ಕಡಲೆಕಾಯಿಯ ಸೇವನೆಯಿಂದ ಆರೋಗ್ಯವನ್ನು ವೃದ್ದಿಸಿಕೊಳ್ಳಿ

Introduction : ಕಡಲೆಕಾಯಿ(Peanut) ಅಥವಾ ನೆಲೆಗಡಲೆಯನ್ನು ಬಡವರ ಬಾದಾಮಿ ಅಂತ ಕರೀತಾರೆ. ಯಾಕೆ ಗೊತ್ತಾ? ಈ ನೆಲಗಡಲೆಯಲ್ಲಿ ಅಷ್ಟೊಂದು ಪೌಷ್ಟಿಕಾಂಶ ತುಂಬಿದೆ. ಇದು ನಮ್ಮ ಮೆದುಳಿನ (Health benefits of Peanut) ಬೆಳವಣಿಗೆಗೆ, ದೃಷ್ಟಿ ದೋಷ ನಿವಾರಣೆಗೆ ಅಷ್ಟು ಮಾತ್ರವಲ್ಲ ಚರ್ಮ, ಹೃದಯ ಆರೋಗ್ಯವೃದ್ಧಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ.

ಈ ನೆಲಗಡಲೆಯ ಉಪಯೋಗಗಳು ಏನೇನು ಅನ್ನೋದನ್ನು ತಿಳಿದುಕೊಳ್ಳೋಣ ಮತ್ತು ಅದ್ರಲ್ಲಿ ಇರೋ ಪೌಷ್ಟಿಕಾಂಶಗಳು ಯಾವುವು ಅನ್ನೋದನ್ನು ತಿಳಿಯೋಣ ಬನ್ನಿ.

100 ಗ್ರಾಂ ಕಚ್ಚಾ ಕಡಲೆಕಾಯಿಯಲ್ಲಿರುವ ಪೌಷ್ಟಿಕಾಂಶಗಳು.

ಕಡಲೆಕಾಯಿಯ ಉಪಯೋಗಗಳು :

ಕಣ್ಣುಗಳಿಗೆ ಪರಿಣಾಮಕಾರಿ : ಕಡಲೆಕಾಯಿಯಲ್ಲಿ ಬಿಟ್ಯಾಕ್ಯಾರೋಟಿನ್ ಇದ್ದು, ಕಡಲೆಕಾಯಿಯನ್ನು ಸಮತೋಲಿತ ಪ್ರಮಾಣದಲ್ಲಿ ಸೇವಿಸಿದರೆ, ಇದು ಕಣ್ಣಿನ ದೃಷ್ಟಿ ಹೆಚ್ಚಿಸಲು ಸಹಾಯ ಮಾಡುತ್ತದೆ.

ಚರ್ಮದ ಆರೋಗ್ಯ : ಕಡಲೆಕಾಯಿಯಲ್ಲಿ ಒಮೆಗಾ -6 ಕೊಬ್ಬು ಸಮೃದ್ಧವಾಗಿದೆ. ಇದು ಉತ್ತಮ ಕೋಶಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಕಂಡು ಬರುವ ಎಲ್ಲಾ ಪ್ರೊಟೀನ್ ಗಳು. ಜೀವಸತ್ವಗಳು, ಖನಿಜಗಳು & ಉತ್ಕರ್ಶಣ ನೀರೋಧಕಗಳು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ, ಅದಲ್ಲದೆ ಜನರು ಕಡಲೆಕಾಯಿ ಪೇಸ್ಟ್ ಅನ್ನು ಪೇಸ್ ಪ್ಯಾಕ್ ಆಗಿಯೂ ಬಳಸುತ್ತಾರೆ. ಮುಖದ ಸೊಕ್ಕುಗಳನ್ನು ಸಹ ತೆಗೆದುಹಾಕುವಲ್ಲಿ ಕಡಲೆಕಾಯಿಯು ಪ್ರಮುಖ ಪಾತ್ರವಹಿಸುತ್ತದೆ.

