ದಿನಗಳು ಕಳೆದಂತೆ ಗಗನಕುಸುಮವಾಗುತ್ತಿರುವ ಈರುಳ್ಳಿ ಬೆಲೆ: ಗ್ರಾಹಕರಿಗೆ ಕಣ್ಣೀರು ತರಿಸುವುದು ಖಂಡಿತ

Karnataka: ಮುಂಬರುವ ದಿನಗಳಲ್ಲಿ ಈರುಳ್ಳಿ (Onion Prices getting high) ಬೆಲೆ ದುಬಾರಿಯಾಗಲಿದ್ದು, ಗ್ರಾಹಕರಿಗೆ ಕಣ್ಣೀರು ತರಿಸುವ ಎಲ್ಲಾ ಸಾಧ್ಯತೆ ಇದೆ. ಒಂದೆಡೆ ರೋಗ

ಬಾಧೆಯಿಂದ ಹಾಗೂ ಮಳೆ ಕೊರತೆಯಿಂದ ಈರುಳ್ಳಿ ಬೆಳೆ ಇಲ್ಲದೆ ರೈತರು ಕಂಗಾಲಾಗುತ್ತಿದ್ದು, ಇನ್ನೊಂದೆಡೆ ಗ್ರಾಹಕರ ಜೇಜಿಗೂ ಕತ್ತರಿ ಬೀಳುವುದು ಖಚಿತವಾಗಿದೆ. ಇದರ ನಡುವೆಯೇ,

ಈ ಬಾರಿ ಶೇಕಡಾ 75ರಷ್ಟು ರೈತರು ಈರುಳ್ಳಿ ಬೆಳೆಯದೇ ಇರುವುದರಿಂದ ಬೆಳೆ (Onion Prices getting high) ಕೊರತೆಯೂ ದೊಡ್ಡ ಪ್ರಮಾಣದಲ್ಲಿದೆ.

ಈರುಳ್ಳಿ ಬೆಲೆ ಕೆ.ಜಿಗೆ 25 ರೂ ಆಸುಪಾಸಿನಲ್ಲಿದ್ದು, ಈಗ 40 ರೂ.ಗೆ ತಲುಪಿದೆ. ಇದು ಇನ್ನಷ್ಟು ಹೆಚ್ಚುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಗದಗ (Gadaga) ಸೇರಿದಂತೆ ರಾಜ್ಯದ ಹಲವು

ಜಿಲ್ಲೆಗಳಲ್ಲಿ ಈರುಳ್ಳಿಗೆ ಮಳೆ ಕೊರತೆ, ಸುಳಿರೋಗ ಎದುರಾಗಿದ್ದು, ಬೆಳೆ ಇಳುವರಿ ಕಡಿಮೆಯಾಗಿರುವುದರಿಂದ ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆ ಸಾಧ್ಯವಾಗುತ್ತಿಲ್ಲ.

ರಾಜ್ಯದಲ್ಲಿ ಹೊಸ ಈರುಳ್ಳಿಯ ಒಟ್ಟು ಇಳುವರಿ ಶೇ. 40ಕ್ಕೆ ಇಳಿಕೆಯಾಗಿದ್ದು, ಈಗಾಗಲೇ ಶೇ. 25ರಷ್ಟು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದು, ಬೆಳೆಯುವ ಈರುಳ್ಳಿ ಹೊರತುಪಡಿಸಿದರೆ, ಇಡೀ

ಈರುಳ್ಳಿ ಮಾರುಕಟ್ಟೆ ನಾಸಿಕ್‌ ಮತ್ತು ಮಹಾರಾಷ್ಟ್ರದ (Maharashtra) ಇತರ ಈರುಳ್ಳಿ ಬೆಳೆಯುವ ಪ್ರದೇಶಗಳನ್ನು ಅವಲಂಬಿಸಿದ್ದು, 15 ದಿನಗಳಿಂದ ಸಗಟು ಮಾರುಕಟ್ಟೆಯಲ್ಲಿ ಕೆ.ಜಿ ಈರುಳ್ಳಿ

ಬೆಲೆ 10 ರಿಂದ 30 ರೂ.ಗಳಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ 30ರಿಂದ 35 ರೂ. ಇದೆ.

ಸದ್ಯಕ್ಕೆ ವಿವಿಧ ಮುಖ್ಯ ಸಗಟು ಮಾರುಕಟ್ಟೆಗಳಲ್ಲಿ ಕೆ.ಜಿ ಈರುಳ್ಳಿ 40 ರಿಂದ 45 ರೂ.ಗೆ ಏರಿಕೆಯಾಗಿದೆ. ಕೇಂದ್ರ ಸರ್ಕಾರವು ಈರುಳ್ಳಿ ರಫ್ತಿನ ಮೇಲೆ ಶೇ.40ರಷ್ಟು ತೆರಿಗೆ ವಿಧಿಸಿದ್ದು, ಈ ಕ್ರಮವು

ಮಹಾರಾಷ್ಟ್ರದಿಂದ ಪೂರೈಕೆಯಾಗುವ ಈರುಳ್ಳಿ ಮೇಲೆ ಕಡಿವಾಣ ಹಾಕಿದೆ ಎಂಬುದು ವ್ಯಾಪಾರಿಗಳ ಅಳಲಾಗಿದ್ದು, ರಾಜ್ಯದಲ್ಲಿ ನಿಗದಿತ ಗುರಿಗಿಂತ 3 ಪಟ್ಟು ಈರುಳ್ಳಿ ಬೆಳೆಯಲಾಗುತ್ತಿತ್ತು.

ಈ ವರ್ಷ 2 ಲಕ್ಷ ಹೆಕ್ಟೇರ್‌ನಲ್ಲಿ (Hector) ಈರುಳ್ಳಿ ಬೆಳೆ ಇದ್ದು, ಮಳೆ ಕೊರತೆ, ಬೆಲೆ ಇಳಿಕೆಯಿಂದಾಗಿ ಕಂಗೆಟ್ಟಿರುವ ರೈತರು 2-3 ವರ್ಷಗಳಿಂದ ಈರುಳ್ಳಿ ಬೆಳೆಯಿಂದ ದೂರ ಉಳಿದಿದ್ದಾರೆ.

ಈ ಬಾರಿ ಶೇ. 75ರಷ್ಟು ಈರುಳ್ಳಿ ಬೆಳೆದಿಲ್ಲ ಎಂದು ತೋಟಗಾರಿಕೆ ಇಲಾಖೆ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಇದನ್ನು ಓದಿ: ಬೆನ್ನು ಮೂಳೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನೋವನ್ನು ನಿವಾರಿಸಲು ತಜ್ಞರ ಸಲಹೆ

Exit mobile version