ಸಲಿಂಗಕಾಮಿ ದಂಪತಿಗಳನ್ನು ಬೇರ್ಪಡಿಸಿದ್ದ ಪೋಷಕರು ; ಒಂದು ಮಾಡಿದ ಕೇರಳ ಹೈಕೋರ್ಟ್‌!

Kerala

ಕೊಚ್ಚಿ : ಸಲಿಂಗಕಾಮಿ(Lesbian) ದಂಪತಿ ಅಧಿಲಾ ನಸ್ರಿನ್ ಮತ್ತು ಫಾತಿಮಾ ನೂರಾ ಅವರು ಸಲ್ಲಿಸಿದ ಮನವಿಯನ್ನು ಆಧಾರಿಸಿ ಕೇರಳ ಹೈಕೋರ್ಟ್(Kerala Highcourt) ಮಂಗಳವಾರ ದಂಪತಿಗಳು ಒಟ್ಟಿಗೆ ಜೀವಿಸಲು ಅನುಮತಿ ಸೂಚಿಸಿದೆ.


ಕಳೆದ ವಾರ ತನ್ನ ಸಂಗಾತಿ ಫಾತಿಮಾಳನ್ನು ಆಕೆಯ ಸಂಬಂಧಿಕರು ಅಪಹರಿಸಿದ್ದಾರೆ ಎಂದು ಅಧಿಲಾ ಆರೋಪಿಸಿದ್ದರು. ಈ ಹಿಂದೆಯೂ ಆಕೆ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದರು ಎನ್ನಲಾಗಿದೆ. ಅಧಿಲಾ, 22 ಮತ್ತು ಫಾತಿಮಾ, 23, ಅವರು ಸೌದಿ ಅರೇಬಿಯಾದಲ್ಲಿ ವಿದ್ಯಾರ್ಥಿಯಾಗಿದ್ದಾಗ ಭೇಟಿಯಾಗಿದ್ದರು ಮತ್ತು ನಂತರ ಅವರು ನ್ಯಾಯಾಲಯದಲ್ಲಿ ಸಲ್ಲಿಸಿದ ಮನವಿಯ ಪ್ರಕಾರ ಒಟ್ಟಿಗೆ ವಾಸಿಸಲು ನಿರ್ಧರಿಸಿದರು. ಆದರೆ ಸಂಬಂಧಿಕರು ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಮೇ 19 ರಂದು ನಾನು ಕೋಝಿಕ್ಕೋಡ್ ತಲುಪಿ ಫಾತಿಮಾಳನ್ನು ಭೇಟಿಯಾದೆ. ಕೆಲವು ದಿನಗಳಿಂದ ನಾವು ಕೋಝಿಕ್ಕೋಡ್‌ನ ಆಶ್ರಯ ಮನೆಯಲ್ಲಿ ವಾಸಿಸುತ್ತಿದ್ದೆವು, ಆದರೆ ಸಂಬಂಧಿಕರು ಸ್ಥಳದಲ್ಲಿ ಅವರನ್ನು ಪತ್ತೆಹಚ್ಚಿದಾಗ ಪೊಲೀಸರು ಮಧ್ಯಪ್ರವೇಶಿಸಿದರು ಎಂದು ಅಧಿಲಾ ಅರ್ಜಿಯಲ್ಲಿ ತಿಳಿಸಿದ್ದಾರೆ. ಅಧಿಲಾ ಅವರ ಸಂಬಂಧಿಕರು ಇಬ್ಬರನ್ನು ಕೋಝಿಕ್ಕೋಡ್‌ನಿಂದ ಅಲುವಾಕ್ಕೆ ಕರೆದೊಯ್ದರು ಮತ್ತು ಕೆಲವು ದಿನಗಳ ನಂತರ ಫಾತಿಮಾ ಅವರ ಸಂಬಂಧಿಕರು ಅಲುವಾಕ್ಕೆ ಆಗಮಿಸಿ ಅವಳನ್ನು ಕೋಝಿಕ್ಕೋಡ್‌ಗೆ ಬಲವಂತವಾಗಿ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ಕೋಝಿಕ್ಕೋಡ್ ಮೂಲದ ಎನ್‌ಜಿಒ ವನಜಾ ಎಂಬುವರ ಸಹಾಯದಿಂದ ದಂಪತಿಗಳು ಕೋಝಿಕ್ಕೋಡ್‌ನಲ್ಲಿ ವಾಸಿಸುತ್ತಿದ್ದರು. ಸದ್ಯ ಈಗ ಇವರ ಆಶಯದಂತೆ ಕೇರಳ ನ್ಯಾಯಲಯ ದಂಪತಿಗಳಿಗೆ ಯಾವುದೇ ತೊಂದರೆಯಿಲ್ಲದೇ ಒಟ್ಟಿಗೆ ಜೀವಿಸಲು ಅನುಮತಿ ಸೂಚಿಸಿದೆ.

Exit mobile version