ಕ್ಯಾರೆಟ್ ತಿನ್ನುವ ಅಭ್ಯಾಸ ಇವತ್ತಿನಿಂದಲೇ ರೂಡಿಸಿಕೊಳ್ಳಿ!

ಕ್ಯಾರೆಟ್ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಅಂಶಗಳನ್ನು ಒಳಗೊಂಡಿದ್ದು, ಇದು ಆರೋಗ್ಯಕ್ಕೆ ಬಹಳ ಉತ್ತಮವಾದ ತರಕಾರಿಯಾಗಿದೆ. ಪ್ರತಿದಿನ ಕ್ಯಾರೆಟ್ ತಿನ್ನುವುದರಿಂದ ಒಂದಲ್ಲ ಒಂದು ರೀತಿಯಲ್ಲಿ ಆರೋಗ್ಯ ಪ್ರಯೋಜನಗಳಿವೆ. ಅದರ ಉಪಯೋಗಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟುತ್ತದೆ :
ಕ್ಯಾರೆಟ್ ನಲ್ಲಿರುವ ವಿಟಮಿನ್ ಅಂಶಗಳು ದೇಹಕ್ಕೆ ಪುಷ್ಟಿಯನ್ನು ಒದಗಿಸುತ್ತವೆ. ಕ್ಯಾರೆಟ್ ಸೇವನೆಯು ಹೃದಯಕ್ಕೆ ಬಹಳ ಉತ್ತಮ. ಕ್ಯಾನ್ಸರ್ ನಂತಹ ಘಟಾನುಘಟಿ ಖಾಯಿಲೆಗಳನ್ನು ಕ್ಯಾರೆಟ್ ನಿಂದ ಗುಣಪಡಿಸಿಕೊಳ್ಳಬಹುದು.

ಕಣ್ಣಿನ ದೃಷ್ಟಿಗೆ ಉಪಯುಕ್ತ :
ವಯಸ್ಸಾದಂತೆ ಕಣ್ಣಿನ ಪೊರೆಗಳು ಮಂದವಾಗುತ್ತಾ ಇರುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿರುವುದರಿಂದ ಕಣ್ಣಿನ ದೃಷ್ಟಿಯು ಬೇಗ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಪ್ರತಿನಿತ್ಯ ಕ್ಯಾರೆಟ್ ಸೇವನೆಯನ್ನು ಮಾಡುವುದರಿಂದ ಇಂತಹ ಸಮಸ್ಯೆಗಳಿಂದ ದೂರವಿರಬಹುದು.

ಕಾಂತಿಯುತ ಚರ್ಮ ನಿಮ್ಮದಾಗಿಸಿಕೊಳ್ಳಬಹುದು :
ಪ್ರತಿನಿತ್ಯ ಕ್ಯಾರೆಟ್ ಅಥವಾ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಕ್ಯಾರೆಟ್ ನಲ್ಲಿರುವ ಔಷಧೀಯ ಗುಣಗಳು ಚರ್ಮ ಸುಕ್ಕುಗಟ್ಟದಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ಪ್ರತಿನಿತ್ಯ ಕ್ಯಾರೆಟ್ ಅಥವಾ ಕ್ಯಾರೆಟ್ ಜ್ಯೂಸನ್ನು ಸೇವಿಸುವುದರಿಂದ ಚರ್ಮದ ಕಾಂತಿ ಇನ್ನೂ ಹೆಚ್ಚುತ್ತದೆ.

ಮಕ್ಕಳ ಆರೋಗ್ಯಕ್ಕೆ ಬಹಳ ಉಪಯುಕ್ತ :
ಕ್ಯಾರೆಟ್ ನ ಬಣ್ಣ ಹಾಗೂ ಕ್ಯಾರೆಟ್ ನಲ್ಲಿರುವ ಸಿಹಿ ಅಂಶಗಳು ಮಕ್ಕಳನ್ನು ಬೇಗ ಆಕರ್ಷಿತರನ್ನಾಗಿ ಮಾಡುತ್ತದೆ. ಕ್ಯಾರೆಟ್ ನಲ್ಲಿ ಮಕ್ಕಳಿಗೆ ಬೇಕಾಗಿರುವ ಬೀಟಾ-ಕೇರೋಟಿನ್ ಅಂಶವಿದೆ. ಇದು ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಿದೆ. ಅದರಲ್ಲೂ ಮಕ್ಕಳಿಗೆ ಕೊಡುವುದಾದರೆ ತಾಜಾ ಕ್ಯಾರೆಟ್ ಗಳನ್ನು ಆರಿಸಿ ಕ್ಯಾರೆಟ್ ಸಲಾಡ್, ಕ್ಯಾರೆಟ್ ಅನ್ನು ಹುರಿದು ಅಥವಾ ಹಸಿ ಕ್ಯಾರೆಟ್ ಹಾಗೂ ಕ್ಯಾರೆಟ್ ನ ಬೇಕ್ ಹೀಗೆ ನಾನಾ ಥರದಲ್ಲಿ ಮಾಡಿಕೊಟ್ಟರೆ ಮಕ್ಕಳು ತಿನ್ನಲು ಇಷ್ಟಪಡುತ್ತಾರೆ.

Exit mobile version