ದೇಶದಾದ್ಯಂತ ಜೈಲರ್ ಸಿನಿಮಾ ರಿಲೀಸ್, ಸಿನಿಮಾ ನೋಡಿ ಬ್ಲಾಕ್ಬಸ್ಟರ್ ಎಂದ್ರು ವೀಕ್ಷಕರು

ದೇಶದಾದ್ಯಂತ ಜೈಲರ್ (Jailer) ಸಿನಿಮಾ ರಿಲೀಸ್ ಆಗಿದ್ದು, ನಟ ರಜನಿಕಾಂತ್, ಶಿವರಾಜ್ ಕುಮಾರ್, ತಮ್ಮನ್ನಾ ಭಾಟಿಯಾ ನಟಿಸಿದ್ದಾರೆ. ರಜನಿ ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಈ ಸಿನಿಮಾಗೋಸ್ಕರ ನಿರೀಕ್ಷಿಸುತ್ತಿದ್ದರು. ಈಗಾಗಲೇ ರಜನಿಕಾಂತ್ (Rajinikanth) , ತಮನ್ನಾ ಭಾಟಿಯಾ ಅವರ ಕಾವಾಲಯ್ಯ ಹಾಡು ಭಾರಿ ವೈರಲ್ ಹಾಗಿದ್ದು, ಮತ್ತು ಶಿವರಾಜ್ ಕುಮಾರ್ ಜಾಕಿಶ್ರಾಫ್ ಕೂಡ ಈ ಸಿನಿಮಾದಲ್ಲಿ ನಟಿಸಿರುವುದು ಚಿತ್ರದ ಕಾತುರವನ್ನು ಜಾಸ್ತಿ ಮಾಡಿದೆ.

ಮುಂಜಾನೆ ರಜನಿ ಅಭಿಮಾನಿಗಳು ಸಿನಿಮಾ ನೋಡಿ ಕಣ್ತುಂಬಿಕೊಂಡಿದ್ದು, ತಮಿಳುನಾಡಿನಲ್ಲಿ ಮೊದಲ ದಿನವೇ 15 ಕೋಟಿ ರೂಪಾಯಿಯ ಅಡ್ವಾನ್ಸ್ ಟಿಕೆಟ್ (Ticket) ಬುಕಿಂಗ್ ಮಾಡಲಾಗಿತ್ತು. ಈ ಸಿನಿಮಾದಲ್ಲಿ ನಟಿಸಿರುವ ಸ್ಟಾರ್ ಗಳಿಗೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳಿದ್ದು, ಇದು ಕೂಡ ಈ ಚಿತ್ರದ ಗೆಲುವಿಗೆ ಕಾರಣ ಎನ್ನಬಹುದು

ರಜನಿಕಾಂತ್ ಅವರು ಕಳೆದ ಐದು ದಶಕಗಳಿಂದ ಸಿನಿಮಾಗಳ ಮೂಲಕ ಚಿತ್ರರಂಗವನ್ನು ಆಳುತ್ತಿದ್ದಾರೆ ಆದರೆ ಇವರ ನಟನೆ ಯಾವತ್ತಿಗೂ ಬೇಜಾರಾಗಿಲ್ಲ. ಜೈಲರ್ ಸಿನಿಮಾದಲ್ಲಿ ಕೂಡ ತಲೈವಾ ಮ್ಯಾಜಿಕ್ ಮಾಡಿದ್ದಾರೆ. ಈ ಚಿತ್ರದಲ್ಲಿ ರಜನಿ ಅವರಿಗೊಂದು ಸೀಕ್ರೆಟ್ ಫ್ಲಾಶ್ ಬ್ಯಾಕ್ (Flashback) ಇದ್ದು ಅದೇ ಈ ಚಿತ್ರದ ಕೇಂದ್ರಬಿಂದುವಾಗಿದೆ.

ಇನ್ನು ಜೈಲರ್ ಕಥೆ ಮೇಲೆ ನೆಲ್ಸನ್ ದಿಲೀಪ್ ಕುಮಾರ್ (Nelson Dilip Kumar) ಅವರು ನಂಬಿಕೆ ಇಟ್ಟಿದ್ದು, ನೆಲ್ಸನ್ ಸಿನಿಮಾಗಳು ಸದಾ ಎಲ್ಲಾ ರೀತಿಯ ಎಮೋಷನ್ ಸೇರಿ ಸಾಕಷ್ಟು ವಿಷಯಗಳು ಅಡಗಿದೆ.

ಕನ್ನಡದ ನಟ ಶಿವರಾಜ್ ಕುಮಾರ್ (Shivarakumar) , ಮಲಯಾಳಂ ನಟ ಮೋಹನ್ ಲಾಲ್ (Mohanlal) , ಜಾಕಿ ಶ್ರಾಫ್, ಸುನಿಲ್ ವಿನಾಯಕ, ರಮ್ಯಕೃಷ್ಣ, ಯೋಗಿ ಬಾಬಾ, ವಸಂತ ರವಿ, ತಮನ್ನಾ ಮುಂತಾದ ನಾಯಕ ನಟಿಯರು ನಟಿಸಿದ್ದಾರೆ. ಹಾಗಾಗಿ ಇದು ಪ್ಯಾನ್ ಇಂಡಿಯಾ ಸಿನಿಮಾ ಅಂತಾನೆ ಹೇಳಬಹುದು. ಯಾಕೆಂದರೆ ಈ ಚಿತ್ರದಲ್ಲಿ ಎಲ್ಲಾ ಚಿತ್ರರಂಗದ ಸ್ಟಾರ್ ಗಳು ನಟಿಸಿದ್ದಾರೆ

ಅಲ್ಲದೆ ಕೆಲವು ಪಾತ್ರಗಳನ್ನು ರಹಸ್ಯವಾಗಿಟ್ಟಿದ್ದು ಅದನ್ನು ಸಿನಿಮಾದಲ್ಲೇ ನೋಡಬೇಕಾಗಿದೆ. ಜೈಲರ್ ನ ಮೊದಲ ಭಾಗ ಚೆನ್ನಾಗಿದ್ದು, ಸಂಪೂರ್ಣವಾಗಿ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಮೊದಲ ಭಾಗದಂತೆ ಎರಡನೇ ಭಾಗ ಕೂಡ ಚೆನ್ನಾಗಿ ಓಡಿದರೆ ಸಿನಿಮಾ ಪಕ್ಕ ಬ್ಲಾಕ್ಬಸ್ಟರ್ (Blockbluster) ಆಗೋದ್ರಲ್ಲಿ ಸಂದೇಹ ಇಲ್ಲ.

ಭವ್ಯಶ್ರೀ ಆರ್. ಜೆ

Exit mobile version