12 ಜನರ ಮೇಲೆ ದಾಳಿ ಮಾಡಿದ PitBull ; ದಾಳಿಯಿಂದ ಬಚಾವ್ ಆಗಲು ಶ್ವಾನವನ್ನು ಕೊಂದ ನಿವೃತ್ತ ಸೇನಾಧಿಕಾರಿ!

dog

Punjab : ಪಂಜಾಬ್‌ನ(Punjab) ಗುರುದಾಸ್‌ಪುರದ ಐದು ಗ್ರಾಮಗಳಲ್ಲಿ 12 ಜನರ ಮೇಲೆ ಪಿಟ್‌ಬುಲ್(Pitbull) ದಾಳಿ ಮಾಡಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

Pitbull

ಟ್ಯಾಂಗೋ ಷಾ ಗ್ರಾಮದಿಂದ ಚುಹಾನ್ ಗ್ರಾಮದವರೆಗೆ ಸುಮಾರು 15 ಕಿ.ಮೀ ನಷ್ಟು ಸುತ್ತುವರಿದ ಪಿಟ್ ಬುಲ್ ನಾಯಿ, ದಾರಿಯಲ್ಲಿ ಜನರ ಮೇಲೆ ದಾಳಿ ಮಾಡಿದೆ.

ಪಿಟ್ ಬುಲ್ ಶ್ವಾನದ ದಾಳಿಗೆ ಸಿಲುಕಿದ ಹಲವರ ಪೈಕಿ ನಿವೃತ್ತ ಸೈನಿಕರೊಬ್ಬರು (Pitbull Deadly attack in punjab) ಕೂಡ ಇದ್ದರು.

ಪಿಟ್ ಬುಲ್ ದಾಳಿಯಿಂದ ತಮ್ಮನ್ನು ತಾವು ಆತ್ಮರಕ್ಷಣೆ ಮಾಡಿಕೊಳ್ಳುವ ಸಲುವಾಗಿ ನಾಯಿಯನ್ನು ಕೊಂದಿರುವ ಘಟನೆ ಪಂಜಾಬ್ ನಲ್ಲಿ ಸಂಭವಿಸಿದೆ.

ಟ್ಯಾಂಗೋ ಶಾ ಗ್ರಾಮದ ಬಳಿ ನಾಯಿ ಮೊದಲು ಇಬ್ಬರು ಕಾರ್ಮಿಕರಿಗೆ ಕಚ್ಚಿದೆ. ಆದ್ರೆ, ಅದರ ಕೊರಳಿಗೆ ಚೈನ್ ಎಸೆದು ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾಯಿ ಅದನ್ನು ಹೇಗೋ ತಪ್ಪಿಸಿಕೊಂಡು ಗ್ರಾಮದೊಳಗೆ ನುಗ್ಗಿದೆ.

ಗ್ರಾಮದೊಳಗೆ ಬಂದ ಪಿಟ್ ಬುಲ್ ಶ್ವಾನವೂ ಅಲ್ಲಿಯ ಮನೆಯ ಮುಂದೆ ಕುಳಿತಿದ್ದ 60 ವರ್ಷದ ದಿಲೀಪ್ ಕುಮಾರ್ ಎಂಬ ವೃದ್ಧರ ಮೇಲೆ ದಾಳಿ ನಡೆಸಿದೆ.

https://youtu.be/NENBfl6PJqQ ಬ್ಯಾಂಕ್ ವಿರುದ್ಧ ರೈತರ ಪ್ರತಿಭಟನೆ.

ಕುಮಾರ್ ನಾಯಿಯ (Pitbull Deadly attack in punjab) ಕುತ್ತಿಗೆಯನ್ನು ಹಿಡಿದು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದ್ರೆ, ನಾಯಿ ಅವರನ್ನು ಒಂದಿಷ್ಟು ದೂರ ಎಳೆದೊಯ್ದಿದೆ. ಕುಮಾರ್‌ ದೇಹಕ್ಕೆ ಹಾನಿಯಾಗಿ ತೀವ್ರ ರಕ್ತಸ್ರಾವವಾಗಿದೆ.

ದಿಲೀಪ್ ಕುಮಾರ್ ಅವರನ್ನು ಅವರ ಸಹೋದರ ನಾಯಿಯ ದಾಳಿಯಿಂದ ಹೇಗೋ ಬಚಾವ್ ಮಾಡಿ ಮನೆಯ ಗೇಟ್ ಒಳಗೆ ಎಳೆದುಕೊಂಡು ಹೋಗಿ ಪ್ರಾಣ ಉಳಿಸಿದ್ದಾರೆ.

