ಕಾಶ್ಮೀರ ಎನ್‌ಕೌಂಟರ್‌: ಮಂಗಳೂರಿನ ಎಂಆರ್‌ಪಿಎಲ್‌ ನಿವೃತ್ತ ಎಂ.ಡಿಯ ಏಕೈಕ ಪುತ್ರನ ಬಲಿದಾನ

Mengaluru: ಬುಧವಾರ (ನ.೨೩) ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಜೌರಿ (MRPL Retired MD Son Encounter) ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ

ಭಯೋತ್ಪಾದಕರ ಗುಂಡೇಟಿಗೆ ಕರ್ನಾಟಕದ ಯೋಧ ಎಂವಿ ಪ್ರಾಂಜಲ್ (M.V.Prangle) ಹುತಾತ್ಮರಾಗಿದ್ದು, ಘಟನೆಯಲ್ಲಿ ಇನ್ನೂ ಮೂವರು ಸೈನಿಕರು ಜೀವ ಕಳೆದುಕೊಂಡಿದ್ದಾರೆ.

ಇನ್ನು ಪ್ರಾಂಜಲ್ ಅವರ ತಂದೆ ಮಂಗಳೂರಿನಲ್ಲಿ ಎಂಆರ್‌ಪಿಎಲ್ (MRPL Retired MD Son Encounter) ಎಂಡಿಯಾಗಿ ನಿವೃತ್ತರಾಗಿದ್ದಾರೆ.

ಮಂಗಳೂರಿನಲ್ಲಿ ಎಂಆರ್‌ಪಿಎಲ್‌ (MRPL) ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎಂ.ವೆಂಕಟೇಶ್‌ ಹಾಗೂ ಅನುರಾಧಾ ದಂಪತಿಯ ಏಕೈಕ ಪುತ್ರ ಪ್ರಾಂಜಲ್‌ ಹುತಾತ್ಮ ವೀರ ಯೋಧರಾಗಿದ್ದಾರೆ.

ಮಂಗಳೂರಿನಲ್ಲೇ ಹುಟ್ಟಿ ಬೆಳೆದ ಪ್ರಾಂಜಲ್, ಎಂಆರ್‌ಪಿಎಲ್‌ ಡೆಲ್ಲಿ ಸ್ಕೂಲ್‌ನಲ್ಲಿ ಎಲ್‌ಕೆಜಿಯಿಂದ 10ನೇ ತರಗತಿ ತನಕ ಶಿಕ್ಷಣ ಪಡೆದಿದ್ದರು.

ಬಳಿಕ ಮಹೇಶ್‌ ಕಾಲೇಜಿನಲ್ಲಿ ಪಿಯುಸಿ ಪೂರೈಸಿ, ನಂತರ ಮಧ್ಯಪ್ರದೇಶದ ಮಿಲಿಟರಿ ಕಾಲೇಜ್‌ ಆಫ್‌ ಟೆಲಿಕಮ್ಯುನಿಕೇಶನ್‌ ಎಂಜಿನಿಯರಿಂಗ್‌ನಲ್ಲಿ (Military College of Telecommunication

Engineering) ಶಿಕ್ಷಣ ಪಡೆದು, ನೇರವಾಗಿ ಭಾರತೀಯ ಸೇನೆ ಸೇರಿದ್ದರು. ಎರಡು ವರ್ಷಗಳ ಹಿಂದೆಯಷ್ಟೇ ಪ್ರಾಂಜಲ್‌ ಅವರ ವಿವಾಹ ನೆರವೇರಿದ್ದು, ಅವರ ಪತ್ನಿ ಚೆನ್ನೈ ಐಐಟಿಯಲ್ಲಿ ಎಂಟೆಕ್‌

ಮಾಡುತ್ತಿದ್ದಾರೆ. ಈ ಸುದ್ದಿಯು ಪ್ರಾಂಜಲ್‌ ಕುಟುಂಬ ಹಾಗೂ ಅವರ ಕುಟುಂಬವನ್ನು ದಿಗ್ಭ್ರಮೆಗೊಳಿಸಿದೆ.

