ಊಟವಾದ ನಂತರ ಸಿಗರೇಟ್ ಸೇದುತ್ತಿದ್ದೀರಾ ಹಾಗಾದ್ರೆ ಈಗಲೇ ನಿಲ್ಲಿಸಿ !

ಊಟವಾದ ನಂತರ ಹಲವರಿಗೆ ಹಲವಾರು ಅಭ್ಯಾಸಗಳಿರುತ್ತವೆ. ಕೆಲವರಿಗೆ ಚಹಾ ಸವಿಯುವುದು, ಸಿಗರೇಟ್ (health tips after food) ಸೇದುವುದು ಅಲ್ಲದೆ, ಮಲಗುವ ಅಭ್ಯಾಸ ಕೂಡ ಇರುತ್ತದೆ. ಇದರಿಂದ ಏನೆಲ್ಲ ತೊಂದರೆಗಳಾಗುತ್ತವೆ ನಿಮಗೆ ಗೊತ್ತಾ?

ಊಟ ಆದ ತಕ್ಷಣ ಸಿಗರೇಟ್ ಸೇದಲೇ ಬೇಡಿ


ಊಟ ಆದ ತಕ್ಷಣ ಸಿಗರೇಟ್ ಸೇದುವುದರಿಂದ ಹಲವಾರು ಅನಾರೋಗ್ಯ ಕಾಡಬಹುದು ಯಾಕೆಂದರೆ ಅದರಲ್ಲಿರುವ ನಿಕೋಟಿನ್ (Nicotine) ಅಂಶವು ನೇರವಾಗಿ ದೇಹದ ಮೇಲೆ ಪರಿಣಾಮ ಬೀರುತ್ತದೆ.

ಊಟವಾದ ತಕ್ಷಣ ಸಿಗರೇಟ್ ಸೇದುವುದು 10 ಸಿಗರೇಟ್ (Cigarette) ಸೇದುವುದಕ್ಕೆ ಸಮ ಎನ್ನಲಾಗುತ್ತದೆ

ಊಟದ ನಂತ್ರ ಚಹಾ ಕುಡಿಯುವುದು ಕೆಟ್ಟ ಅಭ್ಯಾಸ


ಹಲವರು ಊಟದ ಬಳಿಕ ಚಹಾ ಕುಡಿಯೋ ಅಭ್ಯಾಸವನ್ನು ರೂಡಿಸಿಕೊಂಡಿರುತ್ತಾರೆ. ಆದರೆ ಚಹಾದಲ್ಲಿರುವ ಕೆಫಿನ್ ಜೀರ್ಣಕ್ರಿಯೆಗೆ ಅಡ್ಡಿಯನ್ನುಂಟು ಮಾಡುತ್ತದೆ.

ಅಲ್ಲದೆ ಆಹಾರದಲ್ಲಿನ ಪ್ರೋಟಿನ್ (Protein) ಅಂಶವನ್ನು ನಾಶಮಾಡುತ್ತದೆ ಜೊತೆಗೆ ಕಬ್ಬಿನಾಂಶವನ್ನು ಹೀರಿಕೊಳ್ಳುತ್ತದೆ ಆದ್ದರಿಂದ ಊಟವಾದ ತಕ್ಷಣ ಚಹಾ ಕುಡಿಯುವ ಅಭ್ಯಾಸ ಬಿಡುವುದು ಉತ್ತಮ.

ಊಟದ ನಂತ್ರ ನಿದ್ರೆ ಮಾಡ್ಬೇಡಿ


ಊಟವಾದ ತಕ್ಷಣ ನಿದ್ರೆ ಮಾಡುವುದು ಹಲವರಿಗೆ ಮನಸ್ಸಿನ ಉಲ್ಲಾಸ ಮುದ ನೀಡುತ್ತದೆ ಎಂಬ ಕಲ್ಪನೆ ಇದೆ ಆದರೆ ಇದು ಜೀರ್ಣಕ್ರಿಯೆಗೆ ಅಡ್ಡಿಯನ್ನುಂಟು ಮಾಡುತ್ತದೆ. ಆಹಾರ ಕರಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ

ಹಾಗಾಗಿ ಹೊಟ್ಟೆ ತುಂಬಾ ತಿಂದ ತಕ್ಷಣ ನಿದ್ದೆ ಮಾಡುವುದರಿಂದ ಜೀರ್ಣಕ್ರಿಯೆ ಸರಿಯಾಗಿ ನಡೆಯದು ಇದನ್ನು ತಪ್ಪಿಸಲು ಊಟವಾದ ತಕ್ಷಣ (health tips after food) ನಿದ್ದೆ ಮಾಡದಿರುವುದು ಉತ್ತಮ

ಇದನ್ನು ಓದಿ: ಜೀವನಪೂರ್ತಿ ನಿದ್ರೆಯನ್ನು ಮಾಡದೆ ಎಚ್ಚರವಾಗಿಯೇ ಬದುಕಿದ್ದ ವ್ಯಕ್ತಿಯ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ!

ಊಟದ ತಕ್ಷಣ ಸ್ನಾನ ಮಾಡ್ಲೇ ಬೇಡಿ

ಊಟವಾದ ತಕ್ಷಣ ಕೆಲವರು ಸ್ನಾನ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ ಇದು ಹೊಟ್ಟೆಯ ಸುತ್ತಲೂ ರಕ್ತದ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡುತ್ತದೆ. ಸ್ನಾನ ಮಾಡುವುದರಿಂದ ದೇಹದ ಇತರ ಭಾಗಗಳಿಗೆ ರಕ್ತ ಸಂಚಾರ ವಾಗದಿರುವುದರಿಂದ ಜೀರ್ಣಕ್ರಿಯೆಗೆ ತೊಂದರೆ ಆಗಬಹುದು

ಊಟದ ನಂತ್ರ ಹಣ್ಣು ಸೇವಿಸುವುದೂ ತಪ್ಪು

ಹಣ್ಣು ತಿನ್ನುವುದು ಆರೋಗ್ಯಕ್ಕೆ ಉತ್ತಮ ಆದರೆ ಊಟ ಆದ ತಕ್ಷಣ ಹಣ್ಣನ್ನು ಸೇವಿಸುವುದರಿಂದ ಅದು ಅಜೀರ್ಣಕ್ಕೆ ಕಾರಣವಾಗಬಹುದು.

ಒಂದು ಅಥವಾ ಎರಡು ಗಂಟೆಗಳ ನಂತರ ಹಣ್ಣನ್ನು ಸೇವಿಸುವುದು ಉತ್ತಮ ಅದು ಅಲ್ಲದಿದ್ದರೆ ಊಟಕ್ಕೂ ಮೊದಲು ಹಣ್ಣನ್ನು ಸೇವಿಸುವುದು ಇನ್ನೂ ಉತ್ತಮ.

ಹೀಗೆ ನಾವು ಗೊತ್ತಿಲ್ಲದೆ ಮಾಡುವ ಕೆಲವೊಂದು ಕಾರ್ಯಗಳು ನಮ್ಮ ಆರೋಗ್ಯಕ್ಕೆ ಕುಂದು ತರಬಹುದು ಇದರಿಂದ ಜಾಗರೂಕರಾಗಿರುವುದರಿಂದ ನಮ್ಮ ಆರೋಗ್ಯ ಸ್ಥಿತಿ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.

ಮೊಹಮ್ಮದ್ ಶರೀಫ್

Exit mobile version