ಇದನ್ನೂ ಓದಿ : https://vijayatimes.com/weird-railway-stations-of-india/

ಇದರ ನಂತರ, ಪಿಟ್ಬುಲ್ ಬಲದೇವ್ ರಾಜ್ ಎಂಬುವರ ಕಾಲಿಗೆ ದಾಳಿ ಮಾಡಿ ಗಾಯಗೊಳಿಸಿದೆ. ಅಲ್ಲಿಂದ ಘರೋಟಾ ರಸ್ತೆಯ ಕಡೆಗೆ ಓಡಿದ ಪಿಟ್‌ಬುಲ್ ದಾರಿಯಲ್ಲಿ ಸಣ್ಣ ಪುಟ್ಟ ಪ್ರಾಣಿಗಳನ್ನು ಕೊಂದು ಇಟ್ಟಿಗೆ ಗೂಡು ಸಮೀಪ ತೆರಳಿದೆ.

ಇಟ್ಟಿಗೆ ಗೂಡು ಬಳಿ ನೇಪಾಳಿ ವಾಚ್‌ಮನ್ ರಾಮನಾಥ್ ಮೇಲೆ ದಾಳಿ ಮಾಡಲು ಪಿಟ್ಬುಲ್ ಏಕಾಏಕಿ ಎರಗಿದೆ. ರಾಮನಾಥ್ ಅವರನ್ನು ಅವರು ಸಾಕಿದ ಎರಡು ಬೀದಿ ನಾಯಿಗಳು ರಕ್ಷಿಸಿವೆ.

ಛಾನಿ ಗ್ರಾಮಕ್ಕೆ ಓಡಿದ ಪಿಟ್‌ಬುಲ್ ಅಲ್ಲಿ ಮಲಗಿದ್ದ ಮಂಗಲ್ ಸಿಂಗ್‌ಗೆ ಎಂಬ ವ್ಯಕ್ತಿಗೆ ಕಚ್ಚಿದೆ. ಮುಂಜಾನೆ 5 ಗಂಟೆಗೆ, ಪಿಟ್‌ಬುಲ್ ಮತ್ತೊಂದು ಗ್ರಾಮವನ್ನು ತಲುಪಿ,

ಬೆಳಗ್ಗೆ ವಾಕಿಂಗ್ ಮಾಡುವವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಪಿಟ್‌ಬುಲ್ ನಂತರ ಚುಹಾನ್ ಗ್ರಾಮದ ಕಡೆಗೆ ಓಡಿಹೋಗಿ ಮೈದಾನದಲ್ಲಿ ನಡೆಯುತ್ತಿದ್ದ ಕ್ಯಾಪ್ಟನ್ ಶಕ್ತಿ ಸಿಂಗ್ ಎಂಬ,

ನಿವೃತ್ತ ಸೇನಾಧಿಕಾರಿಯ ಮೇಲೆ ದಾಳಿ ಮಾಡಿ ಅವರ ಕೈಗೆ ತೀವ್ರವಾಗಿ ಗಾಯಗೊಳಿಸಿದೆ.

ಇದನ್ನೂ ಓದಿ : https://vijayatimes.com/bjp-slams-dks-siddaramaiah/

ಸಿಂಗ್ ನಾಯಿಯನ್ನು ಅದರ ಎರಡೂ ಕಿವಿಗಳನ್ನು ಬಲವಾಗಿ ಹಿಡಿದು, ನಾಯಿಯ ಬಾಯಿಗೆ ಕಡ್ಡಿ ತುರುಕಿದ್ದಾರೆ. ನಂತರ ಗ್ರಾಮಸ್ಥರು ಸಿಂಗ್ ಅವರ ರಕ್ಷಣೆಗೆ ಬಂದ ಬೆನ್ನಲ್ಲೇ, ಅವರೊಡನೆ ಸೇರಿಕೊಂಡು ನಾಯಿಯನ್ನು ಕೊಂದಿದ್ದಾರೆ.

ಗಾಯಾಳುಗಳನ್ನು ದೀನಾನಗರ ಮತ್ತು ಗುರುದಾಸ್‌ಪುರ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Exit mobile version