ಬೆಳಗ್ಗೆ ಸುಂದರವಾಗಿ ಕಾಣಿಸುವ ಕಡಲು, ಸಂಜೆ ನಂತರ ಭಯಾನಕ ತಾಣವಾಗಿ ಬದಲಾಗಲು ಇಲ್ಲಿದೆ ನೊಡಿ ಅಸಲಿ ಕಾರಣ!

Dumas

ಕೆಲವರಿಗೆ ಅತಿಮಾನುಷ ಶಕ್ತಿಗಳ ಬಗ್ಗೆ ನಂಬಿಕೆ ಇರುತ್ತದೆ, ಇನ್ನೂ ಕೆಲವರಿಗೆ ಇರುವುದಿಲ್ಲ. ಆದರೆ, ದೆವ್ವಗಳ (Devil) ಪ್ರಸ್ತಾಪ ಬಂದಾಗ ಮಾತ್ರ ನಮ್ಮ ರೋಮಗಳು ನೆಟ್ಟಗಾಗುವುದಂತೂ ನಿಜ.

ನೀವು ನಂಬುತ್ತೀರೋ ಇಲ್ಲವೋ ಆದರೆ ಕೆಲವು ವಿಚಿತ್ರ (Weird) ಘಟನೆಗಳು ಸಂಭವಿಸಿದಾಗ ಒಮ್ಮೆಯಾದರೂ ಎದೆ ಝಲ್ ಎನಿಸುತ್ತದೆ.

Dumas beach

ಅಂತಹ ಸ್ಥಳಗಳಲ್ಲೇ ಒಂದು ಡುಮಾಸ್ ಬೀಚ್ (Is Dumas beach haunted?). ಸೂರತ್‌ನಿಂದ 21 ಕಿಲೋ ಮೀಟರ್ ದೂರದಲ್ಲಿರುವ ಈ ಬೀಚ್, ದಿನನಿತ್ಯ ಸಾವಿರಾರು ಜನರನ್ನು ತನ್ನತ್ತ ಸೆಳೆಯುತ್ತದೆ.

ಇಲ್ಲಿನ ಜಲರಾಶಿಯ ಸೊಬಗಿಗೆ ಮನಸೋಲದವರೇ ಇಲ್ಲ. ಈ ನೀಲ ಸಾಗರದ ದಡದ ಮರಳ ರಾಶಿಯಲ್ಲಿ ಬೀಸುವ ತಂಗಾಳಿಗೆ ಮೈಯೊಡ್ಡಿ ನಿಂತರೆ ಮನಸ್ಸಿಗೊಂದು ಆನಂದ, ದೇಹಕ್ಕೊಂದು ಉಲ್ಲಾಸ.

ಆದರೆ, ಇಂತಹ ಸುಂದರ ಸ್ವರ್ಗದ ಬಗೆಗೂ ಒಂದು ಭಯಾನಕ ಕತೆ ಇದೆ. ಭಾರತದ(India) ಭಯಾನಕ ತಾಣಗಳು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ 35 ಪ್ರಮುಖ ಜಾಗಗಳಲ್ಲಿ ಈ ಬೀಚ್ ಕೂಡಾ ಒಂದು ಎಂದರೆ ನಂಬಲೇ ಬೇಕು.

ಸೂರ್ಯನ ಬೆಳಕಿನಲ್ಲಿ ಈ ಬೀಚ್ ಅದೆಷ್ಟು ಸುಂದರವಾಗಿ ಕಾಣುತ್ತದೋ, ಚಂದ್ರನ ಆಗಮನದ ಬಳಿಕ ಅಷ್ಟೇ ಭಯಾನಕವಾಗಿ ಮಾರ್ಪಡಾಗುತ್ತದೆಯಂತೆ.

ಇದನ್ನೂ ಓದಿ : https://vijayatimes.com/araga-jnanendra-statement/

ಇದೇ ಕಾರಣಕ್ಕೆ ಸೂರ್ಯ(Sun) ತನ್ನ ದಿನದ ಕೆಲಸ ಮುಗಿಸಿ ಮುಳುಗುತ್ತಿದ್ದಂತೆಯೇ ಬೀಚ್‌ನಲ್ಲಿದ್ದ ಜನ ಕೂಡಾ ಜಾಗ ಖಾಲಿ ಮಾಡುತ್ತಾರೆ. ಆ ನಂತರ ಈ ಬೀಚ್‌ನಲ್ಲಿ ಕೇಳುವುದು ಕೇವಲ ಅಲೆಗಳ ಸದ್ದು. ಹಾಗೊಂದು ವೇಳೆ,

ಏನಾಗುತ್ತೋ ನೋಡೇ ಬಿಡೋಣ ಎಂದು ಚಾಲೆಂಜ್ ಮಾಡಿ ರಾತ್ರಿ ಪೂರ್ತಿ ಕುಳಿತ ಕೆಲವರಿಗೆ ಭಯಾನಕ ಅನುಭವವಾಗಿದೆಯಂತೆ, ಇನ್ನು ಕೆಲವರು ವಾಪಸ್ ಬಂದೇ ಇಲ್ಲವಂತೆ.


