ಬಿಪೊರ್ ಜಾಯ್ ಚಂಡಮಾರುತ ಅಬ್ಬರ,ಕರಾವಳಿ ಭಾಗದಲ್ಲಿ ಹೈ ಅಲರ್ಟ್ ಘೋಷಣೆ : ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಸೂಚನೆ

ಮಂಗಳೂರು: ಬಿಪೊರ್ ಜಾಯ್ (High alert declared coast)ಚಂಡಮಾರುತವು ಬಲಗೊಳ್ಳುತ್ತಿರುವುದರಿಂದ ಕರ್ನಾಟಕದ ಕರಾವಳಿಯಲ್ಲಿ ಭಾರೀ ಪ್ರಮಾಣದಲ್ಲಿ ಅಲೆ ಏಳುವ ಸಾಧ್ಯತೆ

ಇರುವುದರಿಂದ ಭಾರತೀಯ ಹವಾಮಾನ ಇಲಾಖೆಯು (Indian Meteorological Department) ಎಚ್ಚರಿಕೆಯನ್ನು ನೀಡಿದೆ ಮತ್ತು ಅಲರ್ಟ್ ಘೋಷಣೆ ಮಾಡಿದೆ.

ಮುಂದಿನ 5 ದಿನಗಳ ಕಾಲ ಸಾರ್ವಜನಿಕರು, ಪ್ರವಾಸಿಗರು, ಮಕ್ಕಳು, ಸ್ಥಳೀಯರು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ : 2026ರ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಆಡಲ್ಲ : ಅಭಿಮಾನಿಗಳಿಗೆ ಶಾಕ್ ಕೊಟ್ಟ ಲಿಯೋನೆಲ್ ಮೆಸ್ಸಿ..!

ಸಮುದ್ರದ ಹತ್ತಿರ ಓಡಾಡುವುದು, ಆಟವಾಡುವುದು ಕೂಡಾ ನಿಷೇಧಿಸಿ ದಕ್ಷಿಣ ಕನ್ನಡ (Dakshina Kannada) ಪ್ರಾದೇಶಿಕ ವಿಪತ್ತು ನಿರ್ವಹಣಾ ಬ್ಯೂರೋ (India Meteorological Department)

ನಿಷೇಧಾಜ್ಞೆ ಹೊರಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆ 42 ಕಿಲೋಮೀಟರ್ ಕರಾವಳಿ ತೀರವನ್ನು ಹೊಂದಿದೆ. ಬಿಪೊರ್ ಜಾಯ್ ಚಂಡಮಾರುತವು ಪಶ್ಚಿಮ ಕರಾವಳಿಗೆ 3 ರಿಂದ 4 ಮೀ

ಸಮುದ್ರದ ಅಲೆಗಳ ಎತ್ತರದೊಂದಿಗೆ ಅಪ್ಪಳಿಸುವ ಹಿನ್ನೆಲೆ ಎಚ್ಚರಿಕೆ ನೀಡಲಾಗಿದೆ. ಆದ್ದರಿಂದ, ಜೂನ್ 19 ರವರೆಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.

ಬಿಪೊರ್ ಜಾಯ್ ಚಂಡಮಾರುತವು ಈಶಾನ್ಯ ಅರಬ್ಬಿ ಸಮುದ್ರದಲ್ಲಿ ಮತ್ತಷ್ಟು ತೀವ್ರಗೊಂಡಿದ್ದು,ಸೌರಾಷ್ಟ್ರ ಮತ್ತು ಕಚ್ ಕರಾವಳಿಗೆ ಭಾರತೀಯ ಹವಾಮಾನ ಇಲಾಖೆ (IMD) ಇಂದು ಬೆಳಿಗ್ಗೆ ರೆಡ್ ಅಲರ್ಟ್ ಘೋಷಿಸಿದೆ.

ಅಲ್ಲದೆ, ಇತರ ರಾಜ್ಯಗಳಿಗೂ ಚಂಡಮಾರುತ ಅಪ್ಪಳಿಸಲಿದೆ ಎಂದು (High alert declared coast) ನಿರೀಕ್ಷಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರು ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ಬಿಪೊರ್‌ ಜಾಯ್ ಚಂಡಮಾರುತದ ಕುರಿತು ಸಭೆ ನಡೆಸಿದರು ಮತ್ತು ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳನ್ನು

ಪರಿಶೀಲಿಸಿದರು. ಯಾವುದೇ ಸಾವುನೋವುಗಳು ದಾಖಲಾಗದಂತೆ ನೋಡಿಕೊಳ್ಳಲು ಮತ್ತು ಸಂಭವನೀಯ ಹಾನಿಯನ್ನು ಕಡಿಮೆ ಮಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳು ಮತ್ತು

ಮಂತ್ರಿಗಳಿಗೆ ಸೂಚನೆ ನೀಡಲಾಗಿದೆ. ಸಭೆಯಲ್ಲಿ ಗುಜರಾತ್(Gujarat) ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ರಾಜ್ಯದ ಎಂಟು ಚಂಡಮಾರುತ ಪೀಡಿತ ಜಿಲ್ಲೆಗಳ ಸಂಸದರು ಭಾಗವಹಿಸಿದ್ದರು.

ಬಿಪೊರ್‌ ಜಾಯ್ ಚಂಡಮಾರುತ ಜೂನ್ 15 ರಂದು ಗುಜರಾತ್ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ.


ಬಿಪೊರ್‌ ಜಾಯ್ ಚಂಡಮಾರುತದ ಪ್ರಭಾವದಿಂದ ಗುಜರಾತ್‌ನ ಕಚ್ ಜಿಲ್ಲೆಯ ಜಾಖೋವ್ ಬಂದರಿನ ಬಳಿ ಭೂಕುಸಿತ ಸಂಭವಿಸುವ ಸಾಧ್ಯತೆಯಿದೆ. ಹೀಗಾಗಿ, ಎರಡು ದಿನಗಳ ಹಿಂದೆ,

ಅಧಿಕಾರಿಗಳು ಕರಾವಳಿ ಪ್ರದೇಶಗಳಿಂದ 30,000 ಜನರನ್ನು ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಿಸಿದರು.

ಇದನ್ನೂ ಓದಿ : ಗೃಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ : ನೋಂದಣಿ ಪ್ರಕ್ರಿಯೆ ಯಾವಾಗದಿಂದ ಪ್ರಾರಂಭ?

ಹವಾಮಾನ ಇಲಾಖೆಯ ಪ್ರಕಾರ, ಚಂಡಮಾರುತವು ಉತ್ತರದ ಕಡೆಗೆ ಗಂಟೆಗೆ 5 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದೆ ಮತ್ತು ಗುಜರಾತ್ ರಾಜ್ಯದ ಪೋರಬಂದರ್‌ನಿಂದ ನೈಋತ್ಯಕ್ಕೆ ಸುಮಾರು

290 ಕಿಲೋಮೀಟರ್ನಲ್ಲಿ ಅಪ್ಪಳಿಸಲಿದೆ. ಇದು ಗುರುವಾರ ಗುಜರಾತ್ ರಾಜ್ಯದ ಸೌರಾಷ್ಟ್ರ,bಕಚ್ ಪ್ರದೇಶಗಳು ಹಾಗೂ ಪಕ್ಕದ ಪಾಕಿಸ್ತಾನದ ಕರಾವಳಿಯನ್ನು ಸಹ ದಾಟುವ ನಿರೀಕ್ಷೆಯಿದೆ ಎಂದು ವರದಿಗಳು ಹೇಳಿವೆ.

ರಶ್ಮಿತಾ ಅನೀಶ್

Exit mobile version