ಬಾರಿ ದುಬಾರಿಯಾದ ಈರುಳ್ಳಿ ಬೆಲೆ: ದಾವಣಗೆರೆ ಮಾರುಕಟ್ಟೆಗೆ ಬರುವ ಈರುಳ್ಳಿಯಲ್ಲಿ ಇಳಿಕೆ

Davanagere: ಸಾಲು ಸಾಲು ಹಬ್ಬ, ಮಳೆ ಕೊರತೆಯಿಂದ ಹೆಚ್ಚಿದ ಈರುಳ್ಳಿ ಬೆಳೆ. ಇನ್ನು ಈರುಳ್ಳಿ ಬೆಳೆಯದ ಕಾರಣ (Onion Rate High in DVG) ಮಾರುಕಟ್ಟೆಗೆ ನಿಗದಿತ ಪ್ರಮಾಣದಲ್ಲಿ

ಬೇಡಿಕೆಗೆ ತಕ್ಕಂತೆ ಈರುಳ್ಳಿ ಪೂರೈಕೆ ಆಗುತ್ತಿಲ್ಲ. ಆದ್ದರಿಂದ ಈರುಳ್ಳಿ ಬೆಲೆ ಕೆ.ಜಿಗೆ 40ರೂಪಾಯಿ ಏರಿಕೆ ಆಗಿದೆ. ದಸರಾ (Dasara) ದೀಪಾವಳಿಯಂತಹ ಹಬ್ಬಗಳು ಹತ್ತಿರವಿದ್ದುದ್ದರಿಂದ

ಈರುಳ್ಳಿ ಬೆಲೆಯೂ ಇನ್ನೂ ಹೆಚ್ಚಳವಾಗುವ (Onion Rate High in DVG) ಸಾಧ್ಯತೆ ಇದೆ ಎನ್ನಲಾಗಿದೆ.

ಈ ಹಿಂದಿನ ವರ್ಷಗಳಲ್ಲಿ ಇಷ್ಟೊತ್ತಿಗಾಗಲೇ ದಾವಣಗೆರೆಯ (Davanagere) ಈರುಳ್ಳಿ ಮಾರುಕಟ್ಟೆಗೆ,ರಾಣೇಬೆನ್ನೂರು, ಹರಪನಹಳ್ಳಿ (Harappanahalli), ಕರ್ನಾಟಕದ ಚಳ್ಳಕೆರೆ, ಅಹ್ಮದ್‌ ನಗರ,

ಜಗಳೂರು ಸೇರಿದಂತೆ ನಾನಾ ಕಡೆಗಳಿಂದ ಹಾಗೂ ಮಹಾರಾಷ್ಟ್ರ (Maharashtra), ಪೂನಾದಿಂದ ದಿನಕ್ಕೆ ಅಂದಾಜು 450 ರಿಂದ 500 ಟನ್‌ ಆಮದುಆಗುತ್ತಿತ್ತು ಆದರೆ ಈ ಬಾರಿ ಮಳೆಯ ಕೊರತೆಯ

ಕಾರಣ ಈರುಳ್ಳಿ ತುಂಬಾ ಕಡಿಮೆ ಪ್ರಮಾಣ ಬೆಳೆದಿದ್ದರಿಂದ ದಿನಕ್ಕೆ ಕನಿಷ್ಠ 50 ಟನ್‌ ಈರುಳ್ಳಿ ಮಾರುಕಟ್ಟೆಗೆ ತರಲಾಗುತ್ತಿಲ್ಲ ಹೀಗಾಗಿ, ಬೇಡಿಕೆಗೆ ತಕ್ಕಂತೆ ಈರುಳ್ಳಿ ಸಿಗದಿರುವುದೇ ಬೆಲೆ ಏರಿಕೆಗೆ ಕಾರಣವಾಗಿದೆ.

ಇನ್ನು ಬೆಲೆ ಏರಿಕೆ ಸಾಧ್ಯತೆ:
ನೂರು ರೂಪಾಯಿಗೆ ಐದು ಕೆಜಿ ಸಿಗುತ್ತುತ್ತಿದ್ದ ಈರುಳ್ಳಿ ಈಗ ಬೇಡಿಕೆಗೆ ಅನುಗುಣವಾಗಿ ಪೂರೈಕೆಯಾಗದ ಹಿನ್ನೆಲೆಯಲ್ಲಿ ಉತ್ತಮ ದರ್ಜೆಯ ದೊಡ್ಡ ಗಡ್ಡೆ ನಾಧಿಸಿಕ್‌ 40 ರೂ.ಗೆ ಕೆಜಿ, ಹಾಗೂ ಸಾಮಾನ್ಯ

ದರ್ಜೆಯ ಸಣ್ಣ ಗಡ್ಡೆ 20 ರಿಂದ 25 ರೂ.ಮಧ್ಯಮ ಗಾತ್ರದ್ದು 30 ರೂ,ಗೆ ಕೆಜಿಯಂತೆ ಮಾರಾಟವಾಗುತ್ತಿದೆ. ಮುಂದೆಯು ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗದೆ ಇದ್ದಲ್ಲಿ ನೂರು ರೂಪಾಯಿ ಗಿಂತ

ಹೆಚ್ಚು ಬೆಲೆ ಏರಿಕೆಯಾಗುವ ಸಂಭವವಿದೆ ಎನ್ನುತ್ತಾರೆ.