ಇದನ್ನೂ ಓದಿ: ಮಲಬದ್ಧತೆಯನ್ನು ತಪ್ಪಿಸಲು ಈ ಆಹಾರವನ್ನು ನಿಯಮಿತವಾಗಿ ಸೇವಿಸಿ: ರಿಸಲ್ಟ್‌ ನೋಡಿ ಅಚ್ಚರಿ ಪಡ್ತೀರಾ !

ಸ್ಮರಣ ಶಕ್ತಿ ಸುಧಾರಿಸುತ್ತದೆ : ಕಡಲೆಕಾಯಿಯನ್ನು ಸಾಮಾನ್ಯವಾಗಿ ಮೆದುಳಿನ ಆಹಾರ (Food)ಎಂದು ಕರೆಯಲಾಗುತ್ತದೆ. ಏಕೆಂದರೆ ಅವುಗಳು ವಿಟಮಿನ್ ಬಿ 3 ಅಥವಾ ನಿಯಾಸಿನ್ ಅನ್ನು ಒಳಗೊಂಡಿರುತ್ತವೆ. ಇದು ಮೆದುಳಿನ (Brain) ಕಾರ್ಯವನ್ನು ಸುಧಾರಿಸುತ್ತದೆ. & ಸ್ಮರಣೆಯನ್ನು ಹೆಚ್ಚಿಸುತ್ತದೆ.

ಕ್ಯಾನ್ಸರ್ ತಡೆಗಟ್ಟುವಿಕೆ : ಪ್ರತಿನಿತ್ಯ ಶೇಂಗಾ ತಿನ್ನುವುದರಿಂದ ಇದರಲ್ಲಿರುವ ಆಯಂಟಿಆಕ್ಸಿಡೆಂಟ್ ಗಳು, ಕಬ್ಬಿಣ, ಪೋಲೇಟ ಕ್ಯಾಲಿಸಿಯಂ ಮತ್ತು ಸತುವು ದೇಹದ ರೋಗ ನಿರೋದಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಕಾನ್ಸರ್‌ ನಂತಹ ಅಪಾಯಕಾರಿ ರೋಗವನ್ನು ತಡೆಗಟ್ಟುತ್ತದೆ.

ಹೃದಯದ ಆರೋಗ್ಯವನ್ನು ಕಾಪಾಡುತ್ತದೆ : ವಾಲ್ನಟಸ್ ಮತ್ತು ಬಾದಾಮಿಯಂತಹ ವಿವಿಧ ಒಣ ಬೀಜಗಳು ಹೃದಯದ ಆರೋಗ್ಯಕರ ಆಹಾರಗಳಾಗಿವೆ. ಇದರೊಟ್ಟಿಗೆ ಕಡಲೆಕಾಯಿಯು ಅಷ್ಟೇ ಪರಿಣಾಮಕಾರಿಯಾಗಿದೆ.

ಕೊಲೆಸ್ಟ್ರಾಲ್ ನಿಯಂತ್ರಸಿ ಹೃದಯಕ್ಕೆ ರಕ್ಷಾ ಕವಚವಾಗುತ್ತದೆ. ರಕ್ತ ಹೆಪ್ಪುಗಟ್ಟುವಿಕೆ ಕಡಿಮೆ ಮಾಡುವ ಮೂಲಕ ಪಾರ್ಶವಾಯು ಬಾರದಂತೆ ಆರೋಗ್ಯ ಕಾಪಾಡುತ್ತದೆ.

ರಕ್ತದಲ್ಲಿ ಸಕ್ಕರೆಯನ್ನು ನಿಯಂತ್ರಸುತ್ತದೆ : ಕಡಲೆಕಾಯಿಯಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಿದ್ದು, ಮದುಮೇಹಿ ರೋಗಿಗಳು ಪ್ರತಿನಿತ್ಯ ನೆನಸಿದ ಕಡಲೆಕಾಯಿಯನ್ನು ಸೇವನೆ ಮಾಡುವುದರಿಂದ ಸಕ್ಕರೆ ಖಾಯಿಲೆಯನ್ನು ನಿಯಂತ್ರಿಸಬಹುದಾಗಿದೆ.