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್‌ಕೌಂಟರ್‌ನಲ್ಲಿ (Encounter) ಮೃತಪಟ್ಟ ನಾಲ್ವರು ಸೈನಿಕರಲ್ಲಿ ಇಬ್ಬರು ಸೇನಾ

ಕ್ಯಾಪ್ಟನ್‌ಗಳಾಗಿದ್ದು, 63 ರಾಷ್ಟ್ರೀಯ ರೈಫಲ್ಸ್‌ನ ಕ್ಯಾಪ್ಟನ್‌ (Rifles Captain) ಎಂ.ವಿ. ಪ್ರಾಂಜಲ್‌ ಮತ್ತು 9 ಪಿಎಆರ್‌ಎ ಕ್ಯಾಪ್ಟನ್‌ ಶುಭಂ ಮತ್ತು ಹವಾಲ್ದಾರ್‌ ಮಜೀದ್‌ ಮೃತಪಟ್ಟವರು.

9ನೇ ಪ್ಯಾರಾದ ಸೈನಿಕರು ಕ್ಯಾಪ್ಟನ್‌ ಪ್ರಾಂಜಲ್‌ ಅವರನ್ನು ಸ್ಥಳಾಂತರಿಸಲು ಅರಣ್ಯಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಭಾರಿ ಗುಂಡಿನ ಚಕಮಕಿ ನಡೆದಿದೆ. ಐದರಿಂದ ಆರು ಮಂದಿ ಇರುವ ಉಗ್ರಗಾಮಿಗಳು

ಗುಂಡಿನ ದಾಳಿ ನಡೆಸುತ್ತಿದ್ದು, ಸಂಜೆಯವರೆಗೂ ಮುಂದುವರೆದಿದೆ. ಗಾಯಗೊಂಡ 9 ಪ್ಯಾರಾ ಮೇಜರ್‌ ಅವರನ್ನು ಉಧಮ್‌ಪುರದ ಕಮಾಂಡ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಮತ್ತು ಅವರ ಆರೋಗ್ಯ ಸ್ಥಿತಿ

ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಎನ್‌ಕೌಂಟರ್‌ನಲ್ಲಿ (Encounter) ಒಬ್ಬ ಉಗ್ರಗಾಮಿ ಕೂಡ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ.

ಅಚ್ಚುಮೆಚ್ಚಿನ ವಿದ್ಯಾರ್ಥಿ
ಎಂಆರ್‌ಪಿಎಲ್‌ ಡೆಲ್ಲಿ ಸ್ಕೂಲ್‌ (MRPL Delhi School) ವಿದ್ಯಾರ್ಥಿಯಾಗಿದ್ದ ಪ್ರಾಂಜಲ್‌ ಕಲಿಕೆಯಲ್ಲಿ ಬಹಳಷ್ಟು ಚುರುಕಾಗಿದ್ದು, ನನ್ನ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದ ಎಂದು ಶಿಕ್ಷಕಿ ಸುಮಾದೇವಿ

ತಿಳಿಸಿದ್ದಾರೆ. ಪ್ರಾಂಜಲ್‌ ಬಲಿದಾನ ನಮ್ಮನ್ನು ಕಣ್ಣೀರ ಕಡಲಿಗೆ ದೂಡಿದ್ದು, ಅವರ ಗೌರವಾರ್ಥ ಶಾಲಾ ಕ್ರೀಡಾಕೂಟ ಮುಂದೂಡಿದ್ದು, ನ. 23ರಂದು ಶಾಲೆಗೆ ರಜೆ ಘೋಷಿಸಿದ್ದೇವೆ ಎಂದು ತಿಳಿಸಿದರು.

ಇದನ್ನು ಓದಿ: ನನ್ನ ಪುತ್ರನಿಗೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ : ಸಚಿವ ಮಹದೇವಪ್ಪ

Exit mobile version