Health Tips : ಕಣ್ಣಿನ ಆರೋಗ್ಯಕ್ಕಾಗಿ ಈ ಕ್ರಮಗಳನ್ನು ತಪ್ಪದೆ ಅನುಸರಿಸಿ

health

Health Tips : ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆಯು(health tips for Human Eye) ಹೆಚ್ಚು ಜನರಲ್ಲಿ ಕಂಡು ಬರುತ್ತಿದೆ.

ಇಂದು ಮೊಬೈಲ್(Mobile) ಮತ್ತು ಇತರೆ ಗ್ಯಾಜೆಟ್ಗಳ(Gadgets) ವೀಕ್ಷಣೆಯಿಂದ ಕಣ್ಣುಗಳ ಮೇಲೆ ದುಷ್ಫರಿಣಾಮಗಳೇ(health tips for Human Eye) ಹೆಚ್ಚು. ಹೀಗಾಗಿ ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡಾ ಕಣ್ಣಿನ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ.

ಆದರೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಪೋಷಕಾಂಶಗಳು ಬಹಳ ಮುಖ್ಯವಾದರೆ, ಕೆಲವು ಮುನ್ನೆಚ್ಚರಿಕೆಗಳು ಸಹ ಅಷ್ಟೇ ಮುಖ್ಯ. ಅಂತಹ ಕ್ರಮಗಳ ವಿವರ ಇಲ್ಲಿದೆ ತಪ್ಪದೆ ಅನುಸರಿಸಿ.

ಇದನ್ನೂ ಓದಿ : https://vijayatimes.com/congress-slams-state-bjp/

ಗೆಜೆಟ್ಗಳಿಂದ ದೂರವಿರಿ : ಮೊಬೈಲ್ ಅನ್ನು ದೀರ್ಘಕಾಲದವರೆಗೆ ನೋಡುವುದರಿಂದ ದೃಷ್ಟಿ ಮಸುಕಾಗುತ್ತದೆ. ಹೀಗಾಗಿ ಹೆಚ್ಚು ಮೊಬೈಲ್‌ ಬಳಕೆ ಬೇಡ. ಇನ್ನು ಲ್ಯಾಪ್ಟಾಪ್ನಲ್ಲಿ ದೀರ್ಘಕಾಲ ಕೆಲಸ ಮಾಡುತ್ತಿದ್ದರೆ, ಆಂಟಿ-ಗ್ಲೇರ್ ಡಿಸ್‌ಪ್ಲೇ ಬಳಸಿ. ಅದೇ ರೀತಿ ಪ್ರತಿ 20 ನಿಮಿಷಕ್ಕೊಮ್ಮೆ ವಿರಾಮ ತೆಗೆದುಕೊಳ್ಳಿ.

ಧೂಮಪಾನ ಮಾಡದಿರಿ : ಧೂಮಪಾನವು(Smoking) ಶ್ವಾಸಕೋಶದ(Respiratory) ಜೊತೆಗೆ ಕಣ್ಣುಗಳ ದೃಷ್ಟಿ ಮೇಲೂ ಪರಿಣಾಮ ಬೀರುತ್ತದೆ. ಧೂಮಪಾನ ಮಾಡಿದರೆ ಅದು ನಿಮ್ಮ ಕಣ್ಣುಗಳಿಗೆ ಹಾನಿ ಮಾಡುತ್ತದೆ.

ಸಿಟ್ರಸ್ ಹಣ್ಣುಗಳು : ಕಣ್ಣಿನ ಆರೋಗ್ಯಕ್ಕೆ ಸಿಟ್ರಸ್ ಹಣ್ಣುಗಳು(Citrus Fruits) ಮುಖ್ಯ. ಹೀಗಾಗಿ ಲಿಂಬೆ, ಕಿತ್ತಳೆ ಮತ್ತು ಇತರ ಸಿಟ್ರಸ್ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದು.

ಇದನ್ನೂ ಓದಿ : https://vijayatimes.com/beauty-tips-for-skin-tan/

ನೇರಳಾತೀತ ಕಿರಣ : ಸೂರ್ಯನ ಹಾನಿಕಾರಕ ನೇರಳಾತೀತ ಕಿರಣಗಳು ಕಣ್ಣುಗಳ ಗಂಭೀರ ಪರಿಣಾಮ ಬೀರುತ್ತವೆ. ಆದ್ದರಿಂದ ಬಿರು ಬಿಸಿಲಿಗೆ ಕಣ್ಣುಗಳನ್ನು ಒಡ್ಡಬಾರದು. ಬಿಸಿಲಿನಲ್ಲಿದ್ದಾಗಲೆಲ್ಲಾ, ನಿಮ್ಮ ಕಣ್ಣುಗಳ ಕಾಳಜಿ ವಹಿಸಬೇಕು. ಏಕೆಂದರೆ ಈ ನೇರಳಾತೀತ ಹಾನಿಕಾರಕ ಕಿರಣಗಳು ಕಣ್ಣಿನ ಪೊರೆ ಮೇಲೆ ಪರಿಣಾಮ ಬೀರಬಹುದು.

ಉತ್ತಮ ಆಹಾರ : ಕಣ್ಣಿನ ಆರೋಗ್ಯಕ್ಕೆ ಪೌಷ್ಠಿಕ ಮತ್ತು ಸಮತೋಲಿತ ಆಹಾರವು ಬಹಳ ಮುಖ್ಯವಾಗಿದೆ. ಆಹಾರದಲ್ಲಿ ತರಕಾರಿಗಳು, ಮೀನು, ಮೊಟ್ಟೆ, ತುಪ್ಪ, ಬೀಜಗಳು, ಬೀನ್ಸ್ಗಳನ್ನು ಹೆಚ್ಚಾಗಿ ಸೇವಿಸಬೇಕು.

ಇದನ್ನೂ ಓದಿ : https://youtu.be/goe0pevvNrg ಭ್ರಷ್ಟ ಜಿವಿಕೆಯ 108 ಹಗರಣ!

ನೀರು : ಕಣ್ಣಿನ ಗ್ರಂಥಿಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ನೀರು ಬಹಳ ಮುಖ್ಯ. ಹೀಗಾಗಿ ಪ್ರತಿದಿನ ಕನಿಷ್ಠ 3 ಲೀಟರ್‌ ನೀರನ್ನು ನಿಯಮಿತವಾಗಿ ಸೇವಿಸಬೇಕು.

Exit mobile version