ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ವಿವಿಧೆಡೆ ವಿದ್ಯುತ್‌ ವ್ಯತ್ಯಯ

power cut

ಬೆಂಗಳೂರು ಜ 25 : ಬೆಂಗಳೂರಿನಲ್ಲಿ ಹಲವೆಡೆ ವಿದ್ಯುತ್‌ ಲೈನ್‌ಗಳಲ್ಲಿ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಬೆಳಗ್ಗೆ 10 ರಿಂದ ಸಂಜೆ 5ರ ವರಗೆ ವಿದ್ಯುತ್‌ ವ್ಯತ್ಯಯ ವಾಗಲಿದೆ ಎಂದು ಬೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಜನವರಿ 25 ರಂದು ವಿದ್ಯುತ್‌ ವ್ಯತ್ಯಯವಾಗಲಿರುವ ಪ್ರದೇಶಗಳು :

ದಕ್ಷಿಣ ವಲಯದ ಚಿಕ್ಕಲಸಂದ್ರ, ಮಾರತ್ತಹಳ್ಳಿ, ಕಾವೇರಿ ಲೇಔಟ್, ಸ್ಪೈಸ್ ಗಾರ್ಡನ್, ಹೊರ ವರ್ತುಲ ರಸ್ತೆ, ಎಚ್‌ಎಸ್‌ಆರ್ ಲೇಔಟ್‌ನ 8 ಮತ್ತು 9ನೇ ಹಂತ ಮತ್ತು ಬೆಳ್ಳಂದೂರು ಮೇಲ್ಸೇತುವೆ ಸರ್ಜಾಪುರ ರಸ್ತೆಯವರೆಗೆ.

ಶಾಂತಿನಗರ, ಬಿಕಾಸಿಪುರ, ಇಸ್ರೋ ಲೇಔಟ್, ಸಿದ್ದಾಪುರ, ಸಾರಕ್ಕಿ ಮಾರುಕಟ್ಟೆ, ಬನಶಂಕರಿ 2ನೇ ಹಂತ, ಸಿದ್ದಣ್ಣ ಲೇಔಟ್, ಕಿಮ್ಸ್ ಕಾಲೇಜು ರಸ್ತೆ, ಹನುಮಗಿರಿ ಲೇಔಟ್, ವಿನಾಯಕ ಲೇಔಟ್, ತುಳಸಿ ಥಿಯೇಟರ್ ರಸ್ತೆ, ಗಾಂಧಿನಗರ ರಸ್ತೆ, ಕಾಳೇನ ಅಗ್ರಹಾರ, ಜೆಪಿ ನಗರ1 ರಿಂದ 5 ಹಂತಗಳು.

ಪಶ್ಚಿಮ ವಲಯದಲ್ಲಿ ಚಾಮುಂಡಿ ನಗರ, ಗಾಂಧಿಬಜಾರ್‌, ಬಿಎಚ್‌ಇಎಲ್‌ ಲೇಔಟ್‌, ವಿದ್ಯಾಪೀಠ ರಸ್ತೆ, ಹೊಸಹಳ್ಳಿ ರಸ್ತೆ, ಬಿಡಿಎ ಕಾಲೋನಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ತೊಂದರೆಯಾಗಲಿದೆ.

ಪೂರ್ವ ವಲಯದ ಸುದ್ದಗುಂಟೆ ಪಾಳ್ಯ, ಕೆ.ಜಿ.ಪುರ ಮುಖ್ಯರಸ್ತೆ, ಥಣಿಸಂದ್ರ ಮುಖ್ಯರಸ್ತೆ ಮತ್ತು ಗಾಯತ್ರಿ ಲೇಔಟ್‌ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಉತ್ತರ ವಲಯದಲ್ಲಿ ನ್ಯೂ ಬಿಇಎಲ್ ರಸ್ತೆ, ಮತ್ತಿಕೆರೆ ಮುಖ್ಯರಸ್ತೆ, ಹೆಸರಘಟ್ಟ ಮುಖ್ಯರಸ್ತೆ, ಕೆಎಚ್‌ಬಿ ಕಾಲೋನಿ, ಜಕ್ಕೂರು ಮುಖ್ಯರಸ್ತೆ, ಆರ್‌ಟಿ ನಗರ ಮತ್ತು ನೃಪತುಂಗ ರಸ್ತೆ, ನಾರಾಯಣಪುರ ಮತ್ತು ಶೋಭಾ ಕ್ರಿಸಾಂಥೆಮಮ್ ಅಪಾರ್ಟ್‌ ಮೆಂಟ್‌ ನಲ್ಲಿ ಸಂಚಾರ ಸ್ಥಗಿತಗೊಳ್ಳಲಿದೆ.

ಜನವರಿ 26 ರಂದು ವಿದ್ಯುತ್ ವ್ಯತ್ಯಯವಾಗಕಿರುವ ಪ್ರದೇಶಗಳು

ಉತ್ತರ ವಲಯದಲ್ಲಿ ಸುಂದರ್ ನಗರ, ಬಿಇಎಲ್ ಇಂಡಸ್ಟ್ರಿಯಲ್ ಎಸ್ಟೇಟ್, ಬಾಗಲೂರು ಮುಖ್ಯರಸ್ತೆ, ಮಾರುತಿ ನಗರ, ದ್ವಾರಕಾ ನಗರ ಮತ್ತು ವಿವೇಕ್ ಮಾರ್ವೆಲ್ಸ್ ಅಪಾರ್ಟ್‌ ಮೆಂಟ್ ಸೇರಿದಂತೆ ಆಯಾ ನಿಲ್ದಾಣಗಳಲ್ಲಿ ನಿರ್ವಹಣಾ ಕಾಮಗಾರಿಯಿಂದ ತೊಂದರೆಯಾಗಲಿದೆ. ಇಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತಗೊಳ್ಳುವ ನಿರೀಕ್ಷೆಯಿದೆ.

ಇಸ್ರೋ ಲೇಔಟ್, 24 ನೇ ಮುಖ್ಯ ಜೆಪಿ ನಗರ, ಲಕ್ಷ್ಮಿ ರಸ್ತೆ ಕುಮಾರಸ್ವಾಮಿ ಲೇಔಟ್ ಮತ್ತು ದೊಡ್ಡಕಮ್ಮನಹಳ್ಳಿ ಸೇರಿವೆ. ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತವಾಗಲಿದೆ.



Exit mobile version