205 ಕೆಜಿ ಈರುಳ್ಳಿ ಮಾರಿದ ರೈತನಿಗೆ ಸಿಕ್ಕಿದ್ದು ಕೇವಲ 8 ರೂ. ಲಾಭ!

Bengaluru :  ಉತ್ತರ ಕರ್ನಾಟಕದ ರೈತನೋರ್ವ(Loss for Onion Farmer) ಗದಗ ಜಿಲ್ಲೆಯಿಂದ ಬೆಂಗಳೂರಿಗೆ 415 ಕಿಲೋಮೀಟರ್ ಪ್ರಯಾಣಿಸಿ, 205 ಕಿಲೋ ಈರುಳ್ಳಿ (Onion) ಮಾರಾಟ ಮಾಡಿದ್ದಾನೆ.

ಇದಕ್ಕೆ ಪ್ರತಿಯಾಗಿ ಕೇವಲ 8.36 ರೂ. ಲಾಭ ಪಡೆದಿದ್ದಾನೆ. ರೈತ ತನಗಾದ ಈ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ (Loss for Onion Farmer) ಹಂಚಿಕೊಂಡಿದ್ದಾನೆ.

ಈರುಳ್ಳಿ ಬೆಲೆಯು ಬೆಂಗಳೂರಿನಲ್ಲಿ (Bengaluru)  ಕ್ವಿಂಟಲ್ಗೆ 500 ಎಂದು ಹೇಳಲಾಗಿತ್ತು. 

ಹೀಗಾಗಿ ಉತ್ತರ ಕರ್ನಾಟಕದ ಗದಗದ ರೈತರೊಬ್ಬರು ಬೆಂಗಳೂರಿನ ಯಶವಂತಪುರ ಮಾರುಕಟ್ಟೆಗೆ 415 ಕಿಲೋಮೀಟರ್ ಪ್ರಯಾಣಿಸಿದ ಮಾರಾಟ ಮಾಡಿದ ನಂತರ 205 ಕಿಲೋಗ್ರಾಂ ಈರುಳ್ಳಿಗೆ ಕೇವಲ 8.36 ರೂ. ಗಳಿಸಿದ್ದಾರೆ.

ವಹಿವಾಟಿನ ರಸೀದಿ ಅಂತರ್ಜಾಲದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ರೈತನನ್ನು ಪವಾಡೆಪ್ಪ ಹಳ್ಳಿಕೇರಿ ಎಂದು ಗುರುತಿಸಲಾಗಿದೆ. ಈರುಳ್ಳಿ ಖರೀದಿಸುವ ಸಗಟು ವ್ಯಾಪಾರಿ ಪ್ರತಿ ಕ್ವಿಂಟಲ್ಗೆ ₹ 200 ದರ ನಿಗದಿಪಡಿಸಿ,

ಸರಕು ಸಾಗಣೆ ಶುಲ್ಕಕ್ಕೆ ₹377 ಮತ್ತು ಹಮಾಲಿ ಶುಲ್ಕಕ್ಕೆ ₹24 ಕಡಿತಗೊಳಿಸಿ ಒಟ್ಟು ₹8.36ಕ್ಕೆ ಲಾಭ ನೀಡಿದ್ದಾರೆ.

ಇದನ್ನೂ ಓದಿ : https://vijayatimes.com/10-years-back-hit-films/

ಇದರಿಂದ ಮನನೊಂದ ರೈತ ಅಂತರ್ಜಾಲದಲ್ಲಿ ತನ್ನ ಸಂಕಟವನ್ನು ಹಂಚಿಕೊಂಡಿದ್ದು, ಕರ್ನಾಟಕದ ರಾಜಧಾನಿಯಲ್ಲಿ ಬೆಳೆಯನ್ನು ಮಾರಾಟ ಮಾಡದಂತೆ ಇತರ ರೈತರಿಗೆ ಎಚ್ಚರಿಕೆ ನೀಡಿದ್ದಾರೆ!

ಸಾಮಾಜಿಕ ಜಾಲತಾಣದಲ್ಲಿ ಅನೇಕರು ಈ ರೈತನ ಪರಿಸ್ಥಿತಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಅವರಲ್ಲಿ ಒಬ್ಬರು, “ನರೇಂದ್ರ ಮೋದಿ(Narendra Modi) ಮತ್ತು ಬಸವರಾಜ ಬೊಮ್ಮಾಯಿ(Basavaraj Bommai) ಅವರ ಡಬಲ್ ಎಂಜಿನ್ ಸರ್ಕಾರವು ರೈತರ (ಅದಾನಿ) ಆದಾಯವನ್ನು ದ್ವಿಗುಣಗೊಳಿಸುವುದು ಹೀಗೆ.

ಗದಗ ರೈತ ಈರುಳ್ಳಿ ಮಾರಲು ಬೆಂಗಳೂರಿಗೆ 415 ಕಿ.ಮೀ ಪ್ರಯಾಣಿಸಿದಾಗ 205 ಕೆಜಿಗೆ ₹8.36 ಲಾಭ ಸಿಗುತ್ತದೆ” ಎಂದು ಬರೆದಿದ್ದಾರೆ.

ಉತ್ತರ ಕರ್ನಾಟಕ ಜಿಲ್ಲೆಗಳ ರೈತರು ಈಗ ತಮ್ಮ ಇಳುವರಿಗೆ ಎಂಎಸ್ಪಿ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸುವಂತೆ ಒತ್ತಾಯಿಸಿ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಗದಗದಲ್ಲೂ ಈ ವರ್ಷ ಎಡೆಬಿಡದೆ ಸುರಿದ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದು, ಈರುಳ್ಳಿ ಗಾತ್ರದಲ್ಲಿ ಚಿಕ್ಕದಾಗಿದೆ.

https://fb.watch/h5G-if5P6z/ ಬಸವೇಶ್ವರ ನಗರ : ವೃದ್ಧರ ಪಿಂಚಣಿಯನ್ನು ಕಿತ್ತು ತಿನ್ನುವ ಬ್ರೋಕರ್ಗಳು!

ಹೀಗಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗದಗದಲ್ಲಿ ಸಿಗುತ್ತಿರುವ ಬೆಲೆಯಿಂದ ಮನನೊಂದ ಪವಾಡೆಪ್ಪ ಅವರು ₹25 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿ ಬೆಳೆದ ಬೆಳೆಯನ್ನು ರಾಜ್ಯ ರಾಜಧಾನಿಗೆ ಸಾಗಿಸಿದ್ದರು. ಅಲ್ಲಿಯೂ ಸೂಕ್ತ ಬೆಲೆ ಸಿಗದೇ ರೈತ ಪವಾಡೆಪ್ಪ ತೀವ್ರ ನಷ್ಟ ಅನುಭವಿಸಿದ್ದಾರೆ.

Exit mobile version