ಚಿತ್ರದುರ್ಗ: ಕಲುಷಿತ ನೀರು ಕುಡಿದು ವಾಂತಿ ಬೇಧಿ 36 ಜನ ಅಸ್ವಸ್ಥ, ಇಬ್ಬರ ಸಾವು !

Chitradurga: ಕಲುಷಿತ ನೀರು ಸೇವಿಸಿ ಚಿತ್ರದುರ್ಗದ (impure water makes sick)ಕವಾಡಿಗರಹಟ್ಟಿಯಲ್ಲಿ ಇಬ್ಬರು ಮೃತಪಟ್ಟಿದ್ದು, 36 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ನೀರಿನ ಟ್ಯಾಂಕ್‌

ನಿರ್ಮಿಸಿ 25 ವರ್ಷಗಳಾಗಿದ್ದರು, ಒಂದು ಬಾರಿಯೂ ಟ್ಯಾಂಕ್ (Tank) ಸ್ವಚ್ಛಗೊಳಿಸಿರಲಿಲ್ಲ. ಅಲ್ಲಿಯ ಸ್ಥಳೀಯರು ಎಷ್ಟೇ ಬಾರಿ ಮನವಿ ಸಲ್ಲಿಸಿದ್ರು ಸ್ಥಳೀಯ ಆಡಳಿತ ಜನರ ಸಮಸ್ಯೆಗೆ ಕಿವಿಕೊಟ್ಟಿಲ್ಲ ಎಂದು

ಸಾರ್ವಜನಿಕರು ಆರೋಪಿಸಿದ್ದಾರೆ. ರಾಯಚೂರಿನ ಪ್ರಕರಣ ಮರೆಮಾಚುವ ಮುನ್ನವೇ ಕೋಟೆ ನಾಡಿದ ಚಿತ್ರದುರ್ಗದಲ್ಲಿಯು ಇಂತಹದ್ದೇ ಘಟನೆ ನಡೆದಿದ್ದು, ಈ ಜಿಲ್ಲೆಯ ನಗರದ ಹೊರವಲಯದ ಕವಾಡಿಗರಹಟ್ಟಿಯ

(Kavadigarahatti) 17ನೇ ವಾರ್ಡ್‌ನಲ್ಲಿ ಕಲುಷಿತ ನೀರು ಸೇವನೆಯಿಂದ ವಾಂತಿ ಬೇಧಿಯಾಗಿದ್ದು, ಒಬ್ಬ ಮಹಿಳೆ, ಪುರುಷ ಮೃತಪಟ್ಟಿದ್ದಾರೆ. ಇನ್ನು 34 ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.


ಇನ್ನು ಮಂಜುಳ (Manjula) ಎಂಬಾಕೆ 23 ವರ್ಷ ವಯಸ್ಸಿನವರಾಗಿದ್ದು, ಚಿಕಿತ್ಸೆ ಫಲಿಸದೇ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇನ್ನು ಫ್ರಿಡ್ಜ್‌ (Fridge) ರಿಪೇರಿಗೆಂದು ಬೆಂಗಳೂರಿಗೆ (Bengaluru) ಹೋಗಿದ್ದ

ರಘು 27 ಎಂಬುವರು ಸಹಾ ಮೃತಪಟ್ಟಿದ್ದಾರೆ ಎಂದು ಪೊಲೀಸ್‌ (Police) ಮೂಲಗಳು ತಿಳಿಸಿವೆ. ಈಗಾಗಲೇ ಆಸ್ಪತ್ರೆಗೆ ದಾಖಲಾದವರಲ್ಲಿ ಐದು ಜನರ ಸ್ಥಿತಿ ಚಿಂತಾಜನಕವಾಗಿದ್ದು, ಮೂವರು ಬಸವೇಶ್ವರ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೂ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಗೆ (Davanagere) ಕರೆದೊಯ್ಯಲಾಗಿದ್ದು, ಅಲ್ಲದೆ ಜಿಲ್ಲಾಸ್ಪತ್ರೆಯಲ್ಲಿ 20 ಜನ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಳಿದ 15 ಜನರಿಗೆ ಕಾವಾಡಿಗರಹಟ್ಟಿಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ನಗರಸಭೆ ಪೂರೈಕೆ ಮಾಡಿದ ನೀರು ಸೇವನೆ ಮಾಡದಂತೆ ಸೂಚನೆ ಕೊಟ್ಟಿದ್ದಾರೆ.


