ಉತ್ತರ ಭಾರತದಾದ್ಯಂತ ಡೆಂಗ್ಯೂ ಹಾವಳಿ ; ಈಗಲೇ ಈ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಅನುಸರಿಸಿ

Bengaluru : ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಡೆಂಗ್ಯೂ (Dengue) ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಬಿಹಾರ, ಮದ್ಯಪ್ರದೇಶ, ಉತ್ತರಪ್ರದೇಶ ಮತ್ತು ದೆಹಲಿಯಲ್ಲಿ ದಿನೇ ದಿನೇ ಡೆಂಗ್ಯೂ ಪ್ರಮಾಣ ಹೆಚ್ಚಾಗುತ್ತಿದೆ.

ಇನ್ನು ಉತ್ತರ ಪ್ರದೇಶದಲ್ಲಿ (Health Precautions For Dengue Virus) 3200ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ 380ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಅದೇ ರೀತಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಕೂಡಾ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು,

ದೆಹಲಿ ಸರ್ಕಾರ (Delhi Government) ಮುಂಜಾಗ್ರತಾ ಕ್ರಮವಾಗಿ ದೆಹಲಿಯ ಎಲ್ಲ ಆಸ್ಪತ್ರೆಗಳಲ್ಲಿ ಶೇಕಡಾ 15ರಷ್ಟು ಹಾಸಿಗೆಗಳನ್ನು ಡೆಂಗ್ಯೂ ರೋಗಿಗಳಿಗೆ ಮೀಸಲಿಡುವಂತೆ ಸೂಚನೆ ನೀಡಿದೆ.

https://youtu.be/si0b8XKvidI

ವರದಿಗಳ ಪ್ರಕಾರ, ಅಕ್ಟೋಬರ್ 1 ರಿಂದ ಅಕ್ಟೋಬರ್ 5ರ ನಡುವೆ ರಾಜಧಾನಿ (Health Precautions For Dengue Virus) ದೆಹಲಿಯಲ್ಲಿ 300ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ : https://vijayatimes.com/congress-is-not-only-a-party/

ಸದ್ಯ ಉತ್ತರ ಭಾರತದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳು ದಕ್ಷಿಣ ಭಾರತಕ್ಕೂ ಕಾಲಿಡುವ ಸಾಧ್ಯತೆ ಹೆಚ್ಚಿದ್ದು, ಹೀಗಾಗಿ ಈಗಲೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ. ಡೆಂಗ್ಯೂ ಬಾರದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ವಿವರ ಇಲ್ಲಿದೆ ನೋಡಿ.

ಡೆಂಗ್ಯೂ ರೋಗ ಲಕ್ಷಣಗಳು :

ಈಡಿಸ್ ಈಜಿಪ್ಟೈ ಸೊಳ್ಳೆ ಕಚ್ಚಿದ 3 ರಿಂದ 14 ದಿನಗಳ ಒಳಗೆ ಡೆಂಗ್ಯೂ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮೊದಲಿಗೆ ಜ್ವರದೊಂದಿಗೆ ಆರಂಭಗೊಳ್ಳುವ ಡೆಂಗ್ಯೂ, ನಂತರ ಬೇರೆ ಬೇರೆ ಲಕ್ಷಣಗಳಿಂದ ಉಲ್ಬಣಗೊಳ್ಳುತ್ತದೆ. ಡೆಂಗ್ಯೂ ಮುಂಜಾಗ್ರತಾ ಕ್ರಮವಾಗಿ, ಕೂಲರ್ಗಳು, ಪ್ಲಾಸ್ಟಿಕ್ ಕಂಟೇನರ್,

ಇದನ್ನೂ ಓದಿ : https://vijayatimes.com/health-tips-of-banana-flower/

ಬಕೆಟ್ಗಳು, ಬಳಸಿದ ಟೈರ್ಗಳು, ವಾಟರ್ ಕೂಲರ್ಗಳು ಹೀಗೆ ನೀರು ಶೇಖರಣೆಗೊಳ್ಳುವ ಸ್ಥಳಗಳನ್ನು ಕನಿಷ್ಠ ವಾರಕ್ಕೊಮ್ಮೆಯಾದರೂ ಶುದ್ದಗೊಳಿಸಬೇಕು. ಈ ರೀತಿಯ ನೀರಿನಲ್ಲಿಯೇ ಈಡಿಸ್ ಈಜಿಪ್ಟೈ ಸೊಳ್ಳೆ ಜೀವಿಸುತ್ತದೆ.

Exit mobile version