ದಂಡ ಕಟ್ಟಿ: 2019 ಕ್ಕಿಂತ ಮುಂಚಿನ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಕಡ್ಡಾಯ, ಇಲ್ಲವೇ ದಂಡ ಕಟ್ಟಿ !

Bengaluru, ಆಗಸ್ಟ್‌ 22: ಏಪ್ರಿಲ್ 1, 2019 ರ ಮೊದಲು ನೋಂದಾಯಿಸಲಾದ ಎಲ್ಲಾ ವಾಹನಗಳು ಹೈ-ಸೆಕ್ಯುರಿಟಿ ನಂಬರ್ ಪ್ಲೇಟ್‌ (HSRP mandatory for vehicle) ಅನ್ನು

ಹೊಂದುವುದು ಕಡ್ಡಾಯ ಎಂದು ರಾಜ್ಯ ಸಾರಿಗೆ ಇಲಾಖೆ (State Transport Department) ಘೋಷಿಸಿದೆ. ಒಂದು ವೇಳೆ ನವೆಂಬರ್ 17 ರ ಒಳಗೆ ಎಚ್‌ಎಸ್‌ಆರ್‌ಪಿ ಹೊಂದಿಲ್ಲದಿದ್ದರೆ

ದಂಡ ಕಟ್ಟಬೇಕಾಗುತ್ತದೆ ಅನ್ನೋ ಎಚ್ಚರಿಕೆಯನ್ನೂ ನೀಡಿದೆ. ಕ್ರೋಮಿಯಂ (Chromium) ಆಧಾರಿತ ಹೊಲೊಗ್ರಾಮ್‌ನಂತಹ (Hologram) ಹಲವಾರು ವೈಶಿಷ್ಟ್ಯಗಳೊಂದಿಗೆ ಮತ್ತು

ಶಾಶ್ವತ ಗುರುತಿನ ಸಂಖ್ಯೆ ಯೊಂದಿಗೆ ಈ ನಂಬರ್‌ ಪ್ಲೇಟ್‌ (Number plate) ಸಜ್ಜುಗೊಂಡಿದೆ.

ಅಷ್ಟೇ ಅಲ್ಲದೆ ಎಚ್‌ಎಸ್‌ಆರ್‌ಪಿಗಳನ್ನು ಟ್ಯಾಂಪರ್(Tamper) ಮಾಡಲು ಸಾಧ್ಯವಿಲ್ಲ ಎಂದು ಸಾರಿಗೆ ಇಲಾಖೆ ಹೇಳಿದೆ. ಇದು ಏಕರೂಪತೆಯನ್ನು ನೋಂದಣಿ ಫಲಕಗಳಲ್ಲಿ ( ನಂಬರ್‌ ಪ್ಲೇಟ್‌ )

ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಗಸ್ಟ್ 17, 2023 ರಂದು ಈ ಕುರಿತಾದ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ನವೆಂಬರ್ 17 ರ ಗಡುವನ್ನು ಸಹ ಇದಕ್ಕೆ ನೀಡಲಾಗಿದೆ. ದಂಡದ ಕ್ರಮವನ್ನು ವಿಫಲವಾದ ವಾಹನ ಮಾಲೀಕರ ವಿರುದ್ಧ ತೆಗೆದುಕೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.

ರೂ 500 ರಿಂದ ರೂ 1,000ರ ವರೆಗೆ ದಂಡ ವಿಧಿಸಲಾಗುತ್ತದೆ (HSRP mandatory for vehicle) ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಸುಳ್‌ ಸುದ್ದಿ ಹಬ್ಬಿಸಿದ್ರೆ ಹುಷಾರ್‌ ! ಸಾಮಾಜಿಕ ಜಾಲತಾಣಗಳಲ್ಲಿ ಸುಳ್‌ಸುದ್ದಿ ಪತ್ತೆ ಹಚ್ಚುವ ಫ್ಯಾಕ್ಟ್ ಚೆಕ್ unit ಗೆ ಸಿಎಂ ಗ್ರೀನ್ ಸಿಗ್ನಲ್

ಸಾರಿಗೆ ಇಲಾಖೆಯ ಅಂದಾಜಿನ ಪ್ರಕಾರ, ರಾಜ್ಯದಲ್ಲಿ ಸುಮಾರು 1.75 ಕೋಟಿಯಿಂದ 2 ಕೋಟಿ ವಾಹನಗಳು ಏಪ್ರಿಲ್ 1, 2019 ರ ಮೊದಲು ನೋಂದಣಿಯಾಗಿವೆ ಎಂದು ಹಿರಿಯ

