ಚಂದ್ರಯಾನ-3 ಯಶಸ್ಸಿಗೆ ಹೊಟ್ಟೆಕಿಚ್ಚು : ನಮ್ಮ 2.3 ಬಿಲಿಯನ್ ಪೌಂಡ್ ಹಿಂತಿರುಗಿಸಿ ಎಂದ ಬ್ರಿಟನ್ ಪತ್ರಕರ್ತ, ಎಲ್ಲೆಡೆ ಆಕ್ರೋಶ

Bengaluru: ಬ್ರಿಟನ್ (Britain) ಪತ್ರಕರ್ತ ಮತ್ತು ಸುದ್ದಿ ನಿರೂಪಕ ಪ್ಯಾಟ್ರಿಕ್ ಕ್ರಿಸ್ಟಿಸ್ (Patrick Christies tweet viral) ಭಾರತದ ಯಶಸ್ವಿ ಚಂದ್ರಯಾನಕ್ಕೆ ಅಭಿನಂದನೆ ಸಲ್ಲಿಸುವುದರ

ಜೊತೆಗೆ ಆಡಿದ ಮಾತುಗಳು ಇದೀಗ ಎಲ್ಲೆಡೆ ಭಾರೀ ಆಕ್ರೋಶಕ್ಕೆ (Patrick Christies tweet viral) ಕಾರಣವಾಗಿವೆ.

ಪ್ಯಾಟ್ರಿಕ್ ಕ್ರಿಸ್ಟಿಸ್ ಭಾರತದ ಐತಿಹಾಸಿಕ ಸಾಧನೆಗೆ ಅಭಿನಂದನೆ ಸಲ್ಲಿಸುತ್ತಾ, ತನ್ನ ಸುದ್ದಿ ಬುಲೆಟಿನ್ (Bulletin) ಅನ್ನು ಪ್ರಾರಂಭಿಸಿ, ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದಿದ್ದಕ್ಕಾಗಿ ನಾನು

ಭಾರತವನ್ನು ಅಭಿನಂದಿಸಲು ಬಯಸುತ್ತೇನೆ. ಆದರೆ ಇನ್ನೊಂದೆಡೆ 2016 ಮತ್ತು 2021 ರ ನಡುವೆ ನಾವು ಅಂದರೆ ಬ್ರಿಟನ್ ಸರ್ಕಾರ ಭಾರತಕ್ಕೆ ನೀಡಿದ 2.3 ಶತಕೋಟಿ ಪೌಂಡ್ಗಳ ಸಹಾಯ ಧನವನ್ನು

ಹಿಂದಿರುಗಿಸಲು ನಾನು ಭಾರತವನ್ನು ಕೋರ ಬಯಸುತ್ತೇನೆ. ಆಘಾತಕಾರಿ ಸಂಗತಿ ಎಂದರೆ ನಾವು ಮುಂದಿನ ವರ್ಷ 57 ಮಿಲಿಯನ್ (Million) ಪೌಂಡ್ಗಳನ್ನು ನೀಡಲು ಸಹ ಸಿದ್ಧರಾಗಿದ್ದೇವೆ.

ಆದರೆ ಬ್ರಿಟಿಷ್ ತೆರಿಗೆದಾರರು ಅದನ್ನು ಹಿಡಿದಿಟ್ಟುಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ. ನಾವು ನಿಯಮದಂತೆ ಬಾಹ್ಯಾಕಾಶ ಕಾರ್ಯಕ್ರಮ ಹೊಂದಿರುವ ದೇಶಗಳಿಗೆ ಸಹಾಯ ಧನವನ್ನು

ನೀಡಬಾರದು ಎಂದು ಹೇಳಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

ಪಾಪಿ ಪುತ್ರ: ಹೆತ್ತವರನ್ನೇ ಕೊಲೆಗೈದ ಪಾಪಿ ಪುತ್ರ! ಪಲಾವ್‍ನಲ್ಲಿ ವಿಷ ಬೆರೆಸಿ ತಂದೆ-ತಾಯಿಯ ಹತ್ಯೆ

