ರಾಕೇಶ್ ಟೀಕಾಯ್ತಗೆ ಮಸಿ ಬಳೆದು, ಪರಸ್ಪರ ಚೇರು,ಟೇಬಲ್ ಬೀಸಿ ಒಡೆದಾಟ!

ಸೋಮವಾರ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ(Bengaluru Press Club) ಭಾರತ್ ಕಿಸಾನ್(Bharath Kisan) ರೈತ ಮಾಜಿ ಮುಖಂಡ ರಾಕೇಶ್ ಟಿಕಾಯತ್(Rakesh Tikait) ಮೇಲೆ ದುಷ್ಕರ್ಮಿಗಳು ಕಪ್ಪು ಮಸಿ ಬಳೆದು ಆಕ್ರೋಶ ಹೊರಹಾಕಿದ್ದಾರೆ.

ಉತ್ತರ ಪ್ರದೇಶದ(UttarPradesh) ಭಾರತೀಯ ಕಿಸಾನ್ ಒಕ್ಕೂಟದ ಮಾಜಿ ರಾಷ್ಟ್ರೀಯ ವಕ್ತಾರರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಒಳ ನುಗ್ಗಿ ಮುಖದ ಮೇಲೆ ಮಸಿ ಬಳೆದು ಕಿತ್ತಾಡಿದ್ದಾರೆ. ದುಷ್ಕರ್ಮಿಗಳು ಸ್ಥಳೀಯ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್(Kodihalli Chandrashekar) ಬೆಂಬಲಿಗರು ಎಂದು ತಿಳಿಯಲಾಗಿದೆ. ಈ ಹಿಂದೆ, ಪ್ರಾದೇಶಿಕ ಸುದ್ದಿ ವಾಹಿನಿಯೊಂದು ಸ್ಥಳೀಯ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, “ಬಸ್ ಮುಷ್ಕರವನ್ನು ಹಿಂತೆಗೆದುಕೊಳ್ಳಲು ನಾವು ಹಣ ಕೇಳಿದ್ದೇವೆ” ಎಂದು ಉಲ್ಲೇಖಿಸಿತ್ತು.

ಚಂದ್ರಶೇಖರ್ ಅವರು ಟಿಕಾಯತ್ ಮತ್ತು ಅನೇಕ ಕೇಂದ್ರ ರೈತ ನಾಯಕರ ಹೆಸರನ್ನು ಬಳಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ಟಿಕಾಯತ್, “ಕೋಡಿಹಳ್ಳಿ ಚಂದ್ರಶೇಖರ್ ನಮ್ಮ ಹೆಸರನ್ನು ಬಳಸುತ್ತಾರೆ ಮತ್ತು ಅವರು ವಂಚಕರಾಗಿದ್ದಾರೆ” ಎಂದು ಹೇಳಿಕೆ ನೀಡಿದರು. ಈ ಹೇಳಿಕೆ ನೀಡುತ್ತಿದ್ದಂತೆ, ಕೋಪಗೊಂಡ ಚಂದ್ರಶೇಖರ್ ಬೆಂಬಲಿಗರು ಟಿಕಾಯತ್ ಅವರ ಮೇಲೆ ಮಸಿ ಎರಚಿ, ಸ್ಥಳದಲ್ಲಿದ್ದ ಚೇರ್ ಮತ್ತು ಟೇಬಲ್ ಎಸೆದು ಬಡಿದಾಡಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿ ಟಿಕಾಯತ್, “ಇಲ್ಲಿ ಸ್ಥಳೀಯ ಪೊಲೀಸರು ಯಾವುದೇ ಭದ್ರತೆಯನ್ನು ಒದಗಿಸಿಲ್ಲ. ಇದನ್ನು ಸರ್ಕಾರದ ಜೊತೆ ಶಾಮೀಲಾಗಿ ಮಾಡಲಾಗಿದೆ” ಎಂದು ಆರೋಪಿಸಿದ್ದಾರೆ.

Exit mobile version