ಈ ಬೀಚ್ನ ಕರಾಳತೆಯ ಹಿಂದೆ ಒಂದು ಕಥೆಯಿದೆ. ಹಿಂದೆ ಈ ಬೀಚನ್ನು ಹಿಂದೂ ರುದ್ರಭೂಮಿಯಾಗಿ ಬಳಸಲಾಗಿತ್ತಂತೆ. ಹೀಗಾಗಿ, ಪುರಾತನ ಕಾಲದಲ್ಲಿ ಇದೇ ಜಾಗದಲ್ಲಿ ಸಾಕಷ್ಟು ಅಂತ್ಯಕ್ರಿಯೆಗಳು ನಡೆದಿವೆ.

ಸಾಮಾನ್ಯವಾಗಿ ಸ್ಮಶಾನಗಳಲ್ಲಿ ಆತ್ಮಗಳು ಓಡಾಡುತ್ತಿರುತ್ತವೆ ಎಂಬ ನಂಬಿಕೆ ಇದೆ. ಹಾಗೇ, ಈ ಜಾಗ ಕೂಡಾ ರುದ್ರಭೂಮಿಯಾಗಿ ಬಳಕೆಯಾಗುತ್ತಿದ್ದರಿಂದ ಈ ಬೀಚ್ ಬಗೆಗೂ ಇಂತಹ ನಂಬಿಕೆ ಹುಟ್ಟಿಕೊಂಡಿದೆ.

https://youtu.be/Cudrke2v31Y ತಿನ್ನುವ ಆಹಾರದಲ್ಲಿ ಹುಳ!

ಒಂದಷ್ಟು ಅತೃಪ್ತ ಆತ್ಮಗಳು ಈ ಪ್ರದೇಶವನ್ನು ಇನ್ನೂ ಬಿಟ್ಟು ಹೋಗಿಲ್ಲವಂತೆ.

ಈ ಆತ್ಮಗಳು ಈಗಲೂ ರಾತ್ರಿ ಹೊತ್ತು ಇಲ್ಲಿಗೆ ಬಂದ ಜನರನ್ನು ಕಾಡುತ್ತವೆ ಎನ್ನುವುದು ಈ ಭಾಗದಲ್ಲಿ ಬಲವಾಗಿ ಬೇರೂರಿರುವ ನಂಬಿಕೆ. ಕೆಲವರ ಪ್ರಕಾರ ಇಲ್ಲಿ ಹಲವು ಆತ್ಮಗಳು ಓಡಾಡುತ್ತಿವೆಯಂತೆ.

ಕೆಲವೊಮ್ಮೆ ಯಾರೋ ಜೋರಾಗಿ ನಕ್ಕಂತೆ ಅಥವಾ ಜೋರಾಗಿ ನರಳಾಡಿದಂತಹ ಶಬ್ದ ಬೀಚ್‌ನಿಂದ ಕೇಳುತ್ತದೆಯಂತೆ. ಅಲ್ಲದೆ, ಕೆಲವರು ಇಲ್ಲಿ ಬಿಳಿಯ ಆಕೃತಿಯ ಸಂಚಾರವನ್ನೂ ಕಂಡಿದ್ದಾರಂತೆ.

ಹೀಗಂತ, ನಾನಾ ರೀತಿಯ ಸನ್ನಿವೇಶದ ಕತೆಗಳು ಇಲ್ಲಿ ಕೇಳ ಸಿಗುತ್ತದೆ.

ಇಲ್ಲಿ ಸಂಭವಿಸಿದ ಒಂದಷ್ಟು ಘಟನೆಗಳು ಜನರ ಈ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತಲೇ ಇದೆ. ಯಾಕೆಂದರೆ, ಇಲ್ಲಿ ಒಂದಷ್ಟು ಜನ ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಜೊತೆಗೆ, ವ್ಯಕ್ತಿಯೊಬ್ಬರು ನಾಲಗೆಯನ್ನು ಹೊರಚಾಚಿ ಪ್ರಾಣ ಬಿಟ್ಟಿದ್ದೂ ಇದೆಯಂತೆ.

https://youtu.be/qA8iySF16NI ಗ್ಯಾಸ್‌ ಮೋಸ! ಎಚ್ಚರ! COVER STORY PROMO

ಇಂತಹ ಸನ್ನಿವೇಶವನ್ನು ಕಂಡಿರುವ ಜನ ಸಹಜವಾಗಿಯೇ ಇಲ್ಲಿ ಅತಿಮಾನುಷ ಶಕ್ತಿಗಳ ಕೈವಾಡ ಇದೆ ಎಂದೇ ನಂಬುತ್ತಾರೆ.

ಆದರೆ, ನಂಬಿಕೆ ಮತ್ತು ವಾಸ್ತವದ ಚರ್ಚೆಯ ನಡುವೆ ಡುಮಾಸ್ ಬೀಚ್ ಕುತೂಹಲದ ತಾಣವಾಗಿದೆ, ಕೌತುಕದ ಮೂಟೆಯಾಗಿದೆ. ಇಂದಿಗೂ ಉತ್ತರವೇ ಸಿಗದ ರಹಸ್ಯವಾಗಿ ಉಳಿದಿದೆ.

Exit mobile version