ವಿಚಿತ್ರ ಘಟನೆ ; ಇಲಿಗಳ ಹಿಡಿತದಿಂದ 5 ಲಕ್ಷ ಮೌಲ್ಯದ ಚಿನ್ನ ವಶ!

ಮುಂಬೈನ(Mumbai) ಗೋಕುಲಧಾಮ್ ಕಾಲೋನಿ(Gokuldham Colony) ಬಳಿಯ ಗಟಾರದಲ್ಲಿ ಇಲಿಗಳಿಂದ(Rats) 5 ಲಕ್ಷ ರೂಪಾಯಿ ಮೌಲ್ಯದ 10 ಟೋಲ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಬ್ ಇನ್ಸ್‌ಪೆಕ್ಟರ್(Sub Inspector) ಜಿ ಘಾರ್ಗೆ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಲವು ಇಲಿಗಳು ಕಸದ ರಾಶಿಯಿಂದ ಚಿನ್ನದ ಚೀಲವನ್ನು ಗಟಾರಕ್ಕೆ ತೆಗೆದುಕೊಂಡು ಹೋಗುತ್ತಿರುವುದನ್ನು ಸೆರೆಹಿಡಿದಿರುವ ಸಿಸಿಟಿವಿ ದೃಶ್ಯಾವಳಿಗಳನ್ನು(CCTV Footage) ಪರಿಶೀಲಿಸಿದ ನಂತರ ಪೊಲೀಸರು ಚಿನ್ನಾಭರಣಗಳನ್ನು ವಶಪಡಿಸಿಕೊಂಡ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ ಎಂದು ಎಸ್‌ಐ(SI) ಮಾಹಿತಿ ನೀಡಿದ್ದಾರೆ. ಪೊಲೀಸರ ಪ್ರಕಾರ, ಸುಂದರಿ ಎಂಬ ಮಹಿಳೆ ತನ್ನ ಮಗಳ ಮದುವೆ ಸಾಲ ತೀರಿಸಲು 10 ಟೋಲ ಚಿನ್ನಾಭರಣವನ್ನು(Tola Gold) ಅಡಮಾನ ಇಡಲು ಹೋಗುತ್ತಿದ್ದರು. ದಾರಿಯಲ್ಲಿ ಸುಂದರಿಯು ಚಿನ್ನವಿದ್ದ ಬ್ಯಾಗನ್ನು, ವಡಾಪಾವ್‌(Vadapav) ಇದ್ದ ಇನ್ನೊಂದು ಬ್ಯಾಗ್‌ ಎಂದು ಭಾವಿಸಿ ರಸ್ತೆಯಲ್ಲಿದ್ದ ಮಗುವಿನ ಕೈಗೆ ಆಭರಣದ ಬ್ಯಾಗ್‌ ಕೊಟ್ಟಿದ್ದಾರೆ.

ಬ್ಯಾಂಕ್ ತಲುಪಿದ ನಂತರ, ಅವರು ಮಗುವಿಗೆ ತಪ್ಪಾದ ಚೀಲವನ್ನು ನೀಡಿದ್ದಾನೆ ಎಂದು ಅರಿತಿದ್ದಾರೆ. ಬಳಿಕ ತಕ್ಷಣ ಸ್ಥಳಕ್ಕೆ ಧಾವಿಸಿ ನೋಡಿದರೆ ಸ್ಥಳದಲ್ಲಿ ಮಗು ಇರಲಿಲ್ಲ. ಕೂಡಲೇ ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದಿಂಡೋಶಿ ಪೊಲೀಸ್(Dindoshi Police) ತಂಡದ ಮುಖ್ಯಸ್ಥ ಸೂರಜ್ ರಾವುತ್(Suraj Rawath) ತಕ್ಷಣ ಈ ವಿಷಯದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಅಧಿಕಾರಿ ಸೂರಜ್ ರಾವುತ್ ಮಗು ಮತ್ತು ಅವರ ತಾಯಿಯನ್ನು ಗುರುತಿಸಿದ ಪ್ರದೇಶದಲ್ಲಿ ಸಿಸಿಟಿವಿ ಇದೆಯಾ ಎಂಬುನ್ನು ಪರಿಶೀಲಿಸಿ, ಬಳಿಕ ದೃಶ್ಯಗಳನ್ನು ಸ್ಕ್ಯಾನ್ ಮಾಡಿ ನೋಡಿದ್ದಾರೆ.

ಪೊಲೀಸರು ಮಹಿಳೆಯನ್ನು ಸಂಪರ್ಕಿಸಿದಾಗ, ವಡಾಪಾವು ಒಣಗಿತ್ತು ಅದಕ್ಕೆ ಕೊಟ್ಟೆ ಎಂದು ಹೇಳಿದರು. ಅದಕ್ಕೇ ಪೊಟ್ಟಣವನ್ನು ಕಸದ ರಾಶಿಗೆ ಎಸೆದರು ಎನ್ನಲಾಗಿದೆ. ಪೊಲೀಸರು ಆ ಕಸದ ರಾಶಿಯ ಬಳಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪೊಲೀಸರು ಹುಡುಕುತ್ತಿದ್ದ ಚೀಲದಲ್ಲಿ ಇಲಿ ಇರುವುದು ಪತ್ತೆಯಾಗಿದೆ. ಪೊಲೀಸರು ಇಲಿಯನ್ನು ಹಿಂಬಾಲಿಸಿಕೊಂಡು ಹೋದಾಗ, ಅದು ಸಮೀಪದ ಗಟಾರಿಗೆ ನುಗ್ಗಿದೆ. ಕೊನೆಗೆ ಪೊಲೀಸರಿಗೆ ಚಿನ್ನಾಭರಣಗಳಿದ್ದ ಬ್ಯಾಗ್ ಪತ್ತೆಯಾಗಿದೆ. ಆ ಬಳಿಕ ಅಷ್ಟು ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡು ಮಹಿಳೆಗೆ ನೀಡಿದ್ದಾರೆ.

Exit mobile version