ಡಿಜಿಟಲ್ ಬ್ಯಾಂಕಿಂಗ್‌ ಪ್ಲಾಟ್‌ಫಾರ್ಮ್‌ ಮೊಬೈಕ್ವಿಕ್ ನಿಂದ ಹೊಸ ಫೀಚರ್‌ ಬಿಡುಗಡೆ

ಪ್ರಮುಖ ಡಿಜಿಟಲ್ ಬ್ಯಾಂಕಿಂಗ್ (Digital Banking) ಪ್ಲಾಟ್‌ಫಾರ್ಮ್ ಆದ ಮೊಬೈಕ್ವಿಕ್ ಗ್ರಾಹಕರ ಸುಲಲಿತ ಬಳಕೆ, ಸುಲಭ ಅರ್ಥೈಸುವಿಕೆಗಾಗಿ (Mobikwik releases new Features) ಈ ಸಂಸ್ಥೆಯು

ಇಂದು ಇಂಡಸ್ಟ್ರಿ-ಫಸ್ಟ್ ಹಣಕಾಸು ಉತ್ಪನ್ನವಾದ Lens ಫೀಚರ್‌ ಬಿಡುಗಡೆ ಮಾಡಿದ್ದು, ಇದು ಬಳಕೆದಾರರಿಗೆ ಅವರ ಹಣದ ಜ್ಞಾನ ಮತ್ತು ಆರ್ಥಿಕ ಸ್ವಾಸ್ಥ್ಯದಲ್ಲಿ ಸಹಾಯ ಮಾಡುತ್ತದೆ. ಇದರ ಕುರಿತಾದ

ಕಂಪ್ಲೀಟ್‌ ಡೀಟೇಲ್ಸ್‌ (Mobikwik releases new Features) ಇಲ್ಲಿದೆ ನೋಡಿ.

ಮೊಬೈಕ್ವಿಕ್ (Mobikwik) ಬಳಕೆದಾರರಿಗೆ ಹಣಕಾಸು ಸಂಸ್ಥೆಗಳಾದ್ಯಂತ ಡೇಟಾವನ್ನು ಸುರಕ್ಷಿತ ಮತ್ತು ಪರಿಣಾಮಕಾರಿ ರೀತಿಯಲ್ಲಿ ಹಂಚಿಕೊಳ್ಳಲು ಸಹಾಯ ಮಾಡುವುದಲ್ಲದೆ ಲೆನ್ಸ್, ಖಾತೆಯ

ಸಂಗ್ರಾಹಕ ಚೌಕಟ್ಟನ್ನು ನಿಯಂತ್ರಿಸುತ್ತದೆ. ಮೊಬೈಕ್ವಿಕ್ ಲೆನ್ಸ್ ಸುಧಾರಿತ ತಂತ್ರಜ್ಞಾನ ಮತ್ತು ದತ್ತಾಂಶ ವಿಜ್ಞಾನವನ್ನು ಸಂಕೀರ್ಣ ಹಣಕಾಸು ದತ್ತಾಂಶವನ್ನು ರೂಪಿಸಲು ಹಾಗೂ ಅರಗಿಸಿಕೊಳ್ಳಲು ಮತ್ತು

ಕಾರ್ಯಗತಗೊಳಿಸಲು ಬಳಸಲಾಗುತ್ತದೆ. ಇದು ಮೊದಲಿಗೆ ಲೆಕ್ಕವಿಲ್ಲದಷ್ಟು ಸ್ಪ್ರೆಡ್‌ಶೀಟ್‌ಗಳನ್ನು (Spreadsheet) ಒಳಗೊಂಡಿದ್ದು, ಬೇಸರದ ಕೈಯ್ಯಲ್ಲೇ ಮಾಡಬೇಕಾಗಿದ್ದ ಪ್ರಕ್ರಿಯೆಯಾಗಿತ್ತು.

ಆದರೆ ಇದೀಗ ಅದು ಒಬ್ಬರ ಬೆರಳ ತುದಿಯಲ್ಲಿ ಲಭ್ಯವಿದೆ.

ಮೊಬೈಕ್ವಿಕ್ನ ಸಹ-ಸಂಸ್ಥಾಪಕ ಮತ್ತು CEO ಬಿಪಿನ್ ಪ್ರೀತ್ ಸಿಂಗ್ (Bipin Preet Singh) ಲೆನ್ಸ್‌ನ ಸಾಮರ್ಥ್ಯದ ಬಗ್ಗೆ ಉತ್ಸುಕರಾಗಿ ಮಾತನಾಡಿದ್ದು, ಮೊಬಿಕ್ವಿಕ್ನ ಲೆನ್ಸ್ ಆರ್ಥಿಕ ಸ್ವಾಸ್ಥ್ಯದ

ಮೂಲಭೂತ ಅಂಶಗಳು ಅಂದರೆ ವ್ಯಕ್ತಿಯು ತನ್ನ ಹಣದ ಮೇಲಿನ ಅರಿವು ಮತ್ತು ನಿಯಂತ್ರಣ ಮುಂತಾದ ಪ್ರಮುಖ ಅಂಶಗಳನ್ನು ತಿಳಿಸುವುದಲ್ಲದೆ ವ್ಯಕ್ತಿಗಳು ತಮ್ಮ ಹಣಕಾಸಿನ ಒಳಹರಿವು,

ಹೊರಹರಿವು ಮತ್ತು ವಹಿವಾಟುಗಳನ್ನು ಸೂಕ್ಷ್ಮ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡುವುದು ಕಷ್ಟಕರವಾಗಿದೆ ಎಂದು ನಮ್ಮ ಸಂಶೋಧನೆಯು ತೋರಿಸಿದ್ದು, ಲೆನ್ಸ್ (Lens) ತಿಳುವಳಿಕೆಯುಳ್ಳ ನಿರ್ಧಾರ

ತೆಗೆದುಕೊಳ್ಳುವ ಅಧಿಕಾರವನ್ನು ನೀಡುವುದಲ್ಲದೆ ಹಾಗಾಗಿ ಬಳಕೆದಾರರು ತಮ್ಮ ಹಣಕಾಸಿನ ಬಗ್ಗೆ ಪೂರ್ವಭಾವಿ ಆಯ್ಕೆಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ.” ಎಂದು ತಿಳಿಸಿದ್ದಾರೆ.

ಇದಷ್ಟೇ ಅಲ್ಲದೆ ಹೊರಹೋಗುವ ಮತ್ತು ಒಳಬರುವ ಪೇಮೆಂಟ್‌ಗಳ (Payment) ಸ್ಮಾರ್ಟ್ ವರ್ಗೀಕರಣ, ಬ್ಯಾಂಕ್ ಖಾತೆಯ ಸಮತೋಲನದ ಪ್ರವೃತ್ತಿಗಳು, ಹೂಡಿಕೆಗಳು, ಖರ್ಚುಗಳು ಮತ್ತು

ಮರುಪಾವತಿಗಳನ್ನು ಒಳಗೊಂಡಿರುವ ಹಾಗೆಯೇ ಸೀಮಿತವಾಗಿರದ ವೈಶಿಷ್ಟ್ಯಗಳ ಸೂಟ್ ಅನ್ನು ಒದಗಿಸುವುದಲ್ಲದೆ ಬಳಕೆದಾರರು ತಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು (Bank Statement)

ಸಲೀಸಾಗಿ ಡೌನ್‌ಲೋಡ್ ಮಾಡಬಹುದಾಗಿದ್ದು, ಅವರ ಮುಂಬರುವ ಬಿಲ್‌ಗಳು, ಮರುಕಳಿಸುವ ಪಾವತಿಗಳು ಮತ್ತು ವೆಚ್ಚಗಳನ್ನು ತಮ್ಮ ಮಾಸಿಕ ಖರ್ಚುಗಳನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ

ಉತ್ತಮವಾಗಿ ಅರ್ಥಮಾಡಿಕೊಳ್ಳಲು ಈ ಲೆನ್ಸ್‌ ಫೀಚರ್‌ ಸಹಾಯಕವಾಗಿದೆ.

ಹೊಸ ನಾವಿನ್ಯತೆಗಳೊಂದಿಗೆ ಬಹು ಬ್ಯಾಂಕ್ (Bank) ಖಾತೆಗಳಲ್ಲಿ ಹಣಕಾಸಿನ ಅರಿವು ಪಡೆಯಲು ಮಾತ್ರವಲ್ಲದೆ ಹೂಡಿಕೆಗಳು, ವಿಮೆ ಮತ್ತು ಪಿಂಚಣಿ ನಿಧಿಗಳಾದ್ಯಂತ ಅವರ ಹಣದ 360-ಡಿಗ್ರಿ

ವೀಕ್ಷಣೆಯನ್ನು ಪಡೆಯಲು ಹೊಸ ವೈಶಿಷ್ಟ್ಯ ಲೆನ್ಸ್ ಅನ್ನು ಇನ್ನಷ್ಟು ನವೀಕರಿಸಿದ್ದೇವೆ” ಎಂದು ಬಿಪಿನ್ ರವರು ವಿವರಿಸಿದ್ದಾರೆ. ಇನ್ನು ಮೊಬೈಕ್ವಿಕ್ ಇತ್ತೀಚೆಗೆ FY23-24Q1 ರಲ್ಲಿ PAT ಧನಾತ್ಮಕ

ಪೋಸ್ಟ್ ಮಾಡಿದ ದೇಶದ ಮೊದಲ ಫಿನ್‌ಟೆಕ್ ಆಗಿದ್ದು, 181% ಬೆಳವಣಿಗೆಯನ್ನು ದಾಖಲಿಸಿದೆ.

ಭಾರತದಾದ್ಯಂತ 140 ಮಿಲಿಯನ್ ನೋಂದಾಯಿತ ಬಳಕೆದಾರರಿಗೆ MobiKwik ಸೇವೆ ಸಲ್ಲಿಸುತ್ತಾ ಬೆಳೆದು ನಿಂತಿದ್ದು, 4 ಮಿಲಿಯನ್‌ಗಿಂತಲೂ ಹೆಚ್ಚಿನ ವ್ಯಾಪಾರಿ ನೆಟ್‌ವರ್ಕ್‌ನೊಂದಿಗೆ ಮೊಬೈಕ್ವಿಕ್

ಭಾರತದಲ್ಲಿ ಅತ್ಯಂತ ವಿಶ್ವಾಸಾರ್ಹ ಮತ್ತು ವ್ಯಾಪಕವಾಗಿ ಬಳಸಲಾಗುವ ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ.

MobiKwik ಪರಿಚಯ
ಇದು ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಹಣಕಾಸು ಉತ್ಪನ್ನಗಳ ಸಮಗ್ರ ಸೂಟ್ ನೀಡುತ್ತಿದ್ದು, MobiKwik ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್ ಆಗಿದೆ. ಉತ್ಪನ್ನಗಳನ್ನು ಪಾವತಿಗಳಿಂದ ಹಿಡಿದು

ಡಿಜಿಟಲ್ ಕ್ರೆಡಿಟ್ (Digital Credit) ಮತ್ತು ಹೂಡಿಕೆಗಳವರೆಗೆ ನಮ್ಮ ಬಳಕೆದಾರರು ತಮ್ಮ ಹಣಕಾಸಿನ ಅಗತ್ಯಗಳನ್ನು ಸುಲಭವಾಗಿ ಪೂರೈಸಲು ಅನುವು ಮಾಡಿಕೊಡುವುದಲ್ಲದೆ ಸ್ಥಳ ಅಥವಾ ಆದಾಯದ

ಮಟ್ಟವನ್ನು ಲೆಕ್ಕಿಸದೆ, ಕೈಗೆಟುಕುವ ಮತ್ತು ಅನುಕೂಲಕರ ಹಣಕಾಸು ಸೇವೆಗಳಿಗೆ ಪ್ರವೇಶದೊಂದಿಗೆ ಲಕ್ಷಾಂತರ ಜನರನ್ನು ಸಬಲೀಕರಣಗೊಳಿಸುವುದು ಇದರ ಉದ್ದೇಶವಾಗಿದೆ.

ಇದನ್ನು ಓದಿ: ಗೋಧಿ ರಹಸ್ಯ: ನಾವು ತಿನ್ನುತ್ತಿರುವ ಗೋಧಿಯೊಳಗಿನ ರಹಸ್ಯದ ಬಗ್ಗೆ ಯಾವತ್ತಾದ್ರು ಯೋಚಿಸಿದ್ದೀರಾ! 

Exit mobile version