ಅಧಿಕಾರಿಯೊಬ್ಬರು ಹೇಳಿದ್ದಾರೆ. ಎಲ್ಲಾ ಹೊಸ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆಯನ್ನು ‘ಎಪ್ರಿಲ್ 1, 2019 ರಿಂದ ಜಾರಿಗೆ ಬರುವಂತೆ, ಕಡ್ಡಾಯಗೊಳಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ, ಈ ಪ್ಲೇಟ್‌ಗಳನ್ನು(Plate) ವಾಹನ ವಿತರಕರಿಗೆ ಪೂರೈಸಲು ವಾಹನ ತಯಾರಕರು ಅಧಿಕೃತ ಎಚ್‌ಎಸ್‌ಆರ್‌ಪಿ ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿ

ಮಾಹಿತಿ ನೀಡಿದ್ದಾರೆ. ಅಧಿಕೃತ ಎಚ್‌ಎಸ್‌ಆರ್‌ಪಿ ತಯಾರಕರು ಹಳೆಯ ವಾಹನಗಳಿಗೂ ಸಹ ಪ್ಲೇಟ್‌ಗಳನ್ನು ಪೂರೈಸುತ್ತಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಾಹನ ತಯಾರಕರ ಅಧಿಕೃತ ಡೀಲರ್‌ಗಳ(Dealer) ಮೂಲಕ ‘ಹಳೆಯ ವಾಹನಗಳ ಮಾಲೀಕರು ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅನ್ನು ಆರ್ಡರ್ (Order) ಮಾಡಬಹುದು’

ಎಂದು ಅವರು ಹೇಳಿದ್ದಾರೆ. ಎಚ್‌ಎಸ್‌ಆರ್‌ಪಿ ಪ್ಲೇಟ್‌ ಬೆಲೆಯು ರೂ 400 ರಿಂದ ರೂ 500 ರವರೆಗೆ ‘ನಾಲ್ಕು ಚಕ್ರಗಳ ವಾಹನಕ್ಕೆ ಇರಲಿದೆ. ರೂ 250 ರಿಂದ ರೂ 300 ರ ವರೆಗೆ ದ್ವಿಚಕ್ರ ವಾಹನಗಳಿಗೆ

ಇರಲಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ಈಗಾಗಲೇ 12 ರಾಜ್ಯಗಳು ದ್ವಿಚಕ್ರ ವಾಹನಗಳಿಗೆ(Two wheeler) ಈ ನಿಯಮವನ್ನು ಜಾರಿಗೆ ತಂದಿವೆ’ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ : ಸಾಲ ಪಡೆದ ವ್ಯಕ್ತಿ ವಕೀಲನೇ ಆಗಿರಲಿ, ನ್ಯಾಯಾಧೀಶರಾಗಿರಲಿ ರಕ್ಷಣೆ ನೀಡಲಾಗದು: ಹೈಕೋರ್ಟ್ ಸ್ಪಷ್ಟನೆ

ಎಚ್‌ಎಸ್‌ಆರ್‌ಪಿ ಅವಶ್ಯಕತೆ ಏನು?
ಈ ಎಚ್‌ಎಸ್‌ಆರ್‌ಪಿ ಟ್ಯಾಂಪರಿಂಗ್ ಮತ್ತು ಪ್ಲೇಟ್‌ಗಳನ್ನು ನಕಲಿ ಮಾಡುವುದನ್ನು ತಡೆಯಲಿದೆ. ಅಷ್ಟೇ ಅಲ್ಲದೆ ಎಚ್‌ಎಸ್‌ಆರ್‌ಪಿ ವಾಹನಗಳಿಂದ ಉಂಟಾಗುವ ಅಪರಾಧಗಳನ್ನು ಪರಿಶೀಲಿಸಲು

ಸಹಾಯ ಮಾಡಲಿದೆ. ಮತ್ತು ರಸ್ತೆಗಳಲ್ಲಿ ಸಂಚರಿಸುವ ಎಲ್ಲಾ ರೀತಿಯ ವಾಹನಗಳನ್ನು ಗುರುತಿಸಲು ಕೂಡ ಇವು ಸಹಾಯ ಮಾಡುತ್ತದೆ ಎಂದು ಸಾರಿಗೆ ಇಲಾಖೆಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅಧಿಕೃತ ವಿತರಕರು ಅಥವಾ ತಯಾರಕರು ವಾಹನ್ ಪೋರ್ಟಲ್‌ನಲ್ಲಿ (Portal) ಎಚ್‌ಎಸ್‌ಆರ್‌ಪಿ ಅನ್ನು ಅಳವಡಿಸಿಕೊಂಡ ನಂತರ, ಲೇಸರ್-ಕೋಡಿಂಗ್ (Laser coding) ಅನ್ನು

ನವೀಕರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಾರಿಗೆ ಇಲಾಖೆ ತಿಳಿಸಿದೆ.

ರಶ್ಮಿತಾ ಅನೀಶ್

Exit mobile version