ವಿನಾಯಕ ಟ್ರೆಡಿಂಗ್‌ ನ ಪ್ರಭು(Vinayaka Trading Prabhu): ಮಾರುಕಟ್ಟೆಗೆ ಈರುಳ್ಳಿ ಆವಕ ಕಡಿಮೆಯಾಗಿದ್ದರಿಂದ.ಬೇಡಿಕೆಗೆ ಅನುಗುಣವಾಗಿ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಆದ್ದರಿಂದ ಈಗ ಈರುಳ್ಳಿ

ಬೆಲೆಯಲ್ಲಿ ಏರಿಕೆ ಕಂಡಿದ್ದು. ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ದಾವಣಗೆರೆ ವಿನಾಯಕ ಟ್ರೆಡಿಂಗ್‌ ನ ಪ್ರಭು ತಿಳಿಸಿದ್ದಾರೆ.

ಮಧ್ಯವರ್ತಿಗಳಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿರುವುದು ಮಾರುಕಟ್ಟೆಗೆ ಈರುಳ್ಳಿ ತರುವ ರೈತನಿಂದ ಒಂದು ಕೆಜಿಗೆ 15 ರಿಂದ 20ರೂಪಾಯಿ ಈರುಳ್ಳಿ ಖರೀದಿಸುವ ಮಧ್ಯವರ್ತಿಗಳು, ವ್ಯಾಪಾರಸ್ಥರಿಗೆ

25 ರಿಂದ 30 ರೂ.ಗೆ ಕೆಜಿಯಂತೆ ಮಾರಾಟ ಮಾಡುತ್ತಾರೆ.ಇಲ್ಲಿಂದ ಈರುಳ್ಳಿ ಖರೀದಿಸುವ ವ್ಯಾಪಾರಸ್ಥರು ಗ್ರಾಹಕರಿಗೆ 35 ರಿಂದ 40 ರೂ.ಗೆ ಕೆಜಿಯಂತೆ ಮಾರಾಟ ಮಾಡುತ್ತಿದ್ದಾರೆ ಆದರೆ ನೇರವಾಗಿ

ಗ್ರಾಹಕರಿಗೆ ಸಿಗದಂತಾಗಿದೆ ಅಲ್ಲದೆ ರೈತರು ಮತ್ತಷ್ಟು ಸಂಕಸ್ಟಕ್ಕೆ ಸಿಲುಕುವಂತಾಗಿದೆ.

ರೈತ ಒಂದು ಕೆಜಿಗೆ 18 ರೂಪಾಯಿ ಮಾರಾಟ ಮಾಡುತಿದ್ದ, ಆದರೆ ಇತ್ತೀಚಿನ ದಿನಗಳಲ್ಲಿ ಈರುಳ್ಳಿಗೆ ಏಳೆಂಟು ವರ್ಷಗಳಿಂದ ಈರುಳ್ಳಿ ಬೆಳೆಯುತ್ತಿದ್ದೇನೆ 60 ಕೆಜಿ ತೂಕದ 120 ಪಾಕೇಟ್‌ ಈರುಳ್ಳಿ ಬೆಳೆದಿದ್ದ

ಉತ್ತಮ ಬೆಲೆ ಇದ್ದರೂ ಮದ್ಯವರ್ತಿಗಳು ನಮ್ಮಿಂದ ಕಡಿಮೆ ದರಕ್ಕೆ ಈರುಳ್ಳಿ ಖರೀದಿಸಿ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದರ ವ್ಯವಸ್ಥೆಗೆ ಸಂಬಂಧಪಟ್ಟ ಅಧಿಕಾರಿಗಳು ಕಡಿವಾಣ ಹಾಕಬೇಕು

ಎಂದು ಮುಚ್ಚನೂರು ಈರುಳ್ಳಿ ಬೆಳೆಗಾರ ಹುಸೇನ್‌ ಸಾಬ್‌ (Hussein Sab) ಹೇಳಿದ್ದಾರೆ.

ಇದನ್ನು ಓದಿ: ಎಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಿ ತುರ್ತು ಸರ್ಕಾರ ರಚನೆ: ಯುದ್ದಕ್ಕಾಗಿ ಒಂದಾದ ಇಸ್ರೇಲ್ ರಾಜಕಾರಣಿಗಳು

Exit mobile version