ಖಾಸಗಿ ಬಸ್ ಮಾಲೀಕರಿಂದ 2 ಕೋಟಿ 13 ಲಕ್ಷ ರೂ. ದಂಡ, 1470 ಬಸ್ ಮೇಲೆ ಕೇಸ್: ಆರ್​ಟಿಓ

Bengaluru: ಬೆಂಗಳೂರಿನಲ್ಲಿ (Penalty for Private Bus – RTO) ದೀಪಾವಳಿಯ ಹಬ್ಬದ ಸಂಧರ್ಭದಲ್ಲಿ ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಖಾಸಗಿ ಬಸ್ ಮಾಲೀಕರಿಗೆ

ಆರ್​ಟಿಓ (RTO) ಸರಿಯಾಗಿ ಬಿಸಿ ಮುಟ್ಟಿಸಿದ್ದು, ಖಾಸಗಿ ಬಸ್​ಗಳನ್ನು ತಪಾಸಣೆ ಮಾಡಿದ ರಾಜ್ಯ ‌ಸಾರಿಗೆ ಇಲಾಖೆಯ ಅಧಿಕಾರಿಗಳು ದಂಡ ವಸೂಲಿ ಮಾಡಿದ್ದಾರೆ.

ಹಬ್ಬದ ಪ್ರಯುಕ್ತ ರಾಜ್ಯದಲ್ಲಿ ಜನರು ತಮ್ಮ ತಮ್ಮ ಊರುಗಳತ್ತ ಹೊರಟಿದ್ದರು. ಇದನ್ನು ಬಂಡವಾಳ ಮಾಡಿಕೊಂಡಿದ್ದ ಖಾಸಗಿ ಬಸ್ (Private Bus) ಮಾಲೀಕರು ಓನ್ ಟೂ ಡಬಲ್ ದರ ಹಣ ದೋಚಿದ್ದು,

ಇದಕ್ಕೆ ಬ್ರೇಕ್ ಹಾಕಿದ ಆರ್​ಟಿಓ ಅಧಿಕಾರಿಗಳು ಬರೋಬ್ಬರಿ 2 ಕೋಟಿ 13 ಲಕ್ಷ ದಂಡ ವಸೂಲಿ ಮಾಡಿದ್ದಾರೆ. ಹಾಗೂ 37 ಬಸ್ ಸೀಜ್ ಮಾಡಿದ್ದಾರೆ. 1470 ಖಾಸಗಿ ಬಸ್ ಮೇಲೆ ಕೇಸ್ ಬಿದ್ದಿದೆ.

ಖಾಸಗಿ ಬಸ್​ಗಳನ್ನು ತಪಾಸಣೆ ಮಾಡಿದ ರಾಜ್ಯ ‌ಸಾರಿಗೆ ಇಲಾಖೆಯ ಅಧಿಕಾರಿಗಳು ದಂಡ ವಸೂಲಿ ಮಾಡಿದ್ದು, ದೀಪಾವಳಿ (Deepavali) ಹಬ್ಬದ ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ನೀಡಲಾಗಿತ್ತು.

ಹಾಗಾಗಿ ಜನರು ತಮ್ಮ ತಮ್ಮ ‌ಸ್ವಂತ ಊರುಗಳತ್ತ ಪ್ರಯಾಣ ಬೆಳೆಸಿದ್ರು ಆದರೆ ಇದನ್ನೆ ಬಂಡವಾಳ ಮಾಡಿಕೊಂಡ ಕೆಲ ಖಾಸಗಿ ಬಸ್ ಮಾಲೀಕರು ವಿಪರೀತವಾಗಿ ದುಪ್ಪಟ್ಟು ದರ ಫಿಕ್ಸ್ ಮಾಡಿಕೊಂಡು

ಹಣ ಪೀಕಲು (Penalty for Private Bus – RTO) ಮುಂದಾಗಿದ್ದರು.

ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದಿದ್ದ ರಾಜ್ಯ ಸಾರಿಗೆ ಇಲಾಖೆಯ ಅಧಿಕಾರಿಗಳು ಸುಮಾರು ಎರಡು ಸಾವಿರ ಬಸ್ ಗಳನ್ನು ತಪಾಸಣೆ ಮಾಡಿ 1470 ಕೇಸ್ ಗಳನ್ನು ದಾಖಲಿಸಿದ್ದಾರೆ. ಇನ್ನು ಇದರಿಂದ

ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸುಮಾರು 2 ಕೋಟಿ 14 ಲಕ್ಷ ರುಪಾಯಿ ದಂಡ ವಸೂಲಿ ಆಗಿದೆ. ಅನಧಿಕೃತವಾಗಿ ಪಟಾಕಿ ಸಾಗಿಸುತ್ತಿದ್ದ 21 ಬಸ್ ಸೇರಿದಂತೆ ಒಟ್ಟು 36 ಖಾಸಗಿ ಬಸ್ ಗಳನ್ನು ಸೀಜ್ ಮಾಡಲಾಗಿದೆ.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮ (Nataraj Sharma) ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್ ಗಳು ಮಾತ್ರ ಅಲ್ಲ ಕೆ.ಎಸ್.ಆರ್.ಟಿ.ಸಿ

(KSRTC) ಬಸ್ಸಿನಲ್ಲಿ ಹೆಚ್ಚಿನ ಹಣ ಪಡೆದುಕೊಳ್ಳುತ್ತಾರೆ, ಅತ್ತಿಬೆಲೆಯಿಂದ ಬರುವ ಬಿಎಂಟಿಸಿ ಬಸ್ ಗಳಲ್ಲಿ ಸಾಕಷ್ಟು ಪಟಾಕಿ ಸಪ್ಲೈ ಆಗಿದೆ. ಆದರೆ ಕೆ.ಎಸ್.ಆರ್.ಟಿ.ಸಿ, ಬಿಎಂಟಿಸಿ (BMTC) ಮೇಲೆ ಯಾಕೆ

ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಇದನ್ನು ಓದಿ: ಭಾರತಕ್ಕೆ ಕೆನಡಾ ಸಾಕ್ಷಿ ಒದಗಿಸಲಿ, ಯಾವ ತನಿಖೆಗೂ ನಾವು ನಿರಾಕರಿಸುವುದಿಲ್ಲ: ಎಸ್​. ಜೈಶಂಕರ್

Exit mobile version