ಶಿವಸೇನೆ ಬಂಡಾಯ : ಕುಟುಂಬ ರಾಜಕೀಯಕ್ಕೆ ಹೊಸ ಸವಾಲು

Uddhav Thackrey

ಮಹಾರಾಷ್ಟ್ರದಲ್ಲಿ(Maharashtra) ಶಿವಸೇನೆ(Shivsena) ಶಾಸಕರು(MLA) ತಮ್ಮ ನಾಯಕ ಉದ್ದವ್ ಠಾಕ್ರೆ(Uddhav Thackrey) ವಿರುದ್ದ ಹೂಡಿರುವ ಬಂಡಾಯ ಅನೇಕ ರಾಜಕೀಯ(Maharashtra Political crisis deepens) ಆಯಾಮಗಳನ್ನು ಹೊಂದಿದೆ.

ಮಹಾರಾಷ್ಟ್ರದ ಅಸ್ಮಿತೆ ಮತ್ತು ಹಿಂದುತ್ವವನ್ನೇ ಜೀವಾಳವಾಗಿಟ್ಟುಕೊಂಡು ಸಂಘಟಿಸಲಾದ ಪಕ್ಷ ಶಿವಸೇನೆ. ಬಾಳಾ ಠಾಕ್ರೆ ತನ್ನ ಕಠಿಣ ನಿಲುವು, ಯಾವುದಕ್ಕೂ ರಾಜಿಯಾಗದ ವ್ಯಕ್ತಿತ್ವದಿಂದ ಇಡೀ ಮಹಾರಾಷ್ಟ್ರದಲ್ಲಿ ತನ್ನದೇ ಆದ ಇಮೇಜ್ ಹೊಂದಿದ್ದ ಶಕ್ತಿಯಾಗಿದ್ದರು.

ಅಧಿಕಾರಕ್ಕಾಗಿ ಸಿದ್ದಾಂತದೊಂದಿಗೆ ಬಾಳಾ ಠಾಕ್ರೆ ಎಂದಿಗೂ ರಾಜಿಯಾಗಲಿಲ್ಲ. ಹೀಗಾಗಿಯೇ ಶಿವಸೇನೆಯನ್ನು ಬಾಳಾ ಠಾಕ್ರೆ, ತನ್ನ ಕೈ ತುದಿಯಿಂದಲೇ ನಿಯಂತ್ರಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬಾಳಾ ಠಾಕ್ರೆ ನಂತರ ಕುಟುಂಬದ ಹಿತಾಸಕ್ತಿಗಳಿಗೆ ಅನುಗುಣವಾಗಿ ಪಕ್ಷದ ನೀತಿಗಳು ಬದಲಾದವು.

ಅಧಿಕಾರ ಮತ್ತು ಪುತ್ರ ವ್ಯಾಮೋಹದಿಂದ ಉದ್ದವ್ ಠಾಕ್ರೆ ಪಕ್ಷದ ಸಿದ್ದಾಂತವನ್ನೇ ಮರೆತರು. ಸೈದ್ದಾಂತಿಕ ಕೇಂದ್ರೀತ ಪಕ್ಷ ಕೆಲವೇ ವರ್ಷಗಳಲ್ಲಿ ಅಧಿಕಾರ ಕೇಂದ್ರೀತ ಮತ್ತು ಕುಟುಂಬ ಕೇಂದ್ರೀತ ಪಕ್ಷವಾಗಿ ಬದಲಾಯಿತು.

ಮಹಾರಾಷ್ಟ್ರದ ಪ್ರಾದೇಶಿಕ ಶಕ್ತಿಯಾಗಿದ್ದ ಶಿವಸೇನೆ ನಿಧಾನವಾಗಿ ಠಾಕ್ರೆ ಕುಟುಂಬದ ಹಿಡಿತಕ್ಕೆ ಸಿಲುಕಿ ಹಿಂದುತ್ವದಿಂದ ದೂರವಾಯಿತು. ದೇಶದಲ್ಲಿ ಇದೇ ರೀತಿಯ ಪರಿಸ್ಥಿತಿಯನ್ನು ಅನೇಕ ಪ್ರಾದೇಶಿಕ ಪಕ್ಷಗಳು ಎದುರಿಸುತ್ತಿವೆ. ಸುಧೀರ್ಘ ಹೋರಾಟ ಮತ್ತು ಸಿದ್ದಾಂತದಿಂದ ರೂಪಗೊಂಡ ಪ್ರಾದೇಶಿಕ ಪಕ್ಷಗಳು ನಿಧಾನವಾಗಿ ಒಂದು ಕುಟುಂಬದ ಹಿಡಿತಕ್ಕೆ ಸಿಲುಕಿವೆ.

ಈ ರೀತಿಯ ಪಕ್ಷಗಳಿಗೆ ಶಿವಸೇನೆಯ ಬಂಡಾಯ(Maharashtra Political crisis deepens) ಎಚ್ಚರಿಕೆಯ ಸೂಚನೆಯಾಗಿದೆ. ಕರ್ನಾಟಕದಲ್ಲಿ ಜೆಡಿಎಸ್, ತಮಿಳುನಾಡಿನಲ್ಲಿ ಡಿಎಂಕೆ, ಒಡಿಸ್ಸಾದಲ್ಲಿ ಬಿಜೆಡಿ, ಬಿಹಾರದಲ್ಲಿ ಆರ್‍ಜೆಡಿ, ಉತ್ತರಪ್ರದೇಶದಲ್ಲಿ ಎಸ್‍ಪಿ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹೀಗೆ ಅನೇಕ ಪ್ರಾದೇಶಿಕ ಪಕ್ಷಗಳು ಕುಟುಂಬ ಕೇಂದ್ರೀತ ರಾಜಕೀಯ ಮಾಡುತ್ತಿವೆ. 
ಮುಂದಿನ ದಿನಗಳಲ್ಲಿ ಶಿವಸೇನೆಯ ಈ ಬಂಡಾಯ(Maharashtra Political crisis deepens)  ಈ ಎಲ್ಲ ರಾಜಕೀಯ ಪಕ್ಷಗಳಿಗೆ ಮಾದರಿಯಾಗಲಿದ್ದು, ಕುಟುಂಬ ರಾಜಕೀಯದ ವಿರುದ್ದದ ಬಂಡಾಯ ತೀವ್ರ ಸ್ವರೂಪ ಪಡೆಯುವ ಸಾಧ್ಯತೆಗಳಿವೆ. 
https://vijayatimes.com/hdk-tweets-over-kannaiah-death/
ಪಕ್ಷದ ಮೂಲಭೂತ ಸಿದ್ದಾಂತವನ್ನು ಮರೆತ ಯಾವ ಪಕ್ಷವೂ ಕುಟುಂಬ ಹಿಡಿತದಲ್ಲಿ ಬಹುಕಾಲ ಉಳಿಯಲಾರದು ಎಂಬುದಕ್ಕೆ ಶಿವಸೇನೆಯ ಶಾಸಕರ ಬಂಡಾಯ ಸಾಕ್ಷಿಯಾಗಿದೆ.
Exit mobile version