ಹಳೇ ಮೈಸೂರು ಭಾಗದಲ್ಲಿ ಆಪರೇಷನ್‌ ಕಮಲ ; ಕೇಸರಿ ಪಡೆ ಸೇರಿದ ಜೆಡಿಎಸ್-ಕಾಂಗ್ರೆಸ್‌ ನಾಯಕರು

Bengaluru: ಹಳೇ ಮೈಸೂರು ಭಾಗದಲ್ಲಿ ಪಕ್ಷ ಬಲವರ್ಧನೆಗೆ ಮುಂದಾಗಿರುವ ಬಿಜೆಪಿ (JDS-Congress leaders joined BJP) ಇದೀಗ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಹಲವು ನಾಯಕರನ್ನು ತನ್ನತ್ತ ಸೆಳೆದಿದೆ.

ಆಪರೇಷನ್ ಕಮಲದ(Operation Kamala) ಭಾಗವಾಗಿ ಹಾಸನ, ಮೈಸೂರು ಹಾಗೂ ರಾಮನಗರ ಭಾಗದ ಹಲವರು ನಾಯಕರು ಕೇಸರಿ ಪಡೆ ಸೇರಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಮತ್ತು ಸಚಿವ ಗೋಪಾಲಯ್ಯ (Gopalaiah) ಸಮ್ಮುಖದಲ್ಲಿ ಹಲವರು ನಾಯಕರು ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ.

ಅದರಲ್ಲಿ ಮಾಜಿ ಕಾಂಗ್ರೆಸ್‌ ಶಾಸಕ ವಾಸು ಅವರ ಮಗ, ಕಾಂಗ್ರೆಸ್ ಯುವ ಮುಖಂಡ ಕವೀಶ್‌ಗೌಡ ವಾಸು, ಜೆಡಿಎಸ್ ತಾಲೂಕು ಘಟಕದ ಮಾಜಿ ಅಧ್ಯಕ್ಷ ಸೋಮಶೇಖರ್,

ರೈತ ಸಂಘಟನೆ ಜಿಲ್ಲಾ ಅಧ್ಯಕ್ಷ ದಿವಾಕರ್ ಗೌಡ, ಕಾಂಗ್ರೆಸ್ ಮಾಜಿ ಪದಾಧಿಕಾರಿ ವೆಂಕಟೇಶ್, ಜೆಡಿಎಸ್ ಪರಾಜಿತ ಅಭ್ಯರ್ಥಿ ಗಿರೀಶ್ ನಾಶಿ,

ಕಾಂಗ್ರೆಸ್ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿವಿ ರಾಜಪ್ಪ ಅವರು ಬಿಜೆಪಿ ಸೇರಿದ್ದಾರೆ.

ಇದನ್ನೂ ಓದಿ: ನನ್ನನ್ನು ಪ್ರಧಾನಿ ಮಾಡಿದ್ರೂ ನಾನು ಇವರೊಂದಿಗೆ ಸೇರುವುದಿಲ್ಲ : ಸಿದ್ದರಾಮಯ್ಯ

ಇನ್ನು ಹುಣಸೂರು ಕ್ಷೇತ್ರದ ಪರಾಜಿತ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಮತ್ತು ಮಾಜಿ ಶಾಸಕ ವಾಸು ಅವರ ಪುತ್ರ ಕವೀಶ್ ಗೌಡ ಬಿಜೆಪಿ ಸೇರ್ಪಡೆಯಾಗಿದ್ದು ಬಿಜೆಪಿ ಟಿಕೆಟ್‌ನ ಆಕಾಂಕ್ಷಿಗಳಾಗಿದ್ದಾರೆ.

ತಮ್ಮ ಸೇರ್ಪಡೆ ಕುರಿತು ಮಾತನಾಡಿರುವ ಕವೀಶ್ ಗೌಡ (Kavish Gowda) ವಾಸು ಅವರು, ನನ್ನ ತಂದೆ ಕಾಂಗ್ರೆಸ್‌ನಲ್ಲಿದ್ದಾರೆ. ಆದರೆ ನಾನು ಸೈದ್ದಾಂತಿಕವಾಗಿ ಬಿಜೆಪಿಯನ್ನು ಮೆಚ್ಚಿದ್ದೇನೆ.

ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕಾರ್ಯವೈಖರಿಯನ್ನು ಮೆಚ್ಚಿ ಬಿಜೆಪಿ ಸೇರಿದ್ದೇನೆ.

ಹೀಗಾಗಿ ಪಕ್ಷವು ನನಗೆ ಏನೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಬಿಜೆಪಿ ಪಕ್ಷಕ್ಕಾಗಿ (JDS-Congress leaders joined BJP) ಸಾಮಾನ್ಯ ಕಾರ್ಯಕರ್ತನಾಗಿ ಶ್ರಮಿಸುತ್ತೇನೆ ಎಂದಿದ್ದಾರೆ.

ಈ ವೇಳೆ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ ಕಟೀಲ್‌, ಕುಟುಂಬ ವಾದ, ಪರಿವಾರ ವಾದದಿಂದ ರಾಷ್ಟ್ರೀಯ ವಾದಕ್ಕೆ ಬಂದಿರುವ ತಮ್ಮೆಲ್ಲರಿಗೂ ಸ್ವಾಗತ. ಬಿಜೆಪಿ ಜನಸಾಮಾನ್ಯರ ಪಕ್ಷ.

ನಮ್ಮ ಪಕ್ಷದಲ್ಲಿ ಅರ್ಹತೆಯ ಆಧಾರದ ಮೇಲೆ ಬೆಳೆಯಬಹುದು. ನಿಮ್ಮ ಕಾರ್ಯವ್ಯಾಪ್ತಿಯಲ್ಲಿ ನೀವು ಜನಪರವಾಗಿ ಕೆಲಸ ಮಾಡಿ, ನಿಮ್ಮನ್ನು ಪಕ್ಷ ಗುರುತಿಸುತ್ತದೆ. ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸುವ ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಗೆ ಅನುಗುಣವಾಗಿ ನೀವು ಕೆಲಸ ಮಾಡುತ್ತೀರೆಂದು ಆಶಿಸುವುದಾಗಿ ಹೇಳಿದರು.
Exit mobile version