ಶೀತಕ್ಕೆ ಪರಿಹಾರ : ಚಳಿಗಾಲವಾಗಲಿ, ಮಳೆಯಾಗಲಿ, ಬೆಲ್ಲದೊಂದಿಗೆ ಕಡಲೆಕಾಯಿಯನ್ನು ತಿನ್ನುವುದು ದೇಹವನ್ನು ಬೆಚ್ಚಗಿಡುತ್ತದೆ. ಇದು ಶೀತ ಮತ್ತು ನೆಗಡಿಯಿಂದ ರಕ್ಷಿಸುತ್ತದೆ.

ಪೈಲ್ಸ್ ಕಾಯಿಲೆಗೆ ರಾಮಬಾಣ : ಕಡಲೆಕಾಯಿಯಲ್ಲಿ ನಾರಿನಂಶ ಹೆಚ್ಚಿರುವುದರಿಂದ, ಪೈಲ್ಸ್ ಸಮಸ್ಯೆಯಿಂದ ಬಳಲುತ್ತಿದ್ದವರು ಇದರ ಸೇವನೆ ಮಾಡಿದರೆ ಉತ್ತಮ. ಅಷ್ಟೇ ಅಲ್ಲ, ಕಡಲೆಕಾಯಿ ಸೇವನೆ ಪುರುಷ ಮತ್ತು ಮಹಿಳೆಯರ ಹಾರ್ಮೋನುಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

ಕೀಲು ನೋವಿಗೆ ಪರಿಹಾರ : ಬೇಯಿಸಿದ ಕಡಲೆಕಾಳನ್ನು ಬೆಲ್ಲದೊಂದಿಗೆ ತಿಂದರೆ ಕೀಲುನೋವು ನಿವಾರಣೆಯಾಗುತ್ತದೆ. ಬೆಲ್ಲ ಮತ್ತು ಕಡಲೆಯಲ್ಲಿ ಕ್ಯಾಲ್ಸಿಯಂ ಇರುವದ್ರಿಂದ, ಇದು ಮೂಳೆಗಳನ್ನು ಬಲಪಡಿಸುತ್ತದೆ. ಆದ್ದರಿಂದ ಕಡಲೆಕಾಯಿಯನ್ನು ಬೇಯಿಸಿ ತಿಂದರೆ ಕೀಲು, ಮೂಳೆ ನೋವಿನಿಂದ ಸಾಕಷ್ಟು ಉಪಶಮಾನವಾಗುತ್ತದೆ ಸಂಧಿವಾತ ರೋಗಿಗಳೂ ಇದನ್ನು ಸೇವಿಸಬಹುದು.

ಇದನ್ನೂ ಓದಿ: ವಿಮಾನದಲ್ಲಿ ನನಗೆ ಕಿಟಕಿ ಸೀಟೇ ಬೇಕು ಎಂದು ಹೆಚ್ಚು ಹಣ ಕೊಟ್ಟವನಿಗೆ ಆದ ಗತಿಯೇನು ಗೊತ್ತಾ?

ಗರ್ಭಿಣಿ ಮಹಿಳೆಯರಿಗೆ ಪ್ರಯೋಜನಕಾರಿ : ಕಡಲೆಕಾಯಿ ಪೋಲಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ಗರ್ಭಿಣಿ ಮಗುವಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಅದಕ್ಕಾಗಿಯೇ ಗರ್ಭಿಣಿಯರು ಕಡಲೆಕಾಯಿಯನ್ನು ಕಡ್ಡಾಯವಾಗಿ ಸೇವಿಸಬೇಕು ಎಂದು ವೈದ್ಯರು ಶಿಫಾರಸ್ಸು ಮಾಡುತ್ತಾರೆ.

ಸೂಚನೆ : ಕಡಲೆಕಾಯಿಯ ಅಲರ್ಜಿ ಇರುವವರು ಇದರ ಸೇವನೆಯಿಂದ ದೂರವಿರುವುದು ಒಳ್ಳೆಯದು.

Exit mobile version