ಆರೋಗ್ಯ ಇಲಾಖೆ ತಂಡ ಕವಾಡಿಗರಹಟ್ಟಿಯಲ್ಲಿ (Kavadigarahatti) ವಿಷಯ ತಿಳಿದ ಬಳಿಕ ಬೀಡು ಬಿಟ್ಟಿದ್ದು, ಶಂಕೆ ಇರುವವರ ಆರೋಗ್ಯ ತಪಾಸಣೆ ಕೈಗೊಂಡಿದೆ. ಅಲ್ಲಿನ ಸರಕಾರಿ ಪ್ರಾಥಮಿಕ ಶಾಲೆ, ಗ್ರಾಮದಲ್ಲಿ

ಅಸ್ವಸ್ಥತೆ ಕಂಡು ಬಂದವರಿಗೆ ಚಿಕಿತ್ಸೆ ಕೊಡಿಸಿ, ಸ್ಥಳಕ್ಕೆ ಜಿಲ್ಲಾಧಿಕಾರಿ ದಿವ್ಯಪ್ರಭು, ಎಸ್.ಪಿ ಕೆ.ಪರಶುರಾಂ (S P K Parashuram), ಡಿಎಚ್‌ಒ ರಂಗನಾಥ್‌ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾಸ್ಪತ್ರೆಗೆ ದಾಖಲಾದವರಲ್ಲಿ

ನಾಲ್ಕೈದು ಜನರಿಗೆ ತೀವ್ರ ಸ್ವರೂಪದ ನಿರ್ಜಲೀಕರಣ ಇದೆ ಎಂದು ಡಿಎಚ್‌ಒ (DHO) ಡಾ.ರಂಗನಾಥ್‌ (Dr.Ranganth) ಅವರು ಮಾತನಾಡಿ ಹೇಳಿದರು. ಇವರಲ್ಲಿ ಬಸವೇಶ್ವರ ಆಸ್ಪತ್ರೆಯಲ್ಲಿ ಮೂವರಿಗೆ

ಪ್ರತ್ಯೇಕವಾಗಿ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದ್ದು, ಉಳಿದವರಿಗೆ ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಿದ್ದೇವೆ. ಸದ್ಯಕ್ಕೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕವಾಗಿ ಕ್ಲಿನಿಕ್‌ (Clinic) ಸೌಲಭ್ಯ ಕಲ್ಪಿಸಿದ್ದು,

ಆರೋಗ್ಯ ತಪಾಸಣೆ ಮಾಡುತ್ತಿದ್ದೇವೆ’ (impure water makes sick) ಎಂದು ಹೇಳಿದರು.


ವಾರದಲ್ಲಿ ಎರಡು ದಿನದಂತೆ ಪಾಳಿಯಲ್ಲಿ ಕವಾಡಿಗರಹಟ್ಟಿಗೆ ನೀರು ಬಿಡುತ್ತಾರೆ. ಪರಿಶಿಷ್ಟ ಕಾಲೋನಿಯ ಎರಡು ಬೀದಿಗಳಿಗೆ ಸೋಮವಾರ ಸಂಜೆ ನೀರು ಸರಬರಾಜು ಮಾಡಿದ್ದಾರೆ. ಮಂಗಳವಾರ ಮುಂಜಾನೆ

ಹಲವರಿಗೆ ವಾಂತಿ- ಭೇದಿ ಕಾಣಿಸಿಕೊಂಡ ತಕ್ಷಣ ಕೆಲವರು ಆಸ್ಪತ್ರೆಗೆ ತೆರಳಿದ್ದಾರೆ. ನಂತರ ಒಬ್ಬರಾದ ನಂತರ ಒಬ್ಬರಿಗೆ ವಾಂತಿ ಬೇಧಿ ಕಾಣಿಸಿಕೊಂಡು ಅಸ್ವಸ್ಥರು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆದರೆ ಮೊದಲಿಗೆ ಮಂಜುಳಾ (Manjula) ಎಂಬುವರು ಅಸ್ವಸ್ಥರಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸುಮಾರು 20 ರಿಂದ 30 ಜನ ವಾಂತಿ ಬೇಧಿಯಿಂದ ಕವಾಡಿಗರಹಟ್ಟಿಯಲ್ಲಿ ನರಳುತ್ತಿದ್ದಾರೆ. ಯಾವ ಕಾರಣದಿಂದ ಎಂಬುದನ್ನು ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ನೀರು ಸರಬರಾಜು ಆಗುವ ಪೈಪ್‌

(Pipe) ಎಲ್ಲೆಲ್ಲಿ ಲೀಕೇಜ್‌ (Leakage) ಇದೆ ಅನ್ನೋದನ್ನು ಚೆಕ್‌ ಮಾಡ್ತಾ ಇದ್ದು, . ಮುಂಜಾಗ್ರತಾ ಕ್ರಮವಾಗಿ ಈಗ ನೀರಿನ ಸರಬರಾಜನ್ನು ನಿಲ್ಲಿಸಿ, ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ.

ಅಸ್ವಸ್ಥರಾದವರಿಗೆ ಬೇಕಾಗಿರುವ ಔಷಧಿಗಳನ್ನು ಸಹಾ ಒದಗಿಸಲಾಗುತ್ತಿದೆ. ಶಾಲೆಗೆ ಹೊಗಿರುವ ಮಕ್ಕಳಿಗೂ ಕೂಡ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಏರಿಯಾದಲ್ಲಿ ಸ್ವಚ್ಛತೆಗೆ ಹೆಚ್ಚಿನ ಗಮನ ಕೊಡಲು

ಸೂಚಿಸಲಾಗಿದ್ದು, ನಗರಸಭೆ ಅಧಿಕಾರಿಗಳು ತೊಡಗಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು (Divyaprabhu) ಹೇಳಿದ್ದಾರೆ.

ಭವ್ಯಶ್ರೀ ಆರ್.ಜೆ

Exit mobile version