ಅಡುಗೆ ಇಂಧನ ಬೆಲೆ 50 ಏರಿಕೆ: ಅಚ್ಚೇ ದಿನ್‌ಗೆ ಕಂಗಾಲಾದ ಜನತೆ !

ಕೇಂದ್ರ ಸರ್ಕಾರ ದೇಶದ ಜನತೆಗೆ ಮತ್ತೊಂದು ಶಾಕ್ ನೀಡಿದೆ. ಈಗಾಗಲೇ ಬೆಲೆ ಏರಿಕೆ ಕೊಂಡಕ್ಕೆ ಬಿದ್ದು (increase of lpg gas) ಬೇಯುತ್ತಿರುವ ಜನತೆಗೆ ಅಡುಗೆ ಇಂಧನ ಬೆಲೆಯನ್ನು 50 ರೂಪಾಯಿಯಷ್ಟು ಹಾಗೂ ವಾಣಿಜ್ಯ ಗ್ಯಾಸ್ ಸಿಲಿಂಡರ್

(Cylinder) ಬೆಲೆಯನ್ನು 350.50 ರೂಪಾಯಿ ಏರಿಸಿ ದೊಡ್ಡ ಹೊಡೆತವನ್ನೇ (increase of lpg gas) ಕೊಟ್ಟಿದೆ.

ಅಷ್ಟು ಮಾತ್ರವಲ್ಲ ಸಿಎನ್‌ಜಿ ಬೆಲೆಯನ್ನು 2.50 ರೂಪಾಯಿ ಜಾಸ್ತಿ ಮಾಡಿ ಆಟೋ ಸೇರಿದಂತೆ ಇತರೆ ವಾಹನ ಚಾಲಕರ ಎದೆ ಬಡಿತ ಹೆಚ್ಚಿಸಿದೆ.

ಬೆಂಗಳೂರಿನಲ್ಲಿ (Bangalore) 14.2 ಕೆ.ಜಿ ಅಡುಗೆ ಇಂಧನ ಸಿಲಿಂಡರ್ (Cylinder) ಬೆಲೆ ಕಳೆದ ತಿಂಗಳು 1055 ರೂಪಾಯಿ ಇತ್ತು. ಇವತ್ತು ಈ ದರ 1105 ರೂಪಾಯಿ ಆಗಿದೆ.

ಕಳೆದ ವರ್ಷ ಮೇ ಜೂನ್ ತಿಂಗಳಲ್ಲಿ ಅಡುಗೆ ಇಂಧನ ಬೆಲೆಯನ್ನು ತಲಾ 56.50 ಹಾಗೂ 53 ರೂಪಾಯಿಯಷ್ಟು ಏರಿಸಿತ್ತು.

ಆದ್ರೆ ಜುಲೈ ತಿಂಗಳಲ್ಲಿ 6.50 ರೂಪಾಯಿ ಇಂಧನ ಬೆಲೆಯನ್ನು ಕಡಿಮೆ ಮಾಡಿದ್ದು ಬಿಟ್ರೆ ಇಂಧನ ಬೆಲೆ ಫೆಬ್ರವರಿ ವರೆಗೆ ಸ್ಥಿರತೆ ಕಂಡಿತ್ತು. ಆದ್ರೆ ಚುನಾವಣೆ ಹೊಸ್ತಿಲಲ್ಲಿರುವ ಕರ್ನಾಟಕ ಜನತೆಗೆ ಬಿಜೆಪಿ ಸರ್ಕಾರ ಬೆಲೆ ಇಳಿಕೆಯ

ಸಿಹಿ ಸುದ್ದಿ ಕೊಡುತ್ತೆ ಅಂತ ಭರವಸೆ ಇಟ್ಟುಕೊಂಡಿದ್ದ ಜನತೆಗೆ ಈ ಗ್ಯಾಸ್ ಬೆಲೆ ಏರಿಕೆಯು ಕಹಿ ಅನುಭವ ನೀಡಿದೆ.


ಇನ್ನು ಬೆಂಗಳೂರು ಸೇರಿದಂತೆ ಇತರ ಮಹಾನಗರಗಳಲ್ಲಿ ಅಡುಗೆ ಅನಿಲ ಇಂಧನ ಬೆಲೆ ಏರಿದೆ. ಎಲ್ಲೆಲ್ಲಿ ಎಷ್ಟೆಷ್ಟು ಬೆಲೆ ಏರಿಕೆಯಾಗಿದೆ ಅಂತ ನೋಡುವುದಾದ್ರೆ.

LPG Cylinder

ಕೇಂದ್ರದಿಂದ ಗ್ಯಾಸ್ ಶಾಕ್ !
ಬೆಂಗಳೂರು(Bangalore) 1105 (ಹೊಸ ದರ) 1055 (ಹಳೇ ದರ)
ಮುಂಬಯಿ(Mumbai) 1102.50 (ಹೊಸ ದರ) 1052.50 (ಹಳೇ ದರ)
ನವದೆಹಲಿ (New Delhi)1103 (ಹೊಸ ದರ) 1053 (ಹಳೇ ದರ)
ಕೊಲ್ಕೋತ್ತಾ(Kolkata)1079 (ಹೊಸ ದರ) 1129(ಹಳೇ ದರ)

ಇನ್ನು ಪ್ರತಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು 350.50ರಷ್ಟು ಏರಿಕೆ ಮಾಡಿ ಹೊಟೇಲ್ ಮಾಲೀಕರಿಗಂತು ದೊಡ್ಡ ಹೊಡೆತ ಕೊಟ್ಟಿದೆ. ಇದು ವರ್ಷದಲ್ಲಿ ಎರಡನೇ ಬಾರಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸುತ್ತಿರುವುದು. 

ಜನವರಿ 1ರಂದು ಪ್ರತಿ ಸಿಲಿಂಡರ್ ಬೆಲೆಯನ್ನು 25ರೂಪಾಯಿಯಷ್ಟು ಹೆಚ್ಚಿಸಿತ್ತು. ಆದ್ರೆ ಏಕಾಏಕಿ ಪ್ರತಿ ಸಿಲಿಂಡರ್ ಬೆಲೆಯನ್ನು 350.50 ಏರಿಕೆ ಮಾಡಿರುವುದು ಹೊಟೇಲ್ ಉದ್ಯಮಿಗಳಿಗೆ ದೊಡ್ಡ ಆಘಾತವೇ ಆಗಿದೆ. 

ಕೊರೋನಾ ಕೊಟ್ಟ ಹೊಡೆತದಿಂದ ಇನ್ನೂ ಚೇತರಿಸಿಕೊಳ್ಳದ ಹೊಟೇಲ್ ಉದ್ಯಮಕ್ಕೆ ಇಂಧನ ಬೆಲೆ ಏರಿಕೆ ನಿಜವಾಗ್ಲೂ ಬಾರೀ ದೊಡ್ಡ ಹೊಡೆತವಾಗಿದೆ. 

ಇದನ್ನು ಓದಿ : ಅಯ್ಯೋ ಅನ್ನದಾತನಿಗೆ ಬಂದ ಗತಿಯೇ !!! ಎಪಿಎಂಸಿಯಲ್ಲಿ ರೈತ ಬೆಳೆ ಮಾರಲು ಭ್ರಷ್ಟ ಅಧಿಕಾರಿಗಳಿಗೆ ಕೊಡಬೇಕು ಲಂಚ.

ಬರೀ ಅಡುಗೆ ಇಂಧನ ಮಾತ್ರವಲ್ಲ ಸಿಎನ್‌ಜಿ ಬೆಲೆಯನ್ನೂ ಹೆಚ್ಚಿಸಿ ವಾಹನ ಮಾಲೀಕರಿಗೆ ಶಾಕ್ ಕೊಟ್ಟಿದೆ. ಸಿಎನ್‌ಜಿ ದರವು ಕೆ,ಜಿಗೆ 2.50 ರೂಪಾಯಿ ಏರಿಕೆಯಾಗಿದೆ. ಕಳೆದ ತಿಂಗಳು ಒಂದು ಕೆ.ಜಿ ಸಿಎನ್‌ಜಿ ಬೆಲೆ 85 ರೂಪಾಯಿ ಇತ್ತು. 

ಇವತ್ತು ಇದರ ಬೆಲೆ ಕೆ,ಜಿಗೆ 87.50 ರೂಪಾಯಿ ಆಗಿದೆ. ಸಿಎನ್‌ಜಿ ಬೆಲೆ ಏರಿಕೆಯು ಆಟೋ ಚಾಲಕರಿಗಂತು ನುಂಗಲಾರದ ತುತ್ತಾಗಿದೆ. ವಿವಿಧ ನಗರಗಳಲ್ಲಿ ಸಿಎನ್‌ಜಿ ಬೆಲೆ ಏರಿಕೆಯ ಪಟ್ಟಿಯನ್ನೊಮ್ಮೆ ನೋಡೋಣ. 
Gas

ಸಿಎನ್‌ಜಿ(CNG) ಬೆಲೆ ಏರಿಕೆ ಪಟ್ಟಿ
ಬೆಂಗಳೂರು(Bangalore) 87.50 ರೂ (ಹೊಸ ದರ) 85 (ಹಳೇ ದರ)
ಮುಂಬಯಿ(Mumbai) 63.08 (ಹೊಸ ದರ) 63.08 (ಹಳೇ ದರ)
ನವದೆಹಲಿ(New Delhi) 62.83 (ಹೊಸ ದರ) 62.86 (ಹಳೇ ದರ)
ಕೊಲ್ಕೋತ್ತಾ(Kolkata) 58.15 (ಹೊಸ ದರ) 58.16(ಹಳೇ ದರ)

ಇದನ್ನು ಓದಿ : ಕೋಲಾರದ ಬಂಗಾರಪೇಟೆಯಲ್ಲಿ ವಿಜಯ ಟೈಮ್ಸ್ ಬಯಲು ಮಾಡಿತು ವಿಷ ಬೆಲ್ಲದ ರಹಸ್ಯ!


ಒಟ್ಟಾರೆ ಕೇಂದ್ರ ಸರ್ಕಾರದ ಅಚ್ಚೇ ದಿನ್ ಕೊಡುಗೆ ಜನಸಾಮಾನ್ಯರಿಗೆ ಕೊಂಚ ದುಬಾರಿಯೇ ಆಗುತ್ತಿದೆ. ಜನ ಗ್ಯಾಸ್ ದರ ಏರಿಕೆಯ ಬಿಸಿ ತಾಳಲಾರದೆ ಮತ್ತೆ ಕಟ್ಟಿಗೆ ಒಲೆಯತ್ತ ಮುಖ ಮಾಡಬೇಕಾದ ದಿನಗಳು ಇನ್ನು ದೂರ ಇಲ್ಲ ಅನ್ನೋದು ವಿಪಕ್ಷಗಳ ಟೀಕೆಯಾಗಿದೆ.
Exit mobile version