಾಗುತ್ತದೆ. ಇದಲ್ಲದೇ
ಇದರಲ್ಲಿ ನಾರಿನ ಅಂಶ ಅಪಾರವಾಗಿ ಕಂಡು ಬರುವುದರಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣ ವನ್ನು ನಿಯಂತ್ರಣ ಮಾಡಿ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕಂಡು ಬರದಂತೆ ಕಾಪಾಡುತ್ತದೆ. ರಕ್ತ ಸಂಚಾರದಲ್ಲಿ ಯಾವುದೇ ತೊಂದರೆ ಆಗದಂತೆ ಮೆದುಳಿನ ಆರೋಗ್ಯವನ್ನು ಸಹ ಇದು ಕಾಪಾಡುತ್ತದೆ.

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ:
ಸೋರೆಕಾಯಿ ತನ್ನಲ್ಲಿ ನೀರಿನ ಅಂಶವನ್ನು ಹೆಚ್ಚಾಗಿ ಒಳಗೊಂಡಿರುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡುವ ಶಕ್ತಿ ಮತ್ತು ಸಾಮರ್ಥ್ಯ ಇದರಲ್ಲಿದೆ. ಇದರಲ್ಲಿ ಔಷಧೀಯ ಗುಣಗಳು ಕೂಡ ಇರುವುದರಿಂದ ಹೊಟ್ಟೆಯ ಸೋಂಕು ಕಂಡುಬರದಂತೆ ನೋಡಿ ಕೊಳ್ಳುತ್ತದೆ. ಕರುಳಿನ ಚಲನೆಯನ್ನು ಉತ್ತಮಪಡಿಸಿ ನೀವು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗುವಂತೆ ನೋಡಿಕೊಳ್ಳುತ್ತದೆ.

ತೂಕ ಕಮ್ಮಿ ಮಾಡಲು ಸಹಕಾರಿ:
ಹೇಗಾದರೂ ಸರಿ ನಮ್ಮ ದೇಹದ ತೂಕ ಕಡಿಮೆಯಾದರೆ ಸಾಕಪ್ಪ ಎನ್ನುವವರಿಗೆ ಸೋರೆಕಾಯಿ ಒಂದು ಮ್ಯಾಜಿಕ್ ಮಂತ್ರ ಹಾಗೆ ಇದರಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ ಇರುವುದ ರಿಂದ ತೂಕವನ್ನು ಕಡಿಮೆ ಮಾಡುವಲ್ಲಿ ಇದರ ಪಾತ್ರ ಅತಿ ಹೆಚ್ಚು ಹಾಗಾಗಿ ಸೋರೆಕಾಯಿ ಜ್ಯೂಸ್ ನಿಮ್ಮ ದೇಹದ ಕೊಬ್ಬಿನ ಅಂಶವನ್ನು ಕರಗಿಸಿ ತೂಕವನ್ನು ಕಡಿಮೆ ಮಾಡುವಲ್ಲಿ ಅದ್ಭುತ ವಾಗಿ ಕೆಲಸ ಮಾಡುತ್ತದೆ.

ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ:
ಸೋರೆಕಾಯಿ ರಸ ಕುಡಿಯುವುದರಿಂದ ಮಾನಸಿಕ ಒತ್ತಡ ದೂರವಾಗುತ್ತದೆ ಮತ್ತು ಇದರಲ್ಲಿ ಕೋಲೀನ್ ಎಂಬ ಅಂಶ ಹೆಚ್ಚಾಗಿರುವುದರಿಂದ ಮಾನಸಿಕ ಆರೋಗ್ಯ ಉತ್ತಮ ಗೊಳ್ಳುತ್ತದೆ. ಬುದ್ಧಿಶಕ್ತಿ ಮತ್ತು ಚುರುಕುತನ ಕೂಡ ಸೋರೆಕಾಯಿ ರಸ ಸಹಾಯ ಮಾಡುತ್ತದೆ. ಹಾಗಾಗಿ ಶಾಲೆಗೆ ಹೋಗುವ ಮಕ್ಕಳಿಗೆ ಇದು ಬಹಳ ಪ್ರಯೋಜನಕಾರಿಯಾಗುತ್ತದೆ
.

ತಲೆ ಕೂದಲು ಹಾಗೂ ಚರ್ಮದ ಆರೋಗ್ಯಕ್ಕೆ ಒಳ್ಳೆಯದು:
ಸೋರೆಕಾಯಿ ನೈಸರ್ಗಿಕವಾಗಿ ನಮ್ಮ ದೇಹದ ವಿಷಕಾರಿ ಅಂಶಗಳನ್ನು ಹೊರಗೆ ಹಾಕುವುವದಲ್ಲದೆ ನಮ್ಮ ತಲೆ ಕೂದಲು ಸೊಂಪಾಗಿ ಬೆಳೆಯಲು ಮತ್ತು ಬೆಳ್ಳಗಾಗುದನ್ನು ಸಹ ತಡೆಗಟ್ಟುವಲ್ಲಿ ತುಂಬಾ ಸಹಾಯಕ ವಾಗುತ್ತದೆ.

ದೇಹದಲ್ಲಿ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ:
ನಮ್ಮ ದೇಹದಲ್ಲಿ ರಕ್ತ ಸಂಚಾರ ಚೆನ್ನಾಗಿ ನಡೆದರೆ ಯಾವುದೇ ಅಂಗಾಂಗಗಳಿಗೆ ತೊಂದರೆ ಎದುರಾಗುವುದಿಲ್ಲ. ಸೋರೆಕಾಯಿ ರಸ ತನ್ನಲ್ಲಿ ನೀರಿನ ಪ್ರಮಾಣವನ್ನು ಹೆಚ್ಚಾಗಿ ಒಳಗೊಂಡಿರುವುದರಿಂದ ನಮ್ಮ ದೇಹಕ್ಕೆ ನೀರಿನ ಅಂಶ ಹೆಚ್ಚು ಸಿಕ್ಕಂತಾಗಿ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ ಮತ್ತು ಎಲ್ಲಿಯೂ ಸಹ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇರುವುದಿಲ್ಲ.

ಮೇಘಾ ಮನೋಹರ ಕಂಪು

Exit mobile version