ನಗ್ನ ಮೆರವಣಿಗೆ ಮಾಡಿ ಅತ್ಯಾಚಾರಗೈದ ಗುಂಪಿಗೆ ನಮ್ಮನ್ನು ಒಪ್ಪಿಸಿದ್ದೇ ಪೊಲೀಸರು: ಮಣಿಪುರ ಸಂತ್ರಸ್ತೆಯ ದೂರು

Manipur: ಬುಧವಾರ ಕುಕಿ-ಜೋ ಸಮುದಾಯದ ಇಬ್ಬರು ಹೆಂಗಸರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ ನಡೆಸಿರುವ (manipur violence video viral) ಘಟನೆಗೆ

ಸಂಬಂಧಿಸಿದಂತೆ ಮಣಿಪುರದಲ್ಲಿ (Manipur) ವಿಡಿಯೋವೊಂದು ವೈರಲ್ ಆಗಿತ್ತು. ಸಂತ್ರಸ್ತ ಮಹಿಳೆಯೊಬ್ಬರು ಈ ಘಟನೆಯ ಕುರಿತು ಇಂಡಿಯನ್ ಎಕ್ಸ್‌ಪ್ರೆಸ್ (Indian Express) ಜೊತೆ ಮಾತನಾಡಿದ್ದು,

” ಪೊಲೀಸರೇ ನಮನ್ನು ಆ ಗುಂಪಿನೊಂದಿಗೆ ಬಿಟ್ಟಿದ್ದರು” ಎಂದು (manipur violence video viral) ಆರೋಪಿಸಿದ್ದಾರೆ.

ಗಂಡಸರ ಗುಂಪೊಂದು ಇಬ್ಬರು ಮಹಿಳೆಯರನ್ನು ಬೆತ್ತಲು ಮಾಡಿ ಮೆರವಣಿಗೆ ನಡೆಸುತ್ತಿರುವುದನ್ನು ಆ ವಿಡಿಯೋದಲ್ಲಿ ಕಾಣಬಹುದು. 20ವರ್ಷದ ಮಹಿಳೆ ಹಾಗು ಇನ್ನೊಬ್ಬರು 40 ವರ್ಷದ ಮಹಿಳೆಯಾಗಿದ್ದಾರೆ.

ಹೊಲದ ಕಡೆಗೆ ಕೆಲವು ಪುರುಷರು ಇಬ್ಬರು ಮಹಿಳೆಯರನ್ನು ಬಲವಂತವಾಗಿ ಎಳೆದೊಯ್ಯುತ್ತಿರುವುದನ್ನು ನೋಡಬಹುದು . ಮೇ (May) 18ರಂದು ಪೊಲೀಸರಿಗೆ ಈ ಬಗ್ಗೆ ದೂರು ಸಲ್ಲಿಸಲಾಗಿದೆ.

ಆದರೆ ಈ ದೂರಿನಲ್ಲಿ 20ರ ಹದಿಹರೆಯದ ಹುಡುಗಿಯನ್ನು ರಕ್ಕಸವಾಗಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನು ಓದಿ: ಶಾಲಾ- ಕಾಲೇಜು ವಾಹನಗಳ ಟ್ಯಾಕ್ಸ್‌ ಏರಿಕೆ: ಕ್ಯಾಬ್‌ಗಳಿಗೆ ಜೀವಿತಾವಧಿ ಮೋಟಾರು ವಾಹನ ತೆರಿಗೆ

”ಕಾಂಗ್‌ಪೊಕ್ಪಿ (Kongpokpi) ಜಿಲ್ಲೆಯಲ್ಲಿರುವ ನಮ್ಮ ವಿಲೇಜ್ ಮೇಲೆ ಗಂಡಸರ ಗುಂಪೊಂದು ದಾಳಿ ಮಾಡಿದಾಗ ಅಲ್ಲಿಂದ ಆಶ್ರಯಕ್ಕಾಗಿ ಕಾಡಿಗೆ ಓಡಿದೇವು, ಅವರನ್ನು ರಕ್ಷಿಸಿದ ತೌಬಲ್ ಪೊಲೀಸರು

ಠಾಣೆಗೆ ಕರೆದೊಯ್ಯುವಾಗ ಒಂದು ಗುಂಪು ದಾರಿಯಲ್ಲಿ ಅಡ್ಡಗಟ್ಟಿತು. ಎರಡು ಕಿಲೋಮೀಟರ್ ದೂರದಲ್ಲಿರುವಾಗಲೇ ಪೊಲೀಸರ ಕಸ್ಟಡಿಯಿಂದ ನಮ್ಮನ್ನು ಅವರು ವಶಪಡಿಸಿಕೊಂಡರು, ಎಂದು ಕಂಪ್ಲೇಂಟ್

(Complaint) ಅಲ್ಲಿ ಸಂತ್ರಸ್ತರು ದೂರಿದ್ದಾರೆ.