ಇನ್ನು ಭಾರತಕ್ಕೆ ಹೆಚ್ಚಿನ ಆರ್ಥಿಕ ಸಹಾಯದ ವಿರುದ್ಧ ಯುಕೆ ಸರ್ಕಾರಕ್ಕೆ ಸಲಹೆ ನೀಡಿದ ಪ್ಯಾಟ್ರಿಕ್ ಕ್ರಿಸ್ಟಿಸ್, ಭಾರತೀಯರು ಚಂದ್ರನ ಮೇಲೆ ರಾಕೆಟ್ (Rocket) ಹಾರಿಸಲು ಶಕ್ತರಾಗಿದ್ದರೆ,

ಸಹಾಯಕ್ಕಾಗಿ ನಮ್ಮ ಬಳಿಗೆ ಬರಬಾರದು. ಭಾರತದಲ್ಲಿ 229 ಮಿಲಿಯನ್ ಜನರು ಬಡತನದಲ್ಲಿದ್ದಾರೆ ಎಂದು ವರದಿಯಾಗಿದೆ. ಇನ್ನೊಂದೆಡೆ ವಾರ್ಷಿಕ ಜಿಡಿಪಿ ಸುಮಾರು 3.75 ಟ್ರಿಲಿಯನ್ (Trillion)

ಡಾಲರ್ಗಳೊಂದಿಗೆ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯನ್ನು ಭಾರತ ಹೊಂದಿದೆ. ಭಾರತೀಯರ ಬಡತನದ ಕುರಿತು ಅವರ ಸ್ವಂತ ಸರ್ಕಾರವು ತಲೆಕೆಡಿಸಿಕೊಳ್ಳದಿರುವಾಗ ಬಡತನದಿಂದ ಬಳಲುತ್ತಿರುವ

ಭಾರತೀಯರಿಗೆ ಸಹಾಯ ಮಾಡಲು ನಾವು ಏಕೆ ತೆರಿಗೆ ಪಾವತಿಸುತ್ತಿದ್ದೇವೆ ಎಂದು ಪ್ಯಾಟ್ರಿಕ್ ಕ್ರಿಸ್ಟಿಸ್ ಪ್ರಶ್ನಿಸಿರುವ ವಿಡಿಯೋ ಇದೀಗ ಎಲ್ಲೆಡೆ ಭಾರೀ ವೈರಲ್ ಆಗಿದೆ.

ಪ್ಯಾಟ್ರಿಕ್ ಕ್ರಿಸ್ಟಿಸ್ ಹೇಳಿಕೆಯನ್ನು ಜನಾಂಗೀಯ ಮತ್ತು ಅಸೂಯೆಯ ಪರಮಾವಧಿ ಎಂದು ಕರೆದಿರುವ ಕೆಲ ಟ್ವೀಟರ್ ಬಳಕೆದಾರರು, ನೀವು ಭಾರತದಿಂದ $45 ಟ್ರಿಲಿಯನ್ಗಿಂತಲೂ ಹೆಚ್ಚಿನ ಹಣವನ್ನು

ಕದ್ದಿದ್ದೀರಿ, ದೇಶವನ್ನು ಒಡೆದು ಮತ್ತು ಕಳಪೆಯಾಗಿ ಬಿಟ್ಟಿದ್ದೀರಿ, ಆದರೂ ಭಾರತವು ನಿಮ್ಮ ಆರ್ಥಿಕತೆಯನ್ನು ಮೀರಿಸಿದೆ. ನೀವು ಮೊದಲು ನಮಗೆ $45 ಟ್ರಿಲಿಯನ್ ನೀಡಿ ಎಂದು ಆಗ್ರಹಿಸಿದ್ದಾರೆ.

Exit mobile version