ಅಮೆರಿಕ ಗಡಿಯಲ್ಲಿ 2022-23ರ ಅವಧಿಯಲ್ಲಿ ಅಕ್ರಮ ವಲಸೆ ಯತ್ನ: 96,197 ಭಾರತೀಯರ ಬಂಧನ!

Washington: ಅಕ್ಟೋಬರ್ 2022 ರಿಂದ ಸೆಪ್ಟೆಂಬರ್ 2023ರ ಅವಧಿಯಲ್ಲಿ ಎಷ್ಟು ಮಂದಿ ಭಾರತೀಯ ಪ್ರಜೆಗಳನ್ನ (Illegal immigration attempt at US) ಬಂಧನ ಮಾಡಲಾಗಿದೆ ಎಂಬ

ಲೆಕ್ಕ ಸಿಕ್ಕಿದ್ದು, ಅಮೆರಿಕ ದೇಶದ ಒಳಗೆ ಅಕ್ರಮವಾಗಿ ನುಸುಳಲು ಯತ್ನಿಸಿದ 96,917 ಭಾರತೀಯ ಪ್ರಜೆಗಳನ್ನು ಬಂಧಿಸಲಾಗಿದೆ. ಅಮೆರಿಕ ದೇಶದ ಸೀಮಾ ಸುಂಕ ಹಾಗೂ ಗಡಿ ಭದ್ರತಾ ಪಡೆಯ

ಅಂಕಿ ಅಂಶಗಳು ಈ ಮಾಹಿತಿಯನ್ನ ಬಹಿರಂಗಪಡಿಸಿವೆ.ಅಕ್ರಮವಾಗಿ ಅಮೆರಿಕ ದೇಶದ ಗಡಿ ನುಸುಳುವ ವೇಳೆ ಹಲವು ಭಾರತೀಯರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದ್ದು,

ಅಮೆರಿಕ ಗಡಿಯೊಳಗೆ ಪ್ರವೇಶ ಪಡೆಯುವ ವೇಳೆ ಕೆಲವು ಸಂದರ್ಭಗಳಲ್ಲಿ ನುಸುಳುಕೋರರು ದುರ್ಗಮ ಹಾದಿಯಲ್ಲೂ ಪ್ರಯಾಣಿಸಿದ್ದಾರೆ. ಈ ವೇಳೆ ಸಂಕಷ್ಟಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.

41,770 ಮಂದಿ ಮೆಕ್ಸಿಕೋ – ಅಮೆರಿಕ ಗಡಿಯಲ್ಲಿ ಬಂಧನವಾಗಿದ್ದು, ಅಮೆರಿಕ ದೇಶದ ಒಳಗೆ ನುಸುಳಲು ಯತ್ನಿಸಿ ಸೆರೆ ಸಿಕ್ಕ 96,917 ಭಾರತೀಯ ಪ್ರಜೆಗಳ ಪೈಕಿ 30,010 ಮಂದಿ ಕೆನಡಾ – ಅಮೆರಿಕ

ಗಡಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಉಳಿದವರು ಅಮೆರಿಕ ದೇಶದ ಒಳಗೆ ಯಶಸ್ವಿಯಾಗಿ ಒಳ ನುಸುಳಿದ ಬಳಿಕ ಬಂಧನವಾಗಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಅಕ್ರಮವಾಗಿ 2019 – 20ರಲ್ಲಿ ಅಮೆರಿಕ ದೇಶದ ಒಳಗೆ ನುಸುಳಲು ಯತ್ನಿಸಿದ್ದ 19,883 ಭಾರತೀಯ ಪ್ರಜೆಗಳನ್ನು ಬಂಧಿಸಲಾಗಿತ್ತು. ಈ ಅಂಕಿ ಅಂಶಗಳಿಗೆ ಹೋಲಿಸಿದರೆ 2022 – 23 ರಲ್ಲಿ ಅಕ್ರಮ

ಒಳನುಸುಳುಕೋರರ ಸಂಖ್ಯೆ 5 ಪಟ್ಟು ಏರಿಕೆ ಕಂಡಿದ್ದು, ದಾಖಲೆಗಳಿಗೆ ಸಿಕ್ಕಿರುವ ಅಂಕಿ ಅಂಶಗಳನ್ನು ಮಾತ್ರ ಈ ವರದಿ ಪ್ರತಿನಿಧಿಸುತ್ತಿದೆ. ಇದಲ್ಲದೆ ಲೆಕ್ಕವಿಲ್ಲದಷ್ಟು ಮಂದಿ ಅಮೆರಿಕ ಗಡಿ ಒಳಗೆ

ಪ್ರವೇಶಿಸಲು ಯತ್ನಿಸಿ (Illegal immigration attempt at US) ವಿಫಲರಾಗಿದ್ದಾರೆ.

ಕೆಲವರು ಸಾವನ್ನಪ್ಪಿದ್ದು, ಮತ್ತೆ ಕೆಲವರು ಯಶಸ್ವಿಯಾಗಿ ಅಮೆರಿಕ ದೇಶದಲ್ಲಿ ಅಕ್ರಮವಾಗಿ ನೆಲೆ ಕಂಡಿದ್ದಾರೆ. ಈ ಸಂಖ್ಯೆಗಳು ಇನ್ನಷ್ಟು ಹೆಚ್ಚಾಗಿರಬಹುದು ಎಂದು ತನಿಖಾ ಸಂಸ್ಥೆಗಳು ಊಹಿಸಿದ್ದು,

ಗಡಿಯಲ್ಲಿ ನಾವು ಒಬ್ಬರನ್ನು ಸೆರೆ ಹಿಡಿದಿರಬಹುದು. ಆದರೆ, 10 ಮಂದಿ ಯಶಸ್ವಿಯಾಗಿ ಗಡಿ ಒಳಗೆ ನುಸುಳಿ ಅಮೆರಿಕದಲ್ಲಿ ನೆಲೆ ಕಂಡಿರುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನು ಓದಿ: ಬರ ಪರಿಹಾರ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ: ಯಾವ ಜಿಲ್ಲೆಗೆ ಎಷ್ಟು ಪರಿಹಾರ.? ಇಲ್ಲಿದೆ ವಿವರ

Exit mobile version