ಸಂತ್ರಸ್ತೆಯ ಗಂಡ ಮನೆಯಿಂದ ಫೋನ್‌ನಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ (Indian Express) ಮಾತನಾಡುತ್ತ 20ವರ್ಷದ ಮಹಿಳೆ ಆರೋಪಿಸಿದ್ದನು ಹೇಳಿದ್ದಾರೆ. ”ನಮ್ಮ ಹಳ್ಳಿಯ ಮೇಲೆ ದಾಳಿ ಮಾಡುತ್ತಿದ್ದ

ಗುಂಪಿನೊಂದಿಗೆ ಪೊಲೀಸರು ಇದ್ದರು. ನಮ್ಮನ್ನು ಮನೆಯ ಹತ್ತಿರದಿಂದ ಪೋಲೀಸರೇ ಕರೆದುಕೊಂಡು ಹೋಗಿ ಆ ಗುಂಪಿನೊಂದಿಗೆ ರಸ್ತೆಯಲ್ಲಿ ಬಿಟ್ಟರು. ಹಾಗಾಗಿ ನಮ್ಮನ್ನು ಪೊಲೀಸರೇ ಅವರಿಗೆ ಒಪ್ಪಿಸಿದ್ದಾರೆ”

ಎಂದು ಸಂತ್ರಸ್ತೆಯ ಗಂಡ ತಿಳಿಸಿದ್ದಾರೆ.

ಸಂತ್ರಸ್ತ ಮಹಿಳೆಯರು ಮಾಡಿರುವ ದೂರಿನಲ್ಲಿ, ”ನಾವು ಐವರು ಜೊತೆಗೆ ಇದ್ದೇವು. ವೀಡಿಯೊದಲ್ಲಿ (Video) ಕಾಣುತ್ತಿರುವ ಇಬ್ಬರು ಮಹಿಳೆಯರು ಮತ್ತು 50 ವರ್ಷದ ಇನ್ನೊಬ್ಬ ಸ್ತ್ರೀಯನ್ನು ಕೂಡ ನಗ್ನಗೊಳಿಸಲಾಗಿದೆ.

ಆ ಹದಿಹರೆಯದ ಹುಡುಗಿಯ ತಂದೆ ಮತ್ತು ಸಹೋದರನನ್ನು ಆ ಗುಂಪಿನವರು ಕೊಂದಿದ್ದಾರೆ” ಎಂದು ಆರೋಪಿಸಲಾಗಿದೆ.

”ಈ ಘಟನೆಯ ಸಂಬಂಧಿಸಿದ ವಿಡಿಯೋ ಮಾಡಿರುವ ಬಗ್ಗೆ ನನಗೆ ಮತ್ತು ನನ್ನ ಕುಟುಂಬಕ್ಕೆ ಗೊತ್ತಿಲ್ಲ. ಆ ವಿಡಿಯೋ ವೈರಲ್ (Viral) ಆಗುತ್ತಿದ್ದಂತೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇನ್ನಾದರೂ ರಾಜ್ಯ

ಸರ್ಕಾರ ಮತ್ತು ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ನೊಂದ ಮಹಿಳೆ ಹೇಳಿದರು. ಮಣಿಪುರದಲ್ಲಿ ಇಂಟರ್ನೆಟ್ (Internet) ಇಲ್ಲದ ಕಾರಣ ನಮಗೆ ತಿಳಿದಿಲ್ಲ ಎಂದು ಅವರು ತಿಳಿಸಿದರು.

ಈ ಜನಸಂಧಣಿಯಲ್ಲಿ ಭಾಗಿಯಾಗಿರುವವರಲ್ಲಿ ಕೆಲವರನ್ನು ಮಾತ್ರ ಗುರುತಿಸಲು ಸಾಧ್ಯವಾಯಿತು ಎಂದರು.


ಪೈಶಾಚಿಕ ಕೃತ್ಯದ ವೀಡಿಯೋ ವೈರಲ್ ಆದ ಬಳಿಕ ಜನರು ಆಕ್ರೋಶ ವ್ಯಕ್ತಪಡಿಸಿದರು . ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಗುರುವಾರ ಬೆಳಿಗ್ಗೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಸರ್ಕಾರ ದೃಢಪಡಿಸಿತು.

ಇನ್ನೂ ಹೆಚ್ಚಿನ ದುಷ್ಕರ್ಮಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ಗುರುವಾರ ಮಧ್ಯಾಹ್ನ ತಿಳಿಸಿದ್ದಾರೆ.

Exit mobile version