ಲೋಕಸಮರ 2024: ಮತದಾನ ನಡೆಯುವ ದಿನ ರಾಜ್ಯಾದ್ಯಂತ ಸಾರ್ವತ್ರಿಕ ರಜೆ

Bengaluru: ಮುಂಬರುವ ಲೋಕಸಭಾ ಚುನಾವಣೆಯ (Loksabha Election) ಮತದಾನ ನಡೆಯುವ ದಿನದಂದು (Public Holiday In Kar) ಸಾರ್ವತ್ರಿಕ ರಜೆಯನ್ನು ಘೊಷಣೆ ಮಾಡಲಾಗಿದೆ.

ರಾಜ್ಯದಲ್ಲಿ 2 ಹಂತಗಳಲ್ಲಿ ಮತದಾನ ನಡೆಯಲಿದ್ದು, ಚುನಾವಣೆ ನಡೆಯುವ ಎರಡೂ ದಿನವೂ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.

ಇನ್ನು ರಾಜ್ಯದಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ (April) 26 ಹಾಗೂ 2ನೇ ಹಂತದ ಮತದಾನ ಮೇ 7 ರಂದು ನಡೆಯಲಿದ್ದು, ಈ ಎರಡೂ ದಿನಗಳಂದು, ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳು,

ಶಾಲಾ-ಕಾಲೇಜುಗಳು, ಸಂಘ-ಸಂಸ್ಥೆಗಳು, ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು, ಕೈಗಾರಿಕೆಗಳು ಸೇರಿದಂತೆ ಎಲ್ಲಾ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ

ನೌಕರರಿಗೆ ವೇತನ ಸಹಿತ ರಜೆ ಘೋಷಣೆ ಮಾಡಿರುವುದಾಗಿ (Public Holiday In Kar) ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಭುತ್ವದ ಈ ಹಬ್ಬದಂದು ಪ್ರತಿಯೊನ್ನ ಪ್ರಜೆಯೂ ಮತದಾನ ಮಾಡಲಿ ಎಂಬ ಉದ್ದೇಶದಿಂದ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. ಹೀಗಾಗಿ ಮತದಾರರು ಇದರ ಸದುಪಯೋಗವನ್ನು

ಪಡೆಸಿಕೊಳ್ಳಬೇಕೆಂದು ಕೋರಲಾಗಿದೆ.

1ನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳು :
ಚಿಕ್ಕಬಳ್ಳಾಪುರ, ಕೋಲಾರ (Kolar) ದಕ್ಷಿಣ ಕನ್ನಡ, ಚಿತ್ರದುರ್ಗ (SC), ತುಮಕೂರು, ಮಂಡ್ಯ, ಮೈಸೂರು, ಬೆಂಗಳೂರು ಉತ್ತರ ಚಾಮರಾಜನಗರ (SC), ಬೆಂಗಳೂರು ಗ್ರಾಮಾಂತರ, , ಬೆಂಗಳೂರು

ಕೇಂದ್ರ, ಉಡುಪಿ, ಚಿಕ್ಕಮಗಳೂರು, ಹಾಸನ, ಬೆಂಗಳೂರು ದಕ್ಷಿಣ, ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.

2ನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳು :
ಉತ್ತರ ಕನ್ನಡ, ದಾವಣಗೆರೆ,ವಿಜಯಪುರ (SC), ಕಲಬುರಗಿ (SC), ರಾಯಚೂರು (ST), ಬೀದರ್, ಕೊಪ್ಪಳ, ಬಳ್ಳಾರಿ (ST), ಹಾವೇರಿ, ಧಾರವಾಡ, ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಶಿವಮೊಗ್ಗ

ಲೋಕಸಭಾ ಕ್ಷೇತ್ರಗಳಿಗೆ ಮೇ 7 ರಂದು ಎರಡನೇ ಹಂತದ ಮತದಾನ ನಡೆಯಲಿದೆ.

ಮೊದಲ ಹಂತ
ನಾಮಪತ್ರ ಸಲ್ಲಿಕೆಗೆ ಕೊನೇ ದಿನ – ಏಪ್ರಿಲ್ 04
ನಾಮಪತ್ರ ಪರಿಶೀಲನೆ – ಏಪ್ರಿಲ್ 05
ನಾಮಪತ್ರ ಹಿಂಪಡೆಯಲು ಕೊನೆ ದಿನ – ಏಪ್ರಿಲ್ 08
ಮತದಾನ – ಏಪ್ರಿಲ್ 26
ಫಲಿತಾಂಶ – ಜೂನ್ 4

2ನೇ ಹಂತ
ಅಧಿಸೂಚನೆ ಪ್ರಕಟ – ಏಪ್ರಿಲ್ 12
ನಾಮಪತ್ರ ಸಲ್ಲಿಕೆಗೆ ಕೊನೆ ದಿನ – ಏಪ್ರಿಲ್ 19
ನಾಮಪತ್ರ ಪರಿಶೀಲನೆ – ಏಪ್ರಿಲ್ 20
ನಾಮಪತ್ರ ಹಿಂಪಡೆಯಲು ಕೊನೆ ದಿನ – ಏಪ್ರಿಲ್ 22
ಮತದಾನ – ಮೇ 7
ಫಲಿತಾಂಶ – ಜೂನ್ 4

ಇದನ್ನು ಓದಿ: ಬಿರು ಬಿಸಿಲಿನಿಂದ ನಲುಗದಿರಲಿ ಸೌಂದರ್ಯ!

Exit mobile version