ಬೇಕೆಂದೇ ಬೈಗುಳ ಪದ ಬಳಸಿ, ಗ್ರಾಮ್ಯ ಭಾಷೆ ಎಂದೆಲ್ಲ ತಿಪ್ಪೆ ಸಾರಿಸುವುದು ಸರಿಯೇ : ಕಟೀಲ್‌

Karnataka: ತಮ್ಮ ಅರ್ಹತೆ ಯೋಗ್ಯತೆಗಳನ್ನು ಮೀರಿ ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿ ಕೂತೆದ್ದು ಬಂದವರು ಮಾತಿನಲ್ಲಿ ಸ್ವಲ್ಪವಾದರೂ ಘನತೆ ಗಾಂಭೀರ್ಯವನ್ನು (Kateel tweet about Siddaramaiah) ಉಳಿಸಿಕೊಳ್ಳಬೇಕು.

ರಾಜಕೀಯ ಸಂಧ್ಯಾ ಕಾಲದಲ್ಲಿದ್ದೀರಿ, ಇನ್ನಾದರೂ ತಮ್ಮ ಹಳೆಯ ಚಾಳಿಯನ್ನು ಬಿಟ್ಟು ಸುಸಂಸ್ಕೃತ ಮಾತುಗಳನ್ನಾಡುತ್ತಾ ರಾಜಕೀಯ ನಿವೃತ್ತಿ ಹೊಂದಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರ ವಿರುದ್ದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌(Nalin Kumar Kateel) ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್‌(Tweet) ಮಾಡಿರುವ ಅವರು, ಅಲ್ಲ ಸ್ವಾಮಿ,  ಸಿದ್ದರಾಮಯ್ಯನವರೇ ಬೇಕೆಂದೇ ಬೈಗುಳ ಪದ ಬಳಸಿ ನಂತರ ನಾನು ಆ ರೀತಿ ಹೇಳಿದ್ದಲ್ಲ ಇದು ಗ್ರಾಮ್ಯ ಭಾಷೆ ಎಂದೆಲ್ಲ ತಿಪ್ಪೆ ಸಾರಿಸುವುದು ಸರಿಯೇ? ಇದೇನು ಮೊದಲಲ್ಲ ಕೊನೆಯೂ ಅಲ್ಲ.

ಈ ಹಿಂದೆ ತಾವು ರಾಜ್ಯದ ಜವಾಬ್ದಾರಿಯುತ ಸ್ಥಾನವಾದ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಾಗಲೂ ದೇಶದ ಪ್ರಧಾನಿಗಳ(Prime Minister) ಬಗ್ಗೆ ಹೀಗೆ ಮಾತನಾಡಿದ್ದಿರಿ. 

ಹಿಂದೆ ವಿಧಾನಸಭೆಯಲ್ಲಿ ವ್ಯಾಕರಣದ ಪಾಠ ಮಾಡುತ್ತಿದ್ದ ಬಾದಾಮಿಯ(Badami) ಶಾಸಕರಾದ ಸಿದ್ದರಾಮಯ್ಯ ಅವರು ಇಂದು ಏಕವಚನ ಬಹುವಚನಗಳ ಅರಿವಿಲ್ಲದೇ,

ಇದನ್ನೂ ಓದಿ: ಕಳೆದ ವರ್ಷ ಮಂಡಿಸಿದ್ದ ಬಜೆಟ್ ನಲ್ಲಿನ 132 ಆಶ್ವಾಸನೆಗಳು ಇನ್ನೂ ಈಡೇರಿಲ್ಲ : ಜೆಡಿಎಸ್‌

ದೇಶದ ಪ್ರಧಾನಮಂತ್ರಿಗಳು ಹಾಗೂ ರಾಜ್ಯದ ಮುಖ್ಯಮಂತ್ರಿಗಳ ಬಗ್ಗೆ ‘ಅವನ ಮನೆ ಕಾಯೋಗ, ಇವನ ಮನೆ ಕಾಯೋಗ..’ ಅಂತೆಲ್ಲಾ ಪದ ಬಳಕೆ ಮಾಡ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಇನ್ನು ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆ ರಾಜ್ಯ (Kateel tweet about Siddaramaiah) ರಾಜಕೀಯದಲ್ಲಿ ಮೂರು ಪಕ್ಷಗಳ ನಾಯಕರ ಮಾತಿನ ವರಸೆಯೇ ಬದಲಾಗಿದೆ.

ಪರಸ್ಪರ ವೈಯಕ್ತಿಕ ಟೀಕೆಗಳನ್ನು ಮಾಡಲಾಗುತ್ತಿದೆ. ಇತ್ತೀಚೆಗೆ ಕಾಂಗ್ರೆಸ್‌ನಾಯಕ ಬಿ.ಕೆ.ಹರಿಪ್ರಸಾದ್‌(BK Hari prasad) ಹೊಸಪೇಟೆಯಲ್ಲಿ

ಬಹಿರಂಗ ವೇದಿಕೆಯ ಮೇಲೆ ಕಾಂಗ್ರೆಸ್‌ಬಿಟ್ಟು ಬಿಜೆಪಿ(BJP) ಸೇರಿರುವ ಶಾಸಕರನ್ನು ʼವೇಶ್ಯೆಯರುʼ ಎಂದು ಕರೆದಿದ್ದರು.

ಇದಕ್ಕೆ ಪ್ರತಿಕ್ರಿಯೆಯಾಗಿ  ಸಚಿವ ಬಿ.ಸಿ.ಪಾಟೀಲ್‌(BC Patil) ಅವರು ಬಿ.ಕೆ.ಹರಿಪ್ರಸಾದ್‌ ಅವರನ್ನು ʼಪಿಂಪ್‌ʼ ಎಂದು ಅವಹೇಳನ ಮಾಡಿದ್ದರು.

ಹೀಗೆ ರಾಜ್ಯದಲ್ಲಿ ರಾಜಕೀಯ  ಟೀಕೆಗಳು  ವೈಯಕ್ತಿಕ ಮಟ್ಟಕ್ಕೂ ಇಳಿಯುತ್ತಿರುವುದು ದುರಂತ.

ಪಕ್ಷಾತೀತವಾಗಿ ಮೂರು ಪಕ್ಷಗಳನ್ನು ಇದಕ್ಕೆ ಕಡಿವಾಣ ಹಾಕಿಕೊಳ್ಳಬೇಕಿದೆ. ರಾಜಕೀಯ ವಿರೋಧಿಯ ವಿರುದ್ದ ಬಳಸಬೇಕಾದ ಪದ ಬಳಕೆ ಕುರಿತು ರಾಜಕೀಯ ನಾಯಕರು ಕನಿಷ್ಠ ಪ್ರಜ್ಞೆಯನ್ನಾದರೂ ಹೊಂದಿರಬೇಕು.

ಚುನಾವಣೆಯ ಸಮಯದಲ್ಲಿ ರಾಜಕೀಯ ನಾಯಕರು ಬಳಸುವ ಪದಗಳು ಅವರ ರಾಜಕೀಯ ಜೀವನದ ಮೇಲೂ ಪರಿಣಾಮ ಬೀರಬಹುದು ಎಂಬುದನ್ನು ಎಲ್ಲ ರಾಜಕೀಯ ನಾಯಕರು ನೆನಪಿಟ್ಟುಕೊಳ್ಳಬೇಕು. ಸಾರ್ವಜನಿಕವಾಗಿ ಮಾತನಾಡುವಾಗ ಪದಬಳಕೆ ಅತಿಮುಖ್ಯ  ಪಾತ್ರವಹಿಸುತ್ತದೆ.

Exit mobile version