‘ಜೈಲರ್’ ಚಿತ್ರಕ್ಕಾಗಿ ರಜನಿ ಪಡೆದ ಸಂಭಾವನೆ ರಿವೀಲ್‌: ಶಿವಣ್ಣನಿಗೂ ಭರ್ಜರಿ ಸಂಭಾವನೆ..!

Jailar Movie : ಇದೇ ಆಗಸ್ಟ್ 10ರಂದು ಸೂಪರ್ ಸ್ಟಾರ್ ರಜನಿಕಾಂತ್ (Rajinikanth remuneration for Jailer) ಅಭಿನಯದ ‘ಜೈಲರ್’ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ರಜನಿಕಾಂತ್ ಅವರು ತಮ್ಮ 72 ವಯಸ್ಸಿನಲ್ಲಿ ಈ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಲೈವಾ ರಜನಿಕಾಂತ್ ‘ಜೈಲರ್’

(Jailer) ಚಿತ್ರಕ್ಕಾಗಿ ಭಾರೀ ಸಂಭಾವನೆಯನ್ನೇ ಪಡೆದಿದ್ದಾರೆ (Rajinikanth remuneration for Jailer) ಎನ್ನಲಾಗಿದೆ.


ಮೂಲಗಳ ಪ್ರಕಾರ, ತಲೈವಾ ರಜನಿಕಾಂತ್ ಈ ಚಿತ್ರಕ್ಕಾಗಿ 100 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ. ಈಗಲೇ ಅಪಾರ ಅಭಿಮಾನಿಗಳನ್ನು ಹೊಂದಿರುವ ರಜನಿಕಾಂತ್ ಅವರ ಚಿತ್ರಗಳು

ಚಿತ್ರಮಂದಿರಗಳಲ್ಲಿ ಭಾರೀ ಸದ್ದು ಮಾಡುತ್ತವೆ. ಹೀಗಾಗಿಯೇ ರಜನಿಕಾಂತ್ ತಮ್ಮ ಸಿನಿಮಾಗಳ ಮೂಲಕ ಬಾಕ್ಸ್ ಆಫೀಸ್ನಲ್ಲಿ (Box Office) ನೂರಾರು ಕೋಟಿ ರೂಪಾಯಿ ವ್ಯವಹಾರ ಮಾಡುತ್ತಾರೆ.

2023-24ನೇ ಸಾಲಿನ ಖಾಸಗಿ ಕೋಟಾದ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಶುಲ್ಕ ಹೆಚ್ಚಳ; ಎಷ್ಟು ಶುಲ್ಕ ಪಾವತಿ?

ರಜನಿಕಾಂತ್ ಸಿನಿಮಾಗಳು ಮೊದಲ ವಾರದಲ್ಲೇ ಹಾಕದ ಬಂಡವಾಳವನ್ನು ನಿರ್ಮಾಪಕರಿಗೆ ತಂದು ಕೊಡುತ್ತವೆ ಎಂಬ ಮಾತಿದೆ. ಹೀಗಾಗಿಯೇ ರಜನಿಕಾಂತ್ ಚಿತ್ರಗಳಿಗೆ ಈಗಲೂ ಉತ್ತಮ ಮಾರುಕಟ್ಟೆ ಇದೆ.


ಶಿವಣ್ಣಗೆ ಸಂಭಾವನೆ ಎಷ್ಟು?

‘ಜೈಲರ್’ ಚಿತ್ರ ಮಲ್ಟಿಸ್ಟಾರರ್ ಸಿನಿಮಾವಾಗಿದ್ದು, ಎಲ್ಲ ಭಾಷೆಯಿಂದಲೂ ಸ್ಟಾರ್ ನಟರು ಈ ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡದಿಂದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ (Shivarajkumar) ಕೂಡಾ

ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಈ ಚಿತ್ರದಲ್ಲಿ 15 ನಿಮಿಷ ಕಾಣಿಸಿಕೊಂಡಿರುವ ಶಿವಣ್ಣ ಸುಮಾರು 4 ಕೋಟಿ ಸಂಭಾವಣೆ ಪಡೆದುಕೊಂಡಿದ್ದಾರೆ. ಅದೇ ರೀತಿ ಮಲೆಯಾಳಿಯಂ ನಟ

ಮೋಹನ್ಲಾಲ್ಗೆ (Mohanlal) 8 ಕೋಟಿ ಸಂಭಾವನೆ ಸಂಭಾವನೆ ಕೊಟ್ಟಿದ್ದಾರೆ ಎನ್ನಲಾಗಿದೆ. ಹಾಗೆಯೇ, ಬಾಲಿವುಡ್ ನಟ ಜಾಕಿಶ್ರಾಫ್ ಕೂಡ 4 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರಂತೆ.


ಇನ್ನು ‘ನು ಕಾವಾಲಯ್ಯ…’ ಹಾಡಿನ ಮೂಲಕ ಸದ್ದು ಮಾಡಿರುವ ತಮನ್ನಾಗೆ ಸಿಕ್ಕಿರುವ ಸಂಭಾವನೆ 3 ಕೋಟಿ ರೂಪಾಯಿ. ಇನ್ನು ಖ್ಯಾತ ಹಾಸ್ಯ ನಟ ಯೋಗಿ ಬಾಬು (Yogi Babu) 1 ಕೋಟಿ ರೂಪಾಯಿ

ಸಂಭಾವಣೆ ಪಡೆದುಕೊಂಡಿದ್ದರೆ, ಸಾಕಷ್ಟು ದಿನಗಳ ನಂತರ ಮತ್ತೆ ಬಣ್ಣ ಹಚ್ಚಿರುವ ಹಿರಿಯ ನಟಿ ರಮ್ಯಾಕೃಣ್ಣ 80 ಲಕ್ಷ ರೂಪಾಯಿ ಸಂಭಾವನೆ ಪಡೆದಕೊಂಡಿದ್ದಾರೆ.

ಸನ್ ಪಿಕ್ಚರ್ಸ್ (Sun Pictures) ನಿರ್ಮಾಣ ಮಾಡಿರುವ ‘ಜೈಲರ್’ ಚಿತ್ರವು ಬಹುಭಾಷೆಯಲ್ಲಿ ತೆರೆಗೆ ಬರಲಿದೆ. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ (Nelson Dilip Kumar) ‘ಜೈಲರ್’ಗೆ ಆಕ್ಷನ್-ಕಟ್ ಹೇಳಿದ್ದಾರೆ.

Exit mobile version