3 ಸರ್ಕಾರ ಬದಲಾದರೂ ಸರ್ಕಾರಿ ಶಾಲೆಗಳ ಪರಿಸ್ಥಿತಿ ಏಕೆ ಬದಲಾಗಿಲ್ಲ : ಹೈಕೋರ್ಟ್ ತೀವ್ರ ತರಾಟೆ

engaluru : 2013 ರಿಂದಲೂ ಕರ್ನಾಟಕ ಹೈಕೋರ್ಟ್ (High court about schools) ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಕೊರತೆಗಳಿರುವ ಬಗ್ಗೆ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ

ಅರ್ಜಿಯ ವಿಚಾರಣೆ ನಡೆಸುತ್ತಿದೆ. ಈ ಹಿಂದೆಯೇ ಹೈಕೋರ್ಟ್ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವಂತೆ ನಿರ್ದೇಶನ ನೀಡಿತ್ತು.ಅದರಂತೆ ಇಂದು ಸರ್ಕಾರವು

ಹೈಕೋರ್ಟ್ ಆದೇಶದ ಅನುಸಾರ ಕೈಗೊಂಡ ಕ್ರಮಗಳ ಬಗ್ಗೆ ಇಂದು ವರದಿ (High court about schools) ಸಲ್ಲಿಸಿದೆ.

ವರದಿಯ ಜೊತೆಗೆ ಶಾಲೆಗಳ ಶೌಚಾಲಯಗಳ ಫೋಟೋ ಗಮನಿಸಿದ ಹೈಕೋರ್ಟ್ ನಮ್ಮ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯುವ ನೀರು, ಹೆಣ್ಣು ಮಕ್ಕಳಿಗೆ ಶೌಚಾಲಯದಂತಹ

ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ವಿಫಲವಾಗಿರುವ ಕುರಿತು ಇಂದು ಗುರುವಾರ ರಾಜ್ಯ ಸರ್ಕಾರವನ್ನು (Government) ಕಟುವಾಗಿ ಪ್ರಶ್ನಿಸಿತು.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಗಿರುವ ಪ್ರಸನ್ನ ಬಿ ವರಾಳೆ (Prasanna B Varale) ಹಾಗೂ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ (M G S Kamal) ಇವರಿದ್ದ ವಿಭಾಗೀಯ ಪೀಠ ಸರ್ಕಾರಿ

ಶಾಲೆಗಳಲ್ಲಿ ನೀರು, ಶೌಚಾಲಯಗಳ ದುಸ್ಥಿತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಮ್ಮ ಆತ್ಮಸಾಕ್ಷಿಗೆ ಶೌಚಾಲಯಗಳ ಫೋಟೋ ಆಘಾತ ನೀಡುತ್ತಿದೆ. ಗಿಡಬಳ್ಳಿ ಬೆಳೆದಿವೆ, ಶೌಚಾಲಯಗಳು ದುಸ್ಥಿತಿಯಲ್ಲಿವೆ.

ತಮ್ಮ ಮನೆ ಮತ್ತು ಶೌಚಾಲಯವನ್ನೂ ಅಧಿಕಾರಿಗಳು ಹೀಗೇ ಇಟ್ಟುಕೊಳ್ಳುತ್ತಾರಾ? ಸರ್ಕಾರ ಸಲ್ಲಿಸಿರುವ ಈ ವರದಿ ಅತ್ಯಂತ ಬೇಸರದಾಯಕ ಹಾಗೂ ಆಘಾತಕಾರಿಯಾಗಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಆನ್‌ಲೈನ್ ವಂಚನೆ ಜಾಲವಾದ ಪಿಂಕ್ ವಾಟ್ಸ್ಆ್ಯಪ್ ಬಗ್ಗೆ ಪೊಲೀಸ್ ಇಲಾಖೆ ಎಚ್ಚರಿಕೆ

ಸರ್ಕಾರಕ್ಕೆ ಕುಡಿಯುವ ನೀರಿನ ಪೂರೈಕೆ ಮಾಡಲೂ ಸಾಧ್ಯವಿಲ್ಲವೇ. ತಲೆ ಮೇಲೆ ಹೊತ್ತು ಕುಡಿಯುವ ನೀರನ್ನು ತರಲಾಗುತ್ತಿದೆ ಎಂದು ಈ ವರದಿಯಲ್ಲಿದೆ. ಕನಿಷ್ಠ ಪಕ್ಷ ಮೂಲಭೂತ ಸೌಕರ್ಯಗಳೇ

ಇಲ್ಲದ ಶಾಲೆಗಳಿಂದ ಉತ್ತಮ ಶಿಕ್ಷಣ ಸಾಧ್ಯವೇ? ನಾವು ಎಂಥ ಸಮಾಜವನ್ನು ನಿರ್ಮಿಸುತ್ತಿದ್ದೇವೆ.ಅಧಿಕಾರಿಗಳಿಗೆ ಇಂತಹ ವರದಿ ಸಲ್ಲಿಸುವ ಧೈರ್ಯ ಹೇಗೆ ಬಂತು? ಯಾರು ಇದಕ್ಕೆಲ್ಲಾ

ಜವಾಬ್ದಾರಿ ಅಧಿಕಾರಿಗಳು ಇಂತಹ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸುತ್ತಾರಾ? ಎಂದು ಹೈಕೋರ್ಟ್ ಪ್ರಶ್ನಿಸಿದೆ.

3 ಸರ್ಕಾರ ಬದಲಾದರೂ ಶಾಲೆಗಳ ಪರಿಸ್ಥಿತಿ ಬದಲಾಗಿಲ್ಲ

ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ 2013 ರಲ್ಲಿ ದಾಖಲಾದಾಗಿನಿಂದಲೂ ಒಟ್ಟು 3 ಸರ್ಕಾರ ಬದಲಾಗಿವೆ. ಶಾಲೆಗಳ ಪರಿಸ್ಥಿತಿ ಆದರೂ ಬದಲಾಗಿಲ್ಲ. ಸ್ವಲ್ಪವಾದರೂ ಕಾಳಜಿ,

ಗಂಭೀರತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಇರಬೇಕು. ಪರಿಸ್ಥಿತಿ ನೋಡಿ ನಮಗೆ ನೋವಾಗಿದೆ, ಖಿನ್ನರಾಗಿದ್ದೇವೆ. ರಾಜ್ಯಾದ್ಯಂತ ಸುಮಾರು 4,000 ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ,

ಆಟದ ಮೈದಾನಗಳು ಮತ್ತು ಕಾಂಪೌಂಡ್‌ಗಳಂತಹ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎತ್ತಿ ತೋರಿಸಿದರು.

ಇದನ್ನೂ ಓದಿ : ಇಂದಿರಾ ಕ್ಯಾಂಟೀನ್‌ ಊಟದ ಮೆನು ಬದಲಾವಣೆ : ಹೊಸ ಸೇರ್ಪಡೆ ಪಟ್ಟಿ ಇಲ್ಲಿದೆ ನೋಡಿ

ಈ ಶಾಲೆಗಳಲ್ಲಿ ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಶಿಫಾರಸು ಮಾಡಿದ ವರದಿಯನ್ನು ಪೀಠವು ಸ್ವೀಕರಿಸಿದ್ದು, ಇದು ಗಂಭೀರವಾಗಿರುವ ವಿಷಯವಾಗಿದೆ,ಶಾಲೆಗಳಲ್ಲಿ ಶಿಕ್ಷಕರು ಮತ್ತು

ಕೊಠಡಿಗಳು ಇಲ್ಲದಿದ್ದರೂ ಹೇಗೋ ಹೊಂದಾಣಿಕೆ ಮಾಡಲು ಸಾಧ್ಯವಾಗಬಹುದು ಆದರೆ ಕನಿಷ್ಠ ಅವಶ್ಯಕತೆಯಾಗಿರುವ ಬಾಲಕಿಯರ ಶೌಚಾಲಯಗಳಿಲ್ಲ, ಕುಡಿವ ನೀರಿನ ವ್ಯವಸ್ಥೆ ಏಕೆ ಇಲ್ಲ,

ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಸಣ್ಣ ಪಟ್ಟಣ ಅಥವಾ ಸಣ್ಣ ಹಳ್ಳಿಗಳ ಮಕ್ಕಳಿಗೆ ಕುಡಿಯಲು ನೀರು ಸಿಗುತ್ತಿಲ್ಲವೇಕೆ?ಇದು ನಾಚಿಕೆಗೇಡಿನ ಸಂಗತಿಯಲ್ಲವೇ? ” ಎಂದು ಪ್ರಶ್ನಿಸಿತು.

ಈ ಶಾಲೆಗಳು ತೆರೆದಾಗ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಶಾಲಾ ಮೇಲ್ವಿಚಾರಕರು ಈ ವಿಷಯದ ಬಗ್ಗೆ ಕಾಲಕಾಲಕ್ಕೆ ವರದಿಗಳನ್ನು ಸಲ್ಲಿಸಿದ್ದರೆ

ಈ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ವಿವರಿಸಿ. ಅರ್ಜಿಯನ್ನು 2013 ರಲ್ಲಿ ಪರಿಗಣನೆಗೆ ಸ್ವೀಕರಿಸಲಾಗಿದೆ. ಈಗ ನಾವು 2023 ರಲ್ಲಿ ಇದ್ದೇವೆ. ಹತ್ತು ವರ್ಷಗಳು ಕಳೆದರೂ ಪರಿಸ್ಥಿತಿ ಸುಧಾರಿಸಿಲ್ಲ.

ಬದಲಾಗಿ ಪರಿಸ್ಥಿತಿ ಕೆಟ್ಟಪರಿಸ್ಥಿತಿಯಿಂದ ದಯನೀಯ ಸ್ಥಿತಿಗೆ ತಿರುಗುತ್ತಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ

ರಶ್ಮಿತಾ ಅನೀಶ್

Exit mobile version