ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಟೋಲ್‌ ಸಂಗ್ರಹಕ್ಕೆ ದಿನಾಂಕ ಫಿಕ್ಸ್‌

Mysuru : ಕಳೆದ ಮೂರು-ನಾಲ್ಕು ತಿಂಗಳಿನಿಂದ ಭಾರಿ ಸುದ್ದಿಯಲ್ಲಿರುವ ದಶಪಥ ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇನಲ್ಲಿ(Mysore-Bangalore Expressway Toll) ಟೋಲ್‌ ಸಂಗ್ರಹಿಸಲು ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ.

ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ(Nitin Gadkari) ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿ ಸಮ್ಮತಿ ಸೂಚಿಸಿದ ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇ ಇದೀಗ ವಾಹನ ಸವಾರರ ಸಂಚಾರಕ್ಕೆ ಮುಕ್ತವಾಗಿದ್ದು,

ಸದ್ಯ ಈ ದಶಪಥ ಹೆದ್ದಾರಿಗೆ ವಿಧಿಸಿರುವ ಟೋಲ್‌(Toll) ಅನ್ನು ಸಂಗ್ರಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.

ಮಹತ್ವಾಕಾಂಕ್ಷೆಯ ಮೈಸೂರು-ಬೆಂಗಳೂರು ಎಕ್ಸಪ್ರೆಸ್ ವೇನಲ್ಲಿ ಫೆ.15ರೊಳಗೆ ಟೋಲ್ ಸಂಗ್ರಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿರುವ(Mysore-Bangalore Expressway Toll) ಬಗ್ಗೆ ಇದೀಗ ಮಾಹಿತಿ ದೊರೆತಿದೆ.

ಮೊದಲ ಹಂತದ ಕಾಮಗಾರಿಯಲ್ಲಿ ಬೆಂಗಳೂರು-ಚನ್ನಪಟ್ಟಣದ ನಿಡಘಟ್ಟದವರೆಗೂ ಮುಗಿದಿತ್ತು.

ಶ್ರೀರಂಗಪಟ್ಟಣ(Sriranga patna) ಮತ್ತು ಬಿಡದಿ(Bidadi) ಬಳಿ ಎರಡು ಟೋಲ್ ಪ್ಲಾಜಾ(Toll Plaza) ನಿರ್ಮಿಸಲಾಗಿದೆ. ಎರಡು ದ್ವಾರಗಳಾದ ಎಂಟ್ರಿ ಮತ್ತು ಎಕ್ಸಿಟ್‌ ವೇನಲ್ಲಿ ಅನುಕೂಲವಾಗುವಂತೆ 11 ಗೇಟ್ ಅಳವಡಿಸಲಾಗಿದೆ.

ಇದನ್ನೂ ಓದಿ: ಬಾಲ್ಯ ವಿವಾಹವಾದ ಪತಿಯರ ಬಂಧನ : ಅಸ್ಸಾಂ ಸಿಎಂ ವಿರುದ್ಧ ಮಹಿಳೆಯರ ಬೃಹತ್ ಪ್ರತಿಭಟನೆ

ಎಲ್ಲಾ ದ್ವಾರಗಳಲ್ಲಿಯೂ ಅತ್ಯಾಧುನಿಕ ಟೋಲ್ ಸಿಸ್ಟಂ ಹಾಗೂ ಫಾಸ್ಟ್ ಟ್ಯಾಗ್(Fast tag) ವ್ಯವಸ್ಥೆಯನ್ನು ಮಾಡಲಾಗಿದ್ದು,

ಸರ್ವಿಸ್ ರಸ್ತೆ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗುವವರೆಗೂ ಹೆದ್ದಾರಿಯಲ್ಲಿ ದ್ವಿಚಕ್ರ ಮತ್ತು ಮೂರು ಚಕ್ರದ ವಾಹನಗಳು ಸಂಚರಿಸಬಹುದಾಗಿದೆ.

ಸರ್ವಿಸ್‌ ರಸ್ತೆ(Service Road) ಪೂರ್ಣಗೊಂಡ ನಂತರ ಹೆದ್ದಾರಿಯಲ್ಲಿ ಸಂಚಾರಕ್ಕೆ ಅವಕಾಶ ಇಲ್ಲ! ಮೊದಲ ಹಂತದ ಕಾಮಗಾರಿ ಸದ್ಯ ಮುಗಿದಿದ್ದು,

ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ. ಎರಡನೇ ಹಂತದ ಕಾಮಗಾರಿ ಕೆಲಸಗಳು ಮುಂದುವರೆಯುತ್ತಿದ್ದು,

ಮಾಹಿತಿಯ ಪ್ರಕಾರ ಮೊದಲ ಹಂತದಲ್ಲಿ ನಿರ್ಮಾಣಗೊಂಡ ಬೆಂಗಳೂರು-ನಿಡಘಟ್ಟ ಟೋಲ್ ಸಂಗ್ರಹವನ್ನು ಆರಂಭಿಸಲಾಗುವುದು.

ತದನಂತರ ಎರಡನೇ ಹಂತದ ಕಾಮಗಾರಿ ಮುಕ್ತಾಯಗೊಂಡ ಬಳಿಕವೇ ಎರಡನೆ ಟೋಲ್ ಸಂಗ್ರಹ ಮಾಡಲಾಗುವುದು ಎಂದು (Mysore-Bangalore Expressway Toll) ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಇನ್ನು ಹೆದ್ದಾರಿ ನಿರ್ಮಾಣದ ನಡುವೆಯೇ ವಾಹನ ಸವಾರರ ಆರೋಗ್ಯ ಸ್ಥಿತಿ-ಗತಿಗಳನ್ನು ಗಮನದಲ್ಲಿಟ್ಟುಕೊಂಡು, ಚನ್ನಪಟ್ಟಣದಲ್ಲಿ(Chenpatna) 50 ಎಕರೆ ಜಮೀನನ್ನು ಖರೀದಿಸಿ ಟ್ರಾಮಾ ಸೆಂಟರ್ ಸ್ಥಾಪಿಸಿದ್ದು,

ಅಪಘಾತಗಳು ಸಂಭವಿಸಿದಲ್ಲಿ ತುರ್ತು ಚಿಕಿತ್ಸೆ ನೀಡಲು ಮುಂಜಾಗ್ರತಾ ಕ್ರಮವಾಗಿ ಇದನ್ನು ರೂಪಿಸಲಾಗಿದೆ.

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಕಾಮಗಾರಿಯ ಪ್ರತಿ ಹಂತದ ಬಗ್ಗೆ ಮೈಸೂರು-ಕೊಡುಗು ಸಂಸದ ಪ್ರತಾಪ್‌ ಸಿಂಹ(Prathap Sinha) ರಾಜ್ಯದ ಜನತೆಗೆ ಮಾಹಿತಿ ನೀಡುವಲ್ಲಿ ಪ್ರಮುಖರಾಗಿದ್ದರು.

Exit mobile version