ಇಂದು ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: ಭ್ರಷ್ಟ ಅಧಿಕಾರಿಗಳಿಗೆ ಶಾಕ್‌ ಕೊಟ್ಟ ಅಧಿಕಾರಿಗಳು

Bengaluru (ಜೂ.28): ಲೋಕಾಯುಕ್ತ ಅಧಿಕಾರಿಗಳು ಇಂದು (Lokayukta attacks corrupt officials) ಮುಂಜಾನೆ ರಾಜ್ಯದ ವಿವಿಧೆಡೆ ದಾಳಿ ನಡೆಸಿದ್ದಾರೆ. ಮುಂಜಾನೆ 5 ಗಂಟೆಗೆ ಭ್ರಷ್ಟರಿಗೆ ಶಾಕ್‌ ಕೊಟ್ಟ

ಲೋಕಾಯುಕ್ತರು ಬೆಂಗಳೂರು, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಚಿಕ್ಕಮಗಳೂರು, ಯಾದಗಿರಿ ಸೇರಿದಂತೆ ರಾಜ್ಯದ ವಿವಿಧೆಡೆ ದಾಳಿ ನಡೆಸಿದ್ದಾರೆ.

ಕೆ.ಆರ್‌ ಪುರಂ ತಹಶೀಲ್ದಾರ್‌ ಅಜಿತ್ ರೈ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ:

ಬೆಂಗಳೂರಿನ ಕೆಆರ್ ಪುರಂ ತಹಶಿಲ್ದಾರ್ ಆಗಿರುವ ಅಜಿತ್ ಕುಮಾರ್ ರೈ ಮಾಲಾಡಿ ಮನೆ ಮೇಲೆ ಮುಂಜಾನೆ 5 ಗಂಟೆಗೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಅವರ ಮನೆಯಿಂದ ಕಂತೆ-ಕಂತೆ ನಗದು

ವಶಪಡಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದವರಾದ ಅಜಿತ್ ಕುಮಾರ್ ರೈ ಅವರ ಸಹಕಾರನಗರದಲ್ಲಿರುವ ನಿವಾಸದಲ್ಲಿ ಲೋಕಾಯುಕ್ತ ಅಧಿಕಾರಿಗಳಿಗೆ ನಗದು ಹಣದ ಜೊತೆಗೆ ಚಿನ್ನಾಭರಣಗಳು

ಸಹ ಪತ್ತೆಯಾಗಿದ್ದು. ಅವುಗಳನ್ನ ವಶ ಪಡೆದುಕೊಂಡು ಹಣದ ಮೂಲದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಇನ್ನು ಅತ್ತ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿರುವ ಅಜಿತ್ ಕುಮಾರ್ ರೈ ಮನೆ ಮೇಲೂ ದಾಳಿಯಾಗಿದ್ದು,

ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಚಂದ್ರಾ ಲೇ ಔಟ್‌ನಲ್ಲಿ ವಾಸವಿರುವ ಅವರ ಸಹೋದರನ (Lokayukta attacks corrupt officials) ಮನೆಯನ್ನೂ ಪರಿಶೀಲನೆ ನಡೆಸುತ್ತಿದ್ದಾರ.

ಬಾಗಲಕೋಟೆಯ ಕೃಷಿ ಅಧಿಕಾರಿಗಳಿಗೆ ಶಾಕ್‌ !


ಬಾಗಲಕೋಟೆಯಲ್ಲಿ ಇಬ್ಬರು ಕೃಷಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಬಾಗಲಕೋಟೆ ಕೃಷಿ ಇಲಾಖೆ ಸಹ ನಿರ್ದೇಶಕಿ ಚೇತನಾ ಪಾಟೀಲ ಹಾಗೂ ಮತ್ತೋರ್ವ ಕೃಷಿ ಇಲಾಖೆ ಸಹಾಯಕ

ನಿರ್ದೇಶಕ ಬೀಳಗಿ ಕೃಷ್ಣ ಶಿರೂರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಎರಡೂ ಕೃಷಿ ಅಧಿಕಾರಿಗಳ ನಿವಾಸಗಳು ಬಾಗಲಕೋಟೆ ನಗರದ ವಿದ್ಯಾಗಿರಿಯಲ್ಲಿವೆ. ಅಧಿಕಾರಿಗಳು ಎರಡು ತಂಡಗಳಾಗಿ ದಾಳಿ ನಡೆಸಿದ್ದಾರೆ.

ಡಿವೈಎಸ್ಪಿ ಶಂಕರ ರಾಗಿ, ಪುಷ್ಪಲತಾ ನೇತೃತ್ವದ ತಂಡ ದಾಳಿ ನಡೆಸಿದೆ. ಅಧಿಕಾರಿಗಳ ಮನೆ, ಕಚೇರಿಗಳ ಮೇಲೂ ದಾಳಿ ನಡೆದಿದೆ.

ವಿಜಯಪುರದ ಭ್ರಷ್ಟರಿಗೆ ಬಿಸಿವಿಜಯಪುರ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಲೋಕಾಯುಕ್ತ ತಂಡವು ವಲಯದ ನಾಲ್ಕು ಪ್ರದೇಶಗಳಲ್ಲಿ ಸಮೀಕ್ಷೆ

ನಡೆಸಿದೆ.ಪಿಡಬ್ಲೂಡಿ ಇಲಾಖೆ ಜೆಇ ಭೀಮನಗೌಡ ಬಿರಾದಾರ ಅವರ ಮನೆ ಮತ್ತು ಅವರ ಸಂಬಂಧಿ ಶ್ರೀಕಾಂತ ಅವರ ಅಂಗಡಿ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಪಿಡಬ್ಲೂಡಿ ಇಲಾಖೆ

ಬಸವನಬಾಗೇವಾಡಿ ವಿಭಾಗದಲ್ಲಿ ಭೀಮನಗೌಡ ಬಿರಾದಾರ ಪ್ರಭಾರಿ ಎಇಇ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ : ಜುಲೈ 3 ರಿಂದ 10 ದಿನ ವಿಧಾನಸಭೆ ಅಧಿವೇಶನ : ಸಿಎಂ ಸಿದ್ದರಾಮಯ್ಯರಿಂದ ಬಜೆಟ್‌ ಮಂಡನೆ

ವಿಜಯಪುರ ನಗರದ ಆರ್ ಟಿ ಓ ಕಚೇರಿ ಹಿಂಭಾಗದಲ್ಲಿ ಭೀಮನಗೌಡ ಬಿರಾದಾರ ಮನೆ ಇದೆ ಇದರ ಮೇಲೆ ಸಹ ದಾಳಿ ನಡೆಸಿದೆ. ಮುದ್ದೇಬಿಹಾಳ ಗ್ರಾಮೀಣ ಕುಡಿಯುವ ನೀರು ಸರಬರಾಜು

ಇಲಾಖೆ ಅಸಿಸ್ಟೆಂಟ್ ಎಇಇ ಜೆ.ಪಿ.ಶೆಟ್ಟಿ ಅವರ ಮನೆ ಹಾಗೂ ಸ್ವಗ್ರಾಮ ಸಾಕನೂರ ಅವರ ಮನೆ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ವಿಜಯಪುರ ಲೋಕಾಯುಕ್ತ ಎಸ್ಪಿ

ಅನಿತಾ ಹದ್ದನ್ನವರ ನೇತೃತ್ವದಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. 3 ಡಿವೈಎಸ್ಪಿಗಳು ಮತ್ತು 7 ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ನಾಲ್ಕು ದಿಕ್ಕುಗಳಲ್ಲಿ ದಾಳಿ ನಡೆಸಲಾಯಿತು.

ಬೆಳಗಾವಿಯ ಹೆಸ್ಕಾಂ ಅಧಿಕಾರಿಗಳ ಮನೆ ಮೇಲೆ ರೇಡ್‌

ಬೆಳಗಾವಿಯ ಹೆಸ್ಕಾಂ ‌ಕಾರ್ಯನಿರ್ವಾಹಕ ಇಂಜಿನಿಯರ್ ಮನೆಯ ಮೇಲೆಯೂ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಬೆಳಗಾವಿಯ ರಾಮತೀರ್ಥ ನಗರದಲ್ಲಿರುವ ಹೆಸ್ಕಾಂ‌ನ ಕಾರ್ಯನಿರ್ವಾಹಕ ಇಂಜಿನಿಯರ್ ಶೇಖರ

ಬಹುರೂಪಿ ಅವರ ಮನೆಯಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಶೇಖರ ಬಹುರೂಪಿ ಪ್ರಸ್ತುತ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಬೆಳಗಾವಿಯ ಶೇಖರ ಬಹುರೂಪಿ ಅವರ ಮನೆ ಸೇರಿದಂತೆ ಹಲವೆಡೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶೇಖರ್ ಬಹುರೂಪಿ ಅವರು ಪ್ರವಾಹದ ಸಂದರ್ಭದಲ್ಲಿ ಸಂಭವಿಸಿದ ಹಗರಣದಿಂದಾಗಿ

ಅಮಾನತುಗೊಂಡಿದ್ದರು. ಶೇಖರ ಅವರು 2019ರಲ್ಲಿ ಅಥಣಿಯಲ್ಲಿ ಕೆಲಸ ಮಾಡುತ್ತಿದ್ದಾಗ ಅಮಾನತುಗೊಂಡಿದ್ದರು.

ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ

ಯಾದಗಿರಿಯ ಎಇಇ ವಿಶ್ವನಾಥ್ ರೆಡ್ಡಿ ಲೋಕಾ ಬಲೆಗೆ

ಯಾದಗಿರಿ ನಗರದ ಗ್ರೀನ್ ಸಿಟಿಯಲ್ಲಿರುವ ಪಿಡಬ್ಲ್ಯುಡಿ ಎಇಇ ವಿಶ್ವನಾಥ ರೆಡ್ಡಿ ಅವರ ಮನೆ ಮೇಲೆ ಲೋಕಾಯುಕ್ತ ತಂಡ ದಾಳಿ ನಡೆಸಿದೆ. ಮಲಗಿದ್ದಾಗಲೇ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳು ಬೆಳಗಿನ ಜಾವ 5 ಗಂಟೆಗೆ ದಾಳಿ ಮಾಡಿದ್ದಾರೆ. ಅಧಿಕಾರಿಗಳು ಭ್ರಷ್ಟಾಚಾರದ ಆರೋಪ ಮೇಲೆ ದಾಳಿ ನಡೆಸಿದ್ದಾರೆ. ಸದ್ಯ ಅಧಿಕಾರಿಗಳ ತಂಡ ವಿಶ್ವನಾಥ ರೆಡ್ಡಿ ಮನೆಯಲ್ಲಿ ತಲಾಷ್ ನಡೆಸುತ್ತಿದೆ.

ಕಲಬುರಗಿ ಯೋಜನಾಧಿಕಾರಿಗೆ ಲೋಕಾ ಶಾಕ್‌


ನಗರ ಯೋಜನಾಧಿಕಾರಿ ಶರಣಪ್ಪ ಮಡಿವಾಳ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಲಬುರಗಿ ಹೊರವಲಯದ ನಾಗನಹಳ್ಳಿ ಬಳಿಯ ತೋಟದ ಮನೆ ಮೇಲೆ

ಲೋಕಾಯುಕ್ತ ದಳ ದಾಳಿ ನಡೆಸಿದೆ. ಶರಣಪ್ಪ ಮಡಿವಾಳ ಸದ್ಯ ಸಿಂಧನೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿಂಧನೂರು ಕಲಬುರಗಿ ಎರಡೂ ಕಡೆ ಏಕಕಾಲದಲ್ಲಿ ದಾಳಿ ನಡೆಸಿ ತಪಾಸಣೆ ನಡೆಸಲಾಗಿದೆ.

ತುಮಕೂರು ಕೃಷಿ ಅಧಿಕಾರಿಗಳ ಮೇಕೆ ಲೋಕಾ ದಾಳಿ


ತುಮಕೂರು ಜಿಲ್ಲಾ ಕೃಷಿ ಇಲಾಖೆ ಸಹ ನಿರ್ದೇಶಕ ಕೆ.ಎಚ್.ರವಿ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರವಿಗೆ ಸಂಬಂಧಿಸಿದ ಆರು ಸ್ಥಳಗಳ ಮೇಲೆ ಲೋಕಾಯುಕ್ತ

ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಮನಗರ ಪ್ರದೇಶದಲ್ಲಿ ನಾಲ್ಕು ಹಾಗೂ ತುಮಕೂರು ಜಿಲ್ಲೆಯ ಪ್ರದೇಶದಲ್ಲಿ ಎರಡು ದಾಳಿಗಳು ನಡೆದಿವೆ.

ಇದನ್ನೂ ಓದಿ : ನಂದಿನಿ ಹಾಲಿನ ದರ ಲೀಟರಿಗೆ 5 ರೂ. ಏರಿಕೆಗೆ ಬೇಡಿಕೆ ಇಟ್ಟಿದ್ದೇವೆ : KMF ನೂತನ ಅಧ್ಯಕ್ಷ ಭೀಮಾ ನಾಯ್ಕ್


ಕೃಷಿ ಇಲಾಖೆ ಸಹ ನಿರ್ದೇಶಕ ರವಿ ಮನೆ ಹಾಗೂ ತೋಟದ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೆ.ಎಚ್.ರವಿ ಅವರು ತುಮಕೂರಿನ ಕೃಷಿ ಸಚಿವಾಲಯದಲ್ಲಿ ಜೆಡಿ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ತುಮಕೂರಿನ ಶಂಕರಪುರದ ಮನೆ, ತುಮಕೂರು ನಗರ ಹಾಗೂ ರಾಮನಗರದ ತೋಟದ ಮನೆ ಮೇಲೆ ದಾಳಿ ನಡೆದಿದೆ. ದಾಳಿ ವೇಳೆ ಲೋಕಾಯುಕ್ತ ಅಧಿಕಾರಿಗಳು ಹಲವು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಗೌರಿಬಿದನೂರು ಅಬಕಾರಿ‌ ನಿರೀಕ್ಷಕ ರಮೇಶ್ ಅವರ ಮನೆ ಮೇಲೂ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಬೆಂಗಳೂರಿನ ನಾಗರಬಾವಿ ಬಳಿ ಇರೋ ನಿವಾಸದಲ್ಲಿ ಶೋಧ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ

ನಡೆಸಲಾಗುತ್ತಿದೆ.ಲೋಕಾಯುಕ್ತ ಅಧಿಕಾರಗಳು ಅಕ್ರಮ ಆಸ್ತಿ ಗಳಿಕೆ ಆರೋಪದಡಿ‌ ದಾಳಿ ಮಾಡಿದ್ದಾರೆ.


ಲೋಕಾಯುಕ್ತ ಅಧಿಕಾರಿಗಳು ಕುಂಬಾಪುರ ಬಳಿ ಫಾರಂ ಹೌಸ್ ಮೇಲೆ ಮತ್ತು ರಾಮನಗರ ತಾಲ್ಲೂಕಿನ ಜಿಗೇನಹಳ್ಳಿ ಬಳಿ ರವಿ ಅವರ ತಂದೆ ತಾಯಿ ವಾಸವಿದ್ದ ಮನೆ ಮೇಲೆ ಕೂಡ ದಾಳಿ ಮಾಡಿದ್ದಾರೆ.

ಅಧಿಕಾರಿಗಳು ಮನೆ ಹಾಗೂ ಫಾರಂ ಹೌಸ್ ನಲ್ಲಿ ಶೋಧಕಾರ್ಯ ಮುಂದುವರಿಸಿದ್ದಾರೆ.

ಚಿಕ್ಕಮಗಳೂರು ಗಂಗಾಧರ್‌ಗೆ ಲೋಕಾ ಶಾಕ್‌

ಲೋಕಾಯುಕ್ತ ಅಧಿಕಾರಿಗಳು ಚಿಕ್ಕಮಗಳೂರಿನಲ್ಲಿ ಕೂಡ ದಾಳಿ ನಡೆಸಿದ್ದಾರೆ. ನಿರ್ಮಿತಿ ಕೇಂದ್ರದ ಯೋಜನ ವ್ಯವಸ್ಥಾಪಕರಾದ ಗಂಗಾಧರ್ ಮನೆ ಮೇಲೆ ಅಕ್ರಮ ಆಸ್ತಿ ಸಂಪಾದನೆಯ ಆರೋಪದ ಹಿನ್ನಲೆಯಲ್ಲಿ ದಾಳಿ

ನಡೆಸಲಾಗಿದೆ. ಏಕಕಾಲದಲ್ಲಿ ಪೆಟ್ರೋಲ್ ಬಂಕ್ ಸೇರಿದಂತೆ ಮನೆ ಮೇಲೆ ದಾಳಿ ನಡೆದಿದೆ. ರಾಮನಹಳ್ಳಿಯಲ್ಲಿರು ಪೆಟ್ರೋಲ್ ಬಂಕ್ ಮೇಲೆ‌ ಮತ್ತು ಜಯನಗರ ಬಡಾವಣೆಯಲ್ಲಿ ಇರುವ

ಗಂಗಾಧರ್ ಮನೆ, ಲೋಕಾ ಟೀಂ ದಾಳಿ ಮಾಡಿದೆ.

ರಶ್ಮಿತಾ ಅನೀಶ್

Exit mobile version