New York: ಇಸ್ರೇಲ್ನಿಂದ (Israel) ತೀವ್ರ ದಾಳಿಗೆ ಗುರಿಯಾಗುತ್ತಿರುವ ಹಮಾಸ್ ಉಗ್ರರ ತಾಣವಾಗಿರುವ ಗಾಜಾಪಟ್ಟಿಯಲ್ಲಿ (India refuse to vote in unassembly) ತಕ್ಷಣದಿಂದಲೇ ಜಾರಿಗೆ
ಬರುವಂತೆ ಯುದ್ದವನ್ನುಕೊನೆಗಾಣಿಸಬೇಕೆಂದು ಕೋರಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸಲ್ಲಿಸಿದ್ದ ನಿರ್ಣಯವನ್ನು ನಿರಾಕರಿಸಿರುವ ಭಾರತ, ಮತದಾನದಿಂದ ದೂರ ಉಳಿದಿದೆ. ಈ ಮೂಲಕ
ಪರೋಕ್ಷವಾಗಿ ಇಸ್ರೇಲ್ ಬೆಂಬಲಕ್ಕೆ (India refuse to vote in unassembly) ಭಾರತ ಮುಂದಾಗಿದೆ.
ಯುಎನ್ ಜನರಲ್ ಅಸೆಂಬ್ಲಿಯಲ್ಲಿ (UN General Assembly) ಜೋರ್ಡಾನ್ ಸಲ್ಲಿಸಿದ ಕರಡು ನಿರ್ಣಯದ ಮತದಾನದಿಂದ ದೂರ ಉಳಿದ ಭಾರತ, ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ತಕ್ಷಣದ
ಮಾನವೀಯ ಕದನ ವಿರಾಮಕ್ಕೆ ಕರೆ ನೀಡಿತು. ಕರಡು ನಿರ್ಣಯವು ಗಾಜಾ ಪಟ್ಟಿಯಲ್ಲಿ ಅಡೆತಡೆಯಿಲ್ಲದ ಮಾನವೀಯ ಪ್ರವೇಶಕ್ಕೆ ಕರೆ ನೀಡಿದ್ದು, ಬಾಂಗ್ಲಾದೇಶ, ಮಾಲ್ಡೀವ್ಸ್, ಪಾಕಿಸ್ತಾನ, ರಷ್ಯಾ ಮತ್ತು
ದಕ್ಷಿಣ ಆಫ್ರಿಕಾ ಸೇರಿದಂತೆ 40 ಕ್ಕೂ ಹೆಚ್ಚು ರಾಷ್ಟ್ರಗಳು ಈ ನಿರ್ಣಯವನ್ನು ಬೆಂಬಲಿಸಿದರೆ, ಭಾರತ, ಆಸ್ಟ್ರೇಲಿಯಾ(Australia), ಕೆನಡಾ, ಜರ್ಮನಿ, ಜಪಾನ್, ಉಕ್ರೇನ್ (Ukraine) ಯುಕೆ ದೇಶಗಳು
ಮತದಾನದಿಂದ ದೂರ ಉಳಿಯುವ ಮೂಲಕ ನಿರ್ಣಯವನ್ನು ವಿರೋಧಿಸಿದವು.
“ನಾಗರಿಕರ ರಕ್ಷಣೆ, ಕಾನೂನು ಮತ್ತು ಮಾನವೀಯ ಹೊಣೆಗಾರಿಕೆಗಳನ್ನು ಎತ್ತಿಹಿಡಿಯುವುದು” ಎಂಬ ಶೀರ್ಷಿಕೆಯ ನಿರ್ಣಯದ ಪರವಾಗಿ 120 ರಾಷ್ಟ್ರಗಳು ಮತ ಚಲಾಯಿಸಿದವು, 14 ಅದರ ವಿರುದ್ಧ
ಮತ್ತು 45 ಗೈರುಹಾಜರಾಗಿದ್ದವು.
ಅಕ್ಟೋಬರ್ (October) 7 2023 ರಂದು ಇಸ್ರೇಲ್ ಮೇಲೆ ನಡೆದ ಹಮಾಸ್ನ ಭಯೋತ್ಪಾದಕ ದಾಳಿಗಳನ್ನು ಸಾಮಾನ್ಯ ಸಭೆಯು “ನಿಸ್ಸಂದಿಗ್ಧವಾಗಿ ಖಂಡಿಸುತ್ತದೆ” ಎಂದು ಹೇಳುವ ನಿರ್ಣಯದ
ಪ್ಯಾರಾಗ್ರಾಫ್ ಅನ್ನು ಸೇರಿಸಲು ತಿದ್ದುಪಡಿ ಕೇಳಲಾಯಿತು. ಭಾರತವು ಸೇರಿದಂತೆ 87 ಇತರ ರಾಷ್ಟ್ರಗಳು ತಿದ್ದುಪಡಿಯ ಪರವಾಗಿ ಮತ ಚಲಾಯಿಸಿದರೆ, 55 ಸದಸ್ಯ ರಾಷ್ಟ್ರಗಳು ಅದರ ವಿರುದ್ಧ ಮತ
ಚಲಾಯಿಸಿದವು ಮತ್ತು 23 ಮತದಾನದಿಂದ ದೂರ ಉಳಿದವು. ನಂತರ UNGA ಯ 78ನೇ ಅಧಿವೇಶನದ ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ (Dennis Francis) , ಈ ಕರಡು ತಿದ್ದುಪಡಿಯನ್ನು
ಅಂಗೀಕರಿಸಲಾಗುವುದಿಲ್ಲ ಎಂದು ಘೋಷಿಸಿದರು.
ಇನ್ನು “ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ನಡೆದ ಭಯೋತ್ಪಾದಕ ದಾಳಿಗಳು ಆಘಾತಕಾರಿ ಮತ್ತು ಖಂಡನೆಗೆ ಅರ್ಹವಾಗಿವೆ. ನಮ್ಮ ಆಲೋಚನೆಗಳು ಒತ್ತೆಯಾಳುಗಳ ಬಗ್ಗೆಯೂ ಇವೆ. ಅವರನ್ನು
ತಕ್ಷಣ ಮತ್ತು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ನಾವು ಕರೆ ನೀಡುತ್ತೇವೆ” ಎಂದು ಭಾರತದ UN ಜನರಲ್ ಅಸೆಂಬ್ಲಿಯ ಉಪ ಖಾಯಂ ಪ್ರತಿನಿಧಿ ಯೋಜ್ನಾ ಪಟೇಲ್ (Yojana Patel) ಹೇಳಿದ್ದಾರೆ.
ಇದನ್ನು ಓದಿ: ಸೈಬರ್ ಕ್ರೈಮ್: ಇಮೇಲ್ನಲ್ಲಿ ಬರುವ ಕ್ಯೂಆರ್ ಕೋಡ್ಗಳನ್ನು ಸ್ಕ್ಯಾನ್ ಮಾಡುತ್ತಿದ್ದರೆ ಇರಲಿ ಎಚ